Categories
ಅಪರಾಧ ತೀರ್ಥಹಳ್ಳಿ ರಾಜ್ಯ

ಚಿನ್ನ, ಹಣಕ್ಕಾಗಿ ಅಧಿಕಾರಿ ಪ್ರತಿಮಾ ಕೊಲೆ!

ಚಿನ್ನ, ಹಣಕ್ಕಾಗಿ ಅಧಿಕಾರಿ ಪ್ರತಿಮಾ ಕೊಲೆ!
– ತೀರ್ಥಹಳ್ಳಿ ಮೂಲದ ಗಣಿ ಇಲಾಖೆ ಅಧಿಕಾರಿ ಕೊಲೆ ರಹಸ್ಯ
– ಆರೋಪಿಯಿಂದ ಹಣ, ಚಿನ್ನ ವಶ: ಪೊಲೀಸ್ ವರದಿ ಏನು?

NAMMUR EXPRESS NEWS
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದೆ. ವಿಚಾರಣೆ ವೇಳೆ ಆರೋಪಿ ಕಿರಣ್ ಹಣ ಹಾಗೂ ಚಿನ್ನಾಭರಣಕ್ಕಾಗಿ ಪ್ರತಿಮಾರನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಆರೋಪಿ ಕಿರಣ್ ಪ್ರತಿಮಾ ಕೊಲೆಗೆ ಸಂಚು ರೂಪಿಸಿ ಮನೆಗೆ ನುಗ್ಗಿ ಅವರನ್ನು ಕೊಲೆ ಮಾಡಿದ್ದು, ಬಳಿಕ ಮನೆಯಲ್ಲಿದ್ದ ಹಣ, ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದನು. ಆರೋಪಿ 5 ಲಕ್ಷ ರೂ. ನಗದು, 3 ರಿಂದ 4 ಲಕ್ಷ ಮೌಲ್ಯದ 2 ಚಿನ್ನದ ಬಳೆ, ಬ್ರೇಸ್ ಲೇಟ್ ಅನ್ನು ಕಳವು ಮಾಡಿದ್ದನು. ಆರೋಪಿ ಕಿರಣ್ ಕಳವು ಮಾಡಿದ ಹಣವನ್ನು ಕೋಣನಕುಂಟೆ ಬಳಿಯ ತನ್ನ ಗೆಳೆಯ ಶಿವು ಕೈಯಲ್ಲಿ ಕೊಟ್ಟು ಈ ಹಣ ನಿನ್ನ ಮನೆಯಲ್ಲಿ ಇರಲಿ, ನಾನು ಮಲೆ ಮಹದೇಶ್ವರ ಬೆಟ್ಟ ಹೋಗಿ ಬಂದ ಮೇಲೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿ ಇಟ್ಟಿದ್ದಾನೆ.

ಆರೋಪಿಯು ಶಿವುಗೆ ಹಣ, ಚಿನ್ನ ತಂದು ಕೊಟ್ಟಿದ್ದು ಸ್ಪಷ್ಟವಾಗಿರುವುದರಿಂದ ಪೊಲೀಸರು ಶಿವು ಅನ್ನು ಸಾಕ್ಷಿಯಾಗಿ ಮಾಡಿದ್ದಾರೆ. ಇನ್ನು ಆರೋಪಿ ಕಳವುಗೈದಿದ್ದ ಐದು ಲಕ್ಷ ನಗದು ಮತ್ತು ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಹಣ, ಚಿನ್ನಾಭರಣ ಕಳವು ಮಾಡುವ ಉದ್ದೇಶದಿಂದ ಈ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.