Categories
ಶಿವಮೊಗ್ಗ

ಶಿವಮೊಗ್ಗ ಜಿಲ್ಲಾ ಟಾಪರ್ ಆಗಿ ಹೊರಹೊಮ್ಮಿದ ಪ್ರಜ್ವಲ್ ಹೆಚ್.ಪಿ

ಶಿವಮೊಗ್ಗ ಜಿಲ್ಲಾ ಟಾಪರ್ ಆಗಿ ಹೊರಹೊಮ್ಮಿದ ಪ್ರಜ್ವಲ್ ಹೆಚ್.ಪಿ
– 600 ಅಂಕಗಳಿಗೆ 594 ಅಂಕ ಗಳಿಸಿ ಶೇ.99 ರಷ್ಟು ಪಲಿತಾಂಶ
– ಮುಳುಗಡೆ ಗ್ರಾಮದ ಹುಡುಗ ಶಿವಮೊಗ್ಗ ಜಿಲ್ಲೆಗೆ ಟಾಪರ್ ಆಗಿರುವುದು ಹೆಮ್ಮೆ

NAMMUR EXPRESS NEWS
ಹೊಸನಗರ: ದ್ವಿತೀಯ ಪಿಯುಸಿ ಪಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲಾ ಟಾಪರ್ ಆಗಿ ಶಿವಮೊಗ್ಗ ನಗರದ ವಿಕಾಸ ವಿದ್ಯಾ ಸಂಸ್ಥೆ ವಿದ್ಯಾರ್ಥಿ ಪ್ರಜ್ವಲ ಹೆಚ್.ಪಿ. ಹೊರಹೊಮ್ಮಿದ್ದಾನೆ. ಹೊಸನಗರ ತಾಲೂಕು ಕರಿಮನೆ ಗ್ರಾಪಂ ವ್ಯಾಪ್ತಿಯ ಮಳಲಿ ಹಿರಿಮನೆ ನಿವಾಸಿ, ಶ್ರೀಮತಿ ಶೈಲಜಾ ಮತ್ತು ಪಾಂಡುರಂಗ ಗೌಡ ದಂಪತಿಗಳ ಪುತ್ರನಾದ ಪ್ರಜ್ವಲ್ 600 ಅಂಕಗಳಿಗೆ 594 ಅಂಕ ಗಳಿಸಿ ಶೇ.99 ರಷ್ಟು ಪಲಿತಾಂಶ ಸಾಧನೆ ಮಾಡಿದ್ದಾನೆ.

ಅರ್ಥಶಾಸ್ತ್ರದಲ್ಲಿ 100, ಬಿಜಿನೆಸ್ ಸ್ಟಡೀಸ್ 100, ಅಕೌಂಟೆನ್ಸಿಯಲ್ಲಿ 100 ಗಳಿಸಿದರೆ, ಸ್ಟಾಟಿಟಿಕ್ಸ್ ನಲ್ಲಿ 99, ಕನ್ನಡದಲ್ಲಿ 99, ಇಂಗ್ಲೀಷ್ ನಲ್ಲಿ 94 ಅಂಕಗಳಿಸಿದ್ದಾನೆ. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಜ್ವಲ್ ಪಿಯುಸಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿತು ಜಿಲ್ಲೆಗೆ ಟಾಪರ್ ಆಗಿರುವುದು ವಿಶೇಷ. ಮುಂದೆ ಐಎಎಸ್ ಮಾಡಬೇಕು ಹಂಬಲ ಹೊಂದಿರುವ ಪ್ರಜ್ವಲ್ ಸಾಧನೆಯನ್ನು ತಂದೆ ಪಾಂಡುರಂಗ, ತಾಯಿ ಶೈಲಜಾ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಾ.ಜಿ.ಸುಧಾಕರ್ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.