Categories
ರಾಜ್ಯ

ಪಿಯುಸಿಯಲ್ಲಿ ಸಾಲು ಸಾಲು ವಿದ್ಯಾರ್ಥಿನಿಯರ ಸಾಧನೆ!

ಪಿಯುಸಿಯಲ್ಲಿ ಸಾಲು ಸಾಲು ವಿದ್ಯಾರ್ಥಿನಿಯರ ಸಾಧನೆ!

– ಇನ್‌ವರ್ಟ‌ರ್ ರಿಪೇರಿಯವರ ಮಗಳು ದೀಪಶ್ರೀ  ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌!

ಮಂಗಳೂರು: ನಾನು ಸಿಎ ಆಗುವ ಗುರಿಯನ್ನಿರಿಸಿಕೊಂಡು ಪಿಯುಸಿಯಲ್ಲಿ ವಾಣಿಜ್ಯ ವಿಭಾಗವನ್ನು ಆಯ್ದುಕೊಂಡಿದ್ದೆ. 595 ಕ್ಕಿಂತ ಹೆಚ್ಚಿನ ಅಂಕ ಪಡೆಯುವ ನಿರೀಕ್ಷೆ ಇತ್ತು. ಆದರೆ ಪ್ರಥಮ ರ‍್ಯಾಂಕ್‌ ಬರುತ್ತದೆ ಅಂದುಕೊಂಡಿರಲಿಲ್ಲ’ ಎನ್ನುತ್ತಾರೆ ಕೆನರಾ ಪಿಯು ಕಾಲೇಜು ವಿದ್ಯಾರ್ಥಿನಿ ದೀಪಶ್ರೀ.
ದೀಪಶ್ರೀ 2024-2025ರ ಸಾಲಿನ ಪಿಯು ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 599 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಬಿಕರ್ನಕಟ್ಟೆಯ ವಾಸಿ ಗೃಹಿಣಿ ಸುಮಾ ಮತ್ತು ಇನ್‌ವರ್ಟ‌ರ್ ಸರ್ವಿಸ್ ವೃತ್ತಿಯಲ್ಲಿರುವ ಅಶೋಕ್ ದಂಪತಿಯ ಪುತ್ರಿ ದೀಪಶ್ರೀಯವರು ಎಸೆಸೆಲ್ಸಿಯಲ್ಲಿ ಕೂಡಾ ಉನ್ನತ ಸಾಧನೆ ಮಾಡಿದ್ದು, ಅವರು ಶೇ. 98.24 ಅಂಕಗಳನ್ನು ಗಳಿಸಿದ್ದರು.

– ಕಾರ್ಕಳದ ಜ್ಞಾನ ಸುಧಾ ವಿದ್ಯಾರ್ಥಿನಿ ಆಸ್ತಿ ಎಸ್. ಶೆಟ್ಟಿ ರಾಜ್ಯಕ್ಕೆ 4ನೇ ರ‍್ಯಾಂಕ್‌ ಜಿಲ್ಲೆಗೆ ಪ್ರಥಮ!

ಕಾರ್ಕಳ:ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ, ಕಾರ್ಕಳ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿನಿ ಆಸ್ತಿ ಎಸ್. ಶೆಟ್ಟಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದು, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.
596 ಅಂಕದೊಂದಿಗೆ ವಿಜ್ಞಾನ ವಿಭಾಗದಲ್ಲಿ ಆಕೆ ನಾಲ್ಕನೇ ರ‍್ಯಾಂಕ್‌ ಪಡೆದಿದ್ದಾರೆ. ಆಸ್ತಿ ಎಸ್. ಶೆಟ್ಟಿ ಕಾರ್ಕಳ ಜೋಡುರಸ್ತೆಯ ಸತೀಶ್‌ಚಂದ್ರ ಶೆಟ್ಟಿ ಮತ್ತು ಅನುಪಮಾ ದಂಪತಿಯ ಪುತ್ರಿ.

– ಪುತ್ತೂರು ಮೂಲದ ಮುಸ್ಲಿಂ ವಿದ್ಯಾರ್ಥಿನಿಗೆ ಸಂಸ್ಕೃತದಲ್ಲಿ 96 ಅಂಕ!!

ಪುತ್ತೂರು: ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ 100 ಕ್ಕೆ 96 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಆಶಿಫಾ ಹುಸೈನ್ ಎಂಬ ವಿದ್ಯಾರ್ಥಿನಿ ಈ ಸಾಧನೆಯನ್ನು ಮಾಡಿದ್ದಾರೆ. ಅವರು ಬೆಂಗಳೂರಿನ ನಾರಾಯಣ ಟೆಕ್ನೋ ಸ್ಕೂಲ್‌ನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ ಓದಿದ್ದು, ದ್ವಿತೀಯ ಪಿಯುಸಿಯಲ್ಲಿ ಒಟ್ಟು 563 ಅಂಕ ಗಳಿಸಿದ್ದಾಳೆ. ಇವರು ಸಂಸ್ಕೃತವನ್ನು ದ್ವಿತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದರು.
ಅಂದಹಾಗೆ ಆಶಿಫಾ ಮೂಲತಃ ಪುತ್ತೂರು ತಾಲೂಕಿನ ಕಾವು ಅಮ್ಚಿನಡ್ಕ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ಕೇಂದ್ರ ಸಂಪರ್ಕ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಖೈರುನ್ನೀಸಾ ಮತ್ತು ಜಾಕಿರ್ ದಂಪತಿಯ ಮಗಳಾಗಿದ್ದಾಳೆ.

– ಜಿಲ್ಲೆಗೆ ಪ್ರಥಮ ರ‍್ಯಾಂಕ್‌ ಕ್ರೈಸ್ಟ್‌ಕಿಂಗ್‌ ವಾಣಿಜ್ಯ ವಿಭಾಗದ ಸುಧೀಕ್ಷಾ ಶೆಟ್ಟಿ!

ಕಾರ್ಕಳ: ಕಾರ್ಕಳದ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸುಧೀಕ್ಷಾ ಎಸ್. ಶೆಟ್ಟಿಯವರು 595 ಅಂಕಗಳನ್ನು ಪಡೆದುಕೊಂಡಿದ್ದು, ಉಡುಪಿ ಜಿಲ್ಲೆಗೆ ಪ್ರಥಮ ರ‍್ಯಾಂಕ್‌, ರಾಜ್ಯಮಟ್ಟದಲ್ಲಿ ಐದನೇ ಸ್ಥಾನ ಪಡೆದಿದ್ದಾರೆ.
ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಹೀಗೆ ನಾಲ್ಕೂ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದು,  ಕಾರ್ಕಳದ ನಿವಾಸಿ ಸುರೇಶ್ ಶೆಟ್ಟಿ ಹಾಗೂ ಸುದರ್ಶಿನಿ ಶೆಟ್ಟಿ ದಂಪತಿಗಳ ಮಗಳಾಗಿದ್ದಾರೆ.

– ಕಾರ್ಕಳ : ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನೀಯರು ಮಿಂಚಿಂಗ್!

ಕಾರ್ಕಳ : ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ, ಕಾರ್ಕಳದ ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಅನ್ನಪೂರ್ಣ ಕಾಮತ್ 593 ಅಂಕ, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 7ನೇ ರ‍್ಯಾಂಕ್‌ ಮತ್ತು ಕೀರ್ತನಾ 590 ಅಂಕ, ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 10ನೇ ರ‍್ಯಾಂಕ್‌ ಪಡೆದಿದ್ದಾರೆ.

– ಕೆ.ಎಂ.ಇ.ಎಸ್ ಪದವಿ ವಿದ್ಯಾರ್ಥಿಗಳ ಸಾಧನೆ!

ಕಾರ್ಕಳ:  ಕೆ.ಎಂ.ಇ.ಎಸ್. ಕಾಲೇಜಿನ 75 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ವಿಜ್ಞಾನ ವಿಭಾಗದಲ್ಲಿ 585 ಅಂಕ ಪಡೆದು ಪ್ರಥ್ವಿ ಆಚಾರ್ಯ ಮತ್ತು ವಾಣಿಜ್ಯ ವಿಭಾಗ 588 ಅಂಕ ಪಡೆದು ಶ್ರೇಷ್ಠ ಕೆ ಸಾಧನೆ ಮಾಡಿದ್ದಾರೆ.
578 ಅಂಕ ಪಡೆದ ಅಂಬಿಕ ದಾಮೋದರ್ ಪಟಾಗರ್ ಶಾಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿರುತ್ತಾರೆ ಮತ್ತು ಆಯೇಷ ಅಝೀನಾ ದ್ವಿತೀಯ ಸ್ಥಾನ.

– ಹೆಬ್ರಿ ಅಮೃತ ಭಾರತಿ ವಿದ್ಯಾರ್ಥಿನಿಯರು ರಾಜ್ಯಕ್ಕೆ ಮೇಲುಗೈ!

ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು  ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇಕಡಾ 100, ವಿಜ್ಞಾನ ವಿಭಾಗದಲ್ಲಿ ಶೇಕಡಾ 98.31 ಮೇಲುಗೈ ಸಾಧಿಸಿದ್ದಾರೆ.
ವಿಜ್ಞಾನ ವಿಭಾಗದ ಅನನ್ಯ ಕಾಮತ್ 597 ಅಂಕ ಪಡೆದು ರಾಜ್ಯಕ್ಕೆ 8ನೇ ರ‍್ಯಾಂಕ್‌ ಮತ್ತು ಶ್ರೀರಮ್ಯಾ ಪೈ 590 ಅಂಕ ಪಡೆದು ರಾಜ್ಯದಲ್ಲಿ 10ನೇ ರ‍್ಯಾಂಕ್‌ ಪಡೆದಿದ್ದಾರೆ.

– ರಾಜ್ಯದಲ್ಲಿ ಫಿಲೋಮಿನಾ ಪ ಪೂ ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ 4 ರ‍್ಯಾಂಕ್‌!

ಪುತ್ತೂರು: 2024 – 25ನೇ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರಿನ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿಗೆ ಶೇ. 94 ಫಲಿತಾಂಶ ಲಭಿಸಿದೆ ಮಾತ್ರವಲ್ಲ
ವಾಣಿಜ್ಯ ವಿಭಾಗದಲ್ಲಿ 4 ರ‍್ಯಾಂಕ್‌ ಗಳನ್ನು ತನ್ನದಾಗಿಸಿಕೊಂಡಿದೆ.
ಶೇಕಡ 95ಕ್ಕಿಂತ ಹೆಚ್ಚಿನ ಅಂಕಗಳನ್ನು ಈ ಬಾರಿ ಕಾಲೇಜಿನ 20 ಮಂದಿ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಎಂ ದೀಪಾ ನಾಯಕ್, ನೀತಿ ಎನ್. ಬಿ, ಫಿದಾ ಹಲೀಮ, ಅಧಿತಿ. ಡಿ 591ಅಂಕಗಳನ್ನು ಪಡೆದು ರಾಜ್ಯದಲ್ಲಿ 9ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಆಕಾಶ್ ಪಿ ಜೆ 588 ಮತ್ತು ಕಲಾ ವಿಭಾಗದಲ್ಲಿ ಧ್ರುವ ಜೆ ಭಂಡಾರಿಯವರು 562 ಅಂಕಗಳನ್ನು ಗಳಿಸಿ ಪ್ರಥಮರೆನಿಸಿಕೊಂಡಿದ್ದಾರೆ. 155 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 405 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.