Categories
ರಾಜ್ಯ

5 ವರ್ಷ ನಾನೇ ಮುಖ್ಯಮಂತ್ರಿ ಎಂದ ಸಿದ್ದರಾಮಯ್ಯ!

ಟಾಪ್ 3 ನ್ಯೂಸ್ ಕರ್ನಾಟಕ

5 ವರ್ಷ ನಾನೇ ಮುಖ್ಯಮಂತ್ರಿ ಎಂದ ಸಿದ್ದರಾಮಯ್ಯ!
* ಚಿಕ್ಕಬಳ್ಳಾಪುರದಲ್ಲಿ ಸಿದ್ಧರಾಮಯ್ಯ ಹೇಳಿಕೆ

– ಹೃದಯಾಘಾತದ ಹೆಚ್ಚಳ ; ಜನರಲ್ಲಿ ಆತಂಕ: ಆಸ್ಪತ್ರೆ ಎದುರು ಸಾಲು!
– • ಹುಲಿಗಳ ಸಾವಿನ ಬೆನ್ನಲ್ಲೇ ಈಗ ಕೋತಿಗಳ ಮಾರಣ ಹೋಮ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಬಳ್ಳಾಪುರ: ನಂದಿ ಗ್ರಾಮದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ” ಬಿಜೆಪಿ ಅವರು ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ. ಬದಲಿಗೆ ಹಗಲುಗನಸು ಕಾಣುತ್ತಿದ್ದಾರೆ. ಸರ್ಕಾರದ ನಿರ್ಧಾರ ಹೈಕಮಾಂಡಿಗೆ ಬಿಟ್ಟ ವಿಚಾರ. ವಿರೋಧ ಪಕ್ಷದವರು ನಮ್ಮ ಹೈಕಮಾಂಡ್ ಅಲ್ಲ. ಎಲ್ಲೆಡೆ ಸುಳ್ಳು ಪ್ರಚಾರ ಮಾಡಿಕೊಂಡು ಓಡಾಡುತ್ತಿದ್ದಾರೆ ” ಎಂದು ಟೀಕಿಸಿದ್ದಾರೆ. ಐದು ವರ್ಷಗಳ ಕಾಲ ನಮ್ಮ ಪಕ್ಷ ಆಡಳಿತ ನಡೆಸಲಿದ್ದು, ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂಬ ಘೋಷಣೆಯನ್ನು ಮಾಡಿದ್ದಾರೆ.

ಹೃದಯಾಘಾತದ ಹೆಚ್ಚಳ ; ಜನರಲ್ಲಿ ಆತಂಕ: ಆಸ್ಪತ್ರೆ ಎದುರು ಸಾಲು!

ಮೈಸೂರು: ಹಾಸನದಲ್ಲಿ ಹೃದಯಾಘಾತ ಹೆಚ್ಚಳವಾದ ಹಿನ್ನೆಲೆಯಲ್ಲಿ ಮೈಸೂರಿನ ಜಯದೇವ ಆಸ್ಪತ್ರೆಯ ಮುಂದೆ ತಪಾಸಣೆ ಮಾಡಿಸಲು ಬಂದ ಹೊರರೋಗಿಗಳ ಸಂಖ್ಯೆ ಅಧಿಕವಾಗಿದೆ. ಮೈಸೂರು ಸೇರಿದಂತೆ ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳ ಜನರು ಮುಗಿಬಿದ್ದು, ತಪಾಸಣೆಗೆ ಒಳಪಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಪ್ರತಿದಿನ 150-200 ಜನ ಹೊರರೋಗಿಗಳು ಆಸ್ಪತ್ರೆಗೆ ಆಗಮಿಸಿ, ತೋರಿಸಿಕೊಳ್ಳುತ್ತಿದ್ದರು. ಆದರೆ, ಕಳೆದೆರಡು ದಿನಗಳಿಂದ ಈ ಸಂಖ್ಯೆ ಅಧಿಕಗೊಂಡಿದ್ದು ದಿನಕ್ಕೆ ಐನೂರರಿಂದ ಸಾವಿರ ಜನ ಆಗಮಿಸಿ, ಪರೀಕ್ಷೆಗೆ ಒಳಪಡುತ್ತಿದ್ದಾರೆ ಎನ್ನಲಾಗಿದೆ. ವಿಚಾರವನ್ನು ಕುರಿತು ಮಾತನಾಡಿದ ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ/ ಸದಾನಂದ ಅವರು ” ಕಳೆದೆರಡು ದಿನಗಳಿಂದ ಹೊರರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಅದರಲ್ಲೂ ಹಾಸನ ಜಿಲ್ಲೆಯಿಂದ ಬರುವವರೇ ಅಧಿಕ ಪ್ರಮಾಣದಲ್ಲಿದ್ದಾರೆ. ಇದರಲ್ಲಿ ಶೇಕಡಾ ತೊಂಭತ್ತು ಮಂದಿಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ.‌ ಕೇವಲ ಭಯಕ್ಕೆ ಒಳಪಟ್ಟು ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

* ಹುಲಿಗಳ ಸಾವಿನ ಬೆನ್ನಲ್ಲೇ ಈಗ ಕೋತಿಗಳ ಮಾರಣ ಹೋಮ

ಚಾಮರಾಜನಗರ: ಕಳೆದ ಕೆಲವು ದಿನಗಳ ಹಿಂದೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿಗಳ ಸಾವಿನ ಪ್ರಕರಣ ಬೆಳಕಿಗೆ ಬಂದಿದ್ದು. ಇದೀಗ ಕೋತಿಗಳ ಸರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಂದೇಗಾಲದ ಕೊಡೆಸೋಗೆ ರಸ್ತೆಯಲ್ಲಿ ಕೋತಿಗಳ ರಾಶಿ ರಾಶಿ ಕಳೇಬರ ಕಂಡುಬಂದಿದೆ. ವಿವಿಧ ಭಾಗಗಳಲ್ಲಿ ಸೆರೆಹಿಡಿದು ತಂದ ಕೋತಿಗಳಿಗೆ ವಿಷವಿಕ್ಕಿ ಕೊಂದಿರಬಹುದಾದ ಅನುಮಾನ ವ್ಯಕ್ತವಾಗಿದೆ. ಸುಮಾರು ಇಪ್ಪತ್ತೈದು ಕೋತಿಗಳು ಮೃತಪಟ್ಟಿದ್ದು, ಕಳೆಬರವನ್ನು ಒಂದೆಡೆ ಹಾಕಲಾಗಿದ್ದು, ಎರಡು ಕೋತಿಗಳು ಬದುಕುಳಿದ ಸಂಗತಿ ತಿಳಿದುಬಂದಿದೆ. ಸ್ಥಳಕ್ಕೆ ಬಫರ್ ವಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.