ರಾಷ್ಟ್ರೀಯ ಮಟ್ಟದ ಸಮ್ಮೇಳನಕ್ಕೆ ಅಸಾದಿ..!
– ತೀರ್ಥಹಳ್ಳಿ ಪ.ಪಂ. ಅಧ್ಯಕ್ಷ ಅಸಾದಿ ಆಯ್ಕೆ: ಅಭಿನಂದನೆಗಳು
– ಹರಿಯಾಣದ ಗುರುಗ್ರಾಮದಲ್ಲಿ ನಡೆಯಲಿರುವ ಸಮ್ಮೇಳನ
NAMMUR EXPRESS NEWS
ತೀರ್ಥಹಳ್ಳಿ: ಜುಲೈ 3 ರಿಂದ 4ರವರೆಗೆ ಎರಡು ದಿನಗಳ ಚುನಾಯಿತ ಮೇಯರ್‌ಗಳು/ಅಧ್ಯಕ್ಷರ ಉಪ ನಿಯೋಜಿತ ಸಮ್ಮೆಳನವನ್ನು ಹರಿಯಾಣದ ಗುರುಗ್ರಾಮದಲ್ಲಿ ಆಯೋಜಿಸಲಾಗಿದ್ದು ಈ ರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ತೀರ್ಥಹಳ್ಳಿ ಪ.ಪಂ. ಅಧ್ಯಕ್ಷ ಅಸಾದಿ ಆಯ್ಕೆ ಆಗಿದ್ದು ಅವರು ಪಾಲ್ಗೊಳ್ಳಲಿದ್ದಾರೆ.
ಸಮ್ಮೇಳನದ ಮುಖ್ಯ ವಿಷಯವಾದ ” ಸಾಂವಿಧಾನಿಕ ಪ್ರಜಾಪ್ರಭುತ್ವ ಮತ್ತು ರಾಷ್ಟ್ರ ನಿರ್ಮಾಣವನ್ನು ಬಲಪಡಿಸುವಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪಾತ್ರ ಬಗ್ಗೆ ಚರ್ಚೆ ಹಮ್ಮಿಕೊಳ್ಳಲಾಗಿದೆ.
ಸಮ್ಮೆಳವನ್ನುದ್ದೇಶಿಸಿ ಈಗಾಗಲೇ ಲೋಕಸಭೆಯ ಪ್ರಧಾನ ಕಾರ್ಯದರ್ಶಿಯವರ ಕಛೇರಿಯಿಂದ ಆಹ್ವಾನಪತ್ರ ಹೊರಡಿಸಿದ್ದು ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ದೇಶದ ಎಲ್ಲಾ ನಗರಗಳಲ್ಲಿನ ಮೇಯರ್ ಮತ್ತು ಅಧ್ಯಕ್ಷ ಹುದ್ದೆಗಳನ್ನು ಅಲಂಕರಿಸಿರುವ ಚುನಾಯಿತ ಪ್ರತಿನಿಧಿಗಳು ಮುಖ್ಯವಾಗಿ ಭಾಗವಹಿಸಲಿದ್ದಾರೆ.
ಪೌರಾಡಳಿತ ನಿರ್ದೇಶನಾಲಯದ ಸಹಾಯಕ ನಿರ್ದೇಶಕ (ಅಭಿವೃದ್ಧಿ) ಶ್ರೀ ಅಮಿತ್ ತರದಲೆ ಅವರನ್ನು ಲೋಕಸಭಾ ಸಚಿವಾಲಯದೊಂದಿಗೆ ಸಮನ್ವಯಕ್ಕಾಗಿ ನೋಡಲ್ ಅಧಿಕಾರಿಯಾಗಿ ನಾಮನಿರ್ದೇಶನ ಮಾಡಲಾಗಿದೆ. ತೀರ್ಥಹಳ್ಳಿ ಪಟ್ಟಣ ಆಡಳಿತದಲ್ಲಿ ಹಲವು ಅಭಿವೃದ್ಧಿ ಕಾರ್ಯ ಮಾಡುತ್ತಿರುವ ಅಸಾದಿ ಅವರಿಗೆ ಅಭಿನಂದನೆಗಳು.
