Categories
ಮಲ್ನಾಡ್

ಮಲೆನಾಡಲ್ಲಿ ಬೆಳೆದು ನಿಂತ ಭತ್ತದ ಪೈರು.!

ಮಲೆನಾಡಲ್ಲಿ ಬೆಳೆದು ನಿಂತ ಭತ್ತದ ಪೈರು.!
– ಭತ್ತದ ಕೊಯ್ಲಿಗೆ ಸಿದ್ಧವಾಗುತ್ತಿರುವ ರೈತರು
– ಅಡಿಕೆ ಕೊಯ್ಲು ಜೊತೆ ಜೊತೆ ಭತ್ತದ ಫಸಲು

NAMMUR EXPRESS NEWS
ಮಲೆನಾಡು: ಪ್ರಪಂಚದಾದ್ಯಂತದ ಶತಕೋಟಿ ಜನರಿಗೆ ಅಕ್ಕಿ ಒಂದು ಪ್ರಮುಖ ಪ್ರಧಾನ ಆಹಾರವಾಗಿದೆ. ಮಳೆಗಾಲದಲ್ಲಿ ಭತ್ತ ಬಿತ್ತನೆ ಮಾಡಿದ್ದು, ಈಗ ಭತ್ತದ ಗದ್ದೆಗಳು ಕೊಯ್ಲಿಗೆ ಬರುತ್ತಿವೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು, ಕರಾವಳಿ ಸೇರಿ ಮಲೆನಾಡಿನಲ್ಲಿ ರೈತರು ಉತ್ಸಾಹದಿಂದ ಅಡಿಕೆ ಕೊಯ್ಲು ಮುಗಿಸುತ್ತಿದ್ದಾರೆ. ನೀರಿನ ಬರದ ನಡುವೆಯೂ ಮಲೆನಾಡಿನಲ್ಲಿ ಭತ್ತದ ಪೈರು ಭರ್ಜರಿಯಾಗಿ ಬೆಳೆದು ನಿಂತಿದ್ದು ಎಲ್ಲೆಡೆ ಅಡಿಕೆ ಕೊಯ್ಲು ಮುಗಿಯುತ್ತಿದ್ದಂತೆ ತಾವು ನಾಟಿ ಮಾಡಿದ ಭತ್ತವನ್ನು ಕಟಾವು ಮಾಡಲು ಸಿದ್ದರಾಗುತ್ತಿದ್ದಾರೆ. ಒಟ್ಟಿನಲ್ಲಿ ಮಲೆನಾಡಿನ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಹೀಗಾಗಿ ಒಂದು ತಿಂಗಳು ಕೃಷಿ ವೇಗ ಪಡೆದುಕೊಳ್ಳಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.