Categories
ತೀರ್ಥಹಳ್ಳಿ

ತೀರ್ಥಹಳ್ಳಿ ಭೂ ಬ್ಯಾಂಕ್ ಜಿಲ್ಲೆಗೆ ನಂ. 1

ತೀರ್ಥಹಳ್ಳಿ ಭೂ ಬ್ಯಾಂಕ್ ಜಿಲ್ಲೆಗೆ ನಂ. 1
– ಬಸವಾನಿ ವಿಜಯದೇವ್ ಸಾರಥ್ಯದಲ್ಲಿ ಒಟ್ಟು 54.73 ಲಕ್ಷ ಲಾಭ
– ಚೀಟಿ ನಿಧಿ – ಗ್ಯಾಸ್ – ಪೆಟ್ರೋಲ್ ಬಂಕ್ ಮುಂದಿನ ಅವಧಿಗೆ ಹೊಸ ಸೇರ್ಪಡೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಭೂ ಬ್ಯಾಂಕ್ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ಚೀಟಿ ನಿಧಿ – ಗ್ಯಾಸ್- ಪೆಟ್ರೋಲ್ ಬಂಕ್ ಮುಂದಿನ ಅವಧಿಗೆ ಹೊಸ ಉದ್ಯಮಗಳು ಸೇರ್ಪಡೆ ಆಗಲಿದೆ.
ಪಿ ಎಲ್ ಡಿ ಬ್ಯಾಂಕ್ ಆವರಣದಲ್ಲಿ ಬ್ಯಾಂಕಿನ ಅಧ್ಯಕ್ಷ ವಿಜಯದೇವ್, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಭಿವೃದ್ಧಿ ಬ್ಯಾಂಕ್‌ಗಳು ನಬಾರ್ಡ್‌ ಆರ್ಥಿಕ ನೆರವು ಕಡಿಮೆಯಾಗಿರುವುದರಿಂದ ಸೊರಗಿ ಹೋಗಿವೆ. ಅದರೆ ತೀರ್ಥಹಳ್ಳಿಯ ಭೂ ಬ್ಯಾಂಕ್ ಮಾತ್ರ ವ್ಯವಹಾರ, ಸಾಲ ವಿತರಣೆ, ಲಾಭಾಂಶ ಹಂಚಿಕೆ, ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸುವಲ್ಲಿ ನಿರತವಾಗಿದೆ. ಸುಮಾರು 85 ವರ್ಷಗಳ ಭವ್ಯ ಪರಂಪರೆ ಹಾಗೂ ಇತಿಹಾಸ ಹೊಂದಿರುವ ತೀರ್ಥಹಳ್ಳಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಭಿವೃದ್ಧಿ ಬ್ಯಾಂಕ್ ಅತ್ಯುತ್ತಮ ವ್ಯವಹಾರವನ್ನು ನಡೆಸಿ, ಈ ವರ್ಷವೂ ಸುಮಾರು 54 ಲಕ್ಷದ 73 ಸಾವಿರ ರೂಪಾಯಿ ಲಾಭಗಳಿಸಿ ಬ್ಯಾಂಕಿನ ಷೇರುದಾರರ ವಿಶ್ವಾಸವನ್ನು ಮತ್ತೊಮ್ಮೆ ದಾಖಲಿಸಿಕೊಂಡಿದೆ. ಅಲ್ಲದೆ ಈ ವರ್ಷವೂ ಸಹ ಶೇಕಡ 10ರ ಲಾಭಾಂಶವನ್ನು ಷೇರುದಾರ ಸದಸ್ಯರಿಗೆ ಹಂಚಿಕೆ ಮಾಡಲು ಬ್ಯಾಂಕ್ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದ್ದಾರೆ.

85 ವರ್ಷಕ್ಕೂ ಹಿಂದೆ ಸ್ಥಾಪನೆಯಾದ ಬ್ಯಾಂಕ್

ಸುಮಾರು 85 ವರ್ಷಕ್ಕೂ ಹಿಂದೆ ತೀರ್ಥಹಳ್ಳಿಯ ಅನೇಕ ಹಿರಿಯ ಸಹಕಾರಿಗಳ ನೆರವು, ಸಹಕಾರ ಹಾಗೂ ಪರಿಶ್ರಮದಿಂದ ಪ್ರಾರಂಭಗೊಂಡ ತೀರ್ಥಹಳ್ಳಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಭಿವೃದ್ಧಿ ಬ್ಯಾಂಕ್ ತಾಲ್ಲೂಕಿನ ಬಹುತೇಕ ರೈತರಿಗೆ ಸಕಾಲದಲ್ಲಿ ಸಾಲವನ್ನು ನೀಡಿ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಭದ್ರತೆ ನೀಡಿದೆ. ಹೊಸ ತೋಟ ನಿರ್ಮಿಸಲು, ಹಳೆಯ ತೋಟಗಳ ಅಭಿವೃದ್ಧಿ ಬೇಲಿ ನಿರ್ಮಿಸಲು ಕೊಟ್ಟಿಗೆ ನಿರ್ಮಾಣಕ್ಕೆ ಸಾಲ ನೀಡಿ ಅಗತ್ಯದ ಹಣಕಾಸು ಒದಗಿಸುವಲ್ಲಿ ಮುಂಚೂಣಿಯಲ್ಲಿತ್ತು. ತಾಲ್ಲೂಕಿನ ರೈತ ಸಮುದಾಯ ಇಂದು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ತೀರ್ಥಹಳ್ಳಿ ಭೂ ಬ್ಯಾಂಕ್ ಕೊಡುಗೆ ಬಹು ದೊಡ್ಡದಾಗಿದೆ.
ಶಿವಮೊಗ್ಗ ಜಿಲ್ಲೆಯ ಕಳೆದ ಹಲವು ವರ್ಷಗಳಿಂದ ಪ್ರಥಮ ಸ್ಥಾನದಲ್ಲಿರುವ ತೀರ್ಥಹಳ್ಳಿ ಬ್ಯಾಂಕ್, ರಾಜ್ಯ ಮಟ್ಟದಲ್ಲೂ ಅತ್ಯುತ್ತಮ ಬ್ಯಾಂಕುಗಳಲ್ಲಿ ಒಂದಾಗಿದ್ದು ನಬಾರ್ಡ್ ಪುರಸ್ಕೃತ ಪ್ರಾಥಮಿಕ, ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನು ನಿರಂತರ ಉಳಿಸಿಕೊಂಡು ಬಂದಿದೆ
ಕಳೆದ ಸುಮಾರು 10 ವರ್ಷಗಳಿಂದ ತೀರ್ಥಹಳ್ಳಿ ಭೂ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಬಸವಾನಿ ವಿಜಯದೇವ್ ಸರ್ಕಾರದ ಆರ್ಥಿಕ ನೆರವು ಇಲ್ಲದಿದ್ದರೂ ಆರ್ಥಿಕ ಸಂಕಷ್ಟದಿಂದ ಬ್ಯಾಂಕ್ ಅನ್ನು ಮೇಲೆತ್ತುವಲ್ಲಿ ಅಪಾರ ಶ್ರಮ ತೋರಿದ್ದಾರೆ. ತೀರ್ಥಹಳ್ಳಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ಮಾತ್ರ ಉತ್ತಮ ವ್ಯವಹಾರ, ಲಾಭ ಹಂಚಿಕೆ, ಸಾಲ ವಿತರಣೆ, ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಅನುಷ್ಟಾನಗೊಳಿಸುವಲ್ಲಿ ವಿಶೇಷ ಶ್ರಮ ತೋರಿದ್ದಾರೆ. ಇಂದು ಬಸವಾನಿ ವಿಜಯದೇವ್‌ರವರ ಬ್ಯಾಂಕಿನ ಬಗೆಗಿನ ಕಾಳಜಿ ಬದ್ಧತೆ ಕಾರಣವಾಗಿದೆ. ಪ್ರಕೃತಿ ವೈಪರೀತ್ಯ, ಅನಾವೃಷ್ಟಿ, ಕೊಳೆರೋಗ ಮತ್ತು ಎಲೆಚುಕ್ಕಿ ರೋಗದಂತಹ ಸಮಸ್ಯೆಯಿಂದ ಆರ್ಥಿಕ ಅಸಮತೋಲನಗಳ ನಡುವೆಯೂ ಸಾಲ ಪಡೆದ ರೈತರ ಸಹಕಾರದಿಂದ ತೀರ್ಥಹಳ್ಳಿ ಭೂ ಬ್ಯಾಂಕ್ ರಾಜ್ಯದ ಕೆಲವೇ ಲಾಭ ಗಳಿಸಿರುವ ಬ್ಯಾಂಕ್‌ಗಳಲ್ಲಿ ಒಂದಾಗಿ ಗಮನ ಸೆಳೆದಿದೆ. ಒಟ್ಟು 5392 ಮಂದಿ ಷೇರುದಾರರಿರುವ ಈ ಬ್ಯಾಂಕ್ ವಿವಿಧ ಯೋಜನೆಗಳಿಂದ ಬಹುಪಾಲು ಷೇರುದಾರರಿಗೆ ದೀರ್ಘಾವದಿ ಮತ್ತು ಮದ್ಯಮಾವಧಿ ಸಾಲ ನೀಡುತ್ತಾ ಬಂದಿದೆ. ಕಳೆದ 9 ವರ್ಷಗಳಿಂದ ಆಡಿಟ್ ತಪಾಸಣೆಯಲ್ಲಿ “ಎ” ಗ್ರೇಡ್ ಪಡೆದಿರುವ ತೀರ್ಥಹಳ್ಳಿ ಭೂ ಬ್ಯಾಂಕ್ ಕಳೆದ ಆರ್ಥಿಕ ವರ್ಷದ ಅಂದರೆ 31-03-2025 ರ ಮಾರ್ಚ್ ತಿಂಗಳ ಅಂತ್ಯಕ್ಕೆ ಮೊದಲ ಬಾರಿಗೆ ಲೆಕ್ಕ ಪತ್ರ ಕಡ್ಡಾಯವಾಗಿ ಅಂತ್ಯಗೊಂಡಿದ್ದು ಶೇ. 84.57 ವಸೂಲಾತಿ ಮಾಡಿ ಸುಮಾರು 46 ಕೋಟಿ 28 ಲಕ್ಷದ ಆರ್ಥಿಕ ವ್ಯವಹಾರ ನಡೆಸಿದೆ. ಬ್ಯಾಂಕಿನಲ್ಲಿ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿ ಮಾಡದೆ ನಿರಂತರ ಸುಸ್ತಿದಾರರಾದ ಸಾಲಗಾರ ಸದಸ್ಯರ ಮೇಲೆ ದಾವೆ ಹೊಡಲಾಗಿದೆ.

ಬಸವಾನಿ ವಿಜಯದೇವ್ ಅವರ ದೂರದೃಷ್ಟಿ

ಹಿರಿಯ ಸಹಕಾರಿ ಶ್ರೀ ಬಸವಾನಿ ವಿಜಯದೇವ್ ಅಧ್ಯಕ್ಷರಾದ ನಂತರ ಭೂ ಬ್ಯಾಂಕ್ ಜನಸ್ನೇಹಿ ಆರ್ಥಿಕ ಸಂಸ್ಥೆ ಆದಿಯಲ್ಲಿ ನಿರಂತರ ಶ್ರಮಿಸಲಾಗುತ್ತಿದ್ದು, ವಿವಿದ ಯೋಜನೆಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಸಾಲ ಪಡೆದ ರೈತರು ಸಕಾಲದಲ್ಲಿ ಕಂತು ಪಾವತಿ ಮಾಡಿ ಹೊಸ ಹೊಸ ರೈತರಿಗೆ ಬ್ಯಾಂಕಿನ ಸೇವೆ ವಿಸ್ತಾರಗೊಳ್ಳಲು ಸಹಕಾರವಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕಿ ಸರ್ವಸದಸ್ಯರ ಮಹಾಸಭೆ

ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕಿ ಸರ್ವಸದಸ್ಯರ ಮಹಾಸಭೆ ನಡೆಯಲಿದ್ದು, ಸದಸ್ಯರು ಸಕಾಲದಲ್ಲಿ ಆಗಮಿಸುವಂತೆಯೂ ಅಧ್ಯಕ್ಷರು ವಿನಂತಿಸಿದ್ದಾರೆ. ಈ ವರ್ಷವೂ ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸುವ ಕಾರ್ಯಕ್ರಮ ನಡೆಸುತ್ತಿದ್ದು, ಶೈಕ್ಷಣಿಕ ಕ್ಷೇತ್ರದಲ್ಲೂ ಬ್ಯಾಂಕ್ ತನ್ನ ಸಹಕಾರ ಹಸ್ತ ಚಾಚುವ ಪ್ರಯತ್ನ ಮುಂದುವರೆಸಿದೆ. ಮಾಜಿ ಅಧ್ಯಕ್ಷರು ಹಾಗೂ ರಾಜ್ಯದ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿದ್ದ ದಿ| ಬಿ.ಎಸ್. ವಿಶ್ವನಾಥರವರು ಯಾವತ್ತು ತೀರ್ಥಹಳ್ಳಿ ಭೂ ಬ್ಯಾಂಕಿಗೆ ನೀಡಿದ ನೆರವನ್ನು ಸ್ಮರಿಸಿರುವ ಅಧ್ಯಕ್ಷರಾದ ಶ್ರೀ ಬಸವಾನಿ ವಿಜಯದೇವ್ ರವರು ಬ್ಯಾಂಕಿನ ಆಡಳಿತ ಮಂಡಳಿಯ ಉಪಧ್ಯಕ್ಷರಾದ ಶ್ರೀ ಹಿರೇಗೋಡು ಶ್ರೀಧರಮೂರ್ತಿ, ವ್ಯವಸ್ಥಾಪಕರಾದ ಸಂಜಯ್, ಬ್ಯಾಂಕಿನ ನಿರ್ದೇಶಕರು, ನೌಕರ ಬಳಗ ಮುಖ್ಯವಾಗಿ ಷೇರುದಾರರ ನಿರಂತರ ಸಹಕಾರದಿಂದ ತೀರ್ಥಹಳ್ಳಿ ಭೂ ಬ್ಯಾಂಕ್ ಪತಿಷ್ಠಿತ ಸ್ಥಾನ ಪಡೆದಿದ್ದು, ಸಹಕರಿಸಿದ ಎಲ್ಲರಿಗೂ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.