Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ರಾಮನ ಪವಾಡ!!

ತೀರ್ಥಹಳ್ಳಿಯಲ್ಲಿ ರಾಮನ ಪವಾಡ!!
– ರಾಮನ ಪ್ರತಿಸ್ಥಾಪನೆಯಂದೇ ಕೋದಂಡರಾಮನಿಗೆ ಮುಕ್ತಿ!
– ಕಿಮ್ಮನೆ ಸಾರಥ್ಯದಲ್ಲಿ ತೀರ್ಥಹಳ್ಳಿ ರಥಬೀದಿಯ ದೇಗುಲ ಅಭಿವೃದ್ಧಿ
– 2 ದಿನಕ್ಕೆ ನಡೆಯಿತು ದೇಗುಲದ ಸಂಪೂರ್ಣ ಅಭಿವೃದ್ಧಿ

NAMMUR EXPRESS NEWS
ತೀರ್ಥಹಳ್ಳಿ: ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆಯ ದಿನದಂದೇ ತೀರ್ಥಹಳ್ಳಿಯಲ್ಲಿ ಪವಾಡವೊಂದು ನಡೆದಷ್ಟು ಸಲೀಸಾಗಿ ನೂರಾರು ವರ್ಷ ಇತಿಹಾಸವುಳ್ಳ ದೇವಾಲಯದ ಅಭಿವೃದ್ಧಿ ಕಂಡಿದೆ. ತೀರ್ಥಹಳ್ಳಿಯಲ್ಲಿನ ರಥ ಬೀದಿಯಲ್ಲಿರುವ ಕೋದಂಡರಾಮನ ದೇವಾಲಯದ ಅಭಿವೃದ್ಧಿ ಕಾಣದೆ ಅನಾಥವಾಗಿತ್ತು. ಇದೀಗ ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ ಗೌಡ ಸಾರಥ್ಯದಲ್ಲಿ ನೂರಾರು ಮಂದಿ ಕಾರ್ಯಕರ್ತರ ಶ್ರಮದೊಂದಿಗೆ ದೇಗುಲ ಕೇವಲ ಎರಡು ದಿನದಲ್ಲಿ ಅಭಿವೃದ್ಧಿಗೊಂಡಿದೆ. ಈ ಬೆಳವಣಿಗೆ ರಾಜ್ಯಕ್ಕೆ ಮಾದರಿ ಕೂಡ ಆಗಿದೆ.

ಪುರಾಣ ಪ್ರಸಿದ್ಧ ಕೋದಂಡರಾಮ ದೇವಸ್ಥಾನದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಆರ್ ಎಂ ಮಂಜುನಾಥಗೌಡ ಹಾಗೂ ತೀರ್ಥಹಳ್ಳಿ ತಾಲೂಕು ಹಾಗೂ ಪಟ್ಟಣದ ಕಾಂಗ್ರೆಸ್ ನಾಯಕರು, ಪಟ್ಟಣ ಪಂಚಾಯತ್ ಕಾಂಗ್ರೆಸ್ ಸದಸ್ಯರು, ಹಾಗೂ ಕಾರ್ಯಕರ್ತರಿಂದ ಸ್ವಾಮಿಗೆ ವಿಶೇಷವಾಗಿ ಹೋಮ ಹವನವನ್ನು ನೆರವೇರಿಸಲಾಯಿತು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಟಿಎಪಿಸಿಎಂಎಸ್ ಜಿಲ್ಲೆಗೆ ನಂಬರ್ 1

ತೀರ್ಥಹಳ್ಳಿ ಟಿಎಪಿಸಿಎಂಎಸ್ ಜಿಲ್ಲೆಗೆ ನಂಬರ್ 1
– ಸೆ.2 ರಂದು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ಸಭೆ
– ಏಳು ಬೀಳುಗಳ ನಡುವೆ ಪ್ರಗತಿ ಹೆಜ್ಜೆ: ಸಂಘದ ಅಧ್ಯಕ್ಷನಾಗರಾಜ್ ಶೆಟ್ಟಿ

NAMMUR EXPRESS NEWS
ತೀರ್ಥಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸಂಸ್ಥೆ ಅನೇಕ ಏಳು ಬೀಳುಗಳನ್ನು ಕಂಡು ಕೆಲಸ ನಿರ್ವಹಿಸುತ್ತಿದೆ. ನಮ್ಮ ಸಂಘ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ಸಂಘದ ಜೊತೆಗೆ ಸಮುದಾಯ ಭವನ ಮಾಡಿಕೊಂಡು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ ಹೇಳಿದ್ದಾರೆ. ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸೆ.2 ರಂದು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಯಲಿದೆ. ಸಂಘದಲ್ಲಿ 2022-23 ನೇ ಸಾಲಿನ ವರ್ಷದ ಅಂತ್ಯಕ್ಕೆ ವಿವಿಧ ಸಂಸ್ಥೆಗಳಲ್ಲಿ 9.60.000.00 ಮೌಲ್ಯದ ಷೇರುಗಳನ್ನು ಬ್ಯಾಂಕ್ ಗಳಲ್ಲಿ 2.91.36.184 ರೂ ಗಳ ಠೇವಣಿಗಳನ್ನು ಹೊಂದಿದ್ದು ಒಟ್ಟಾರೆ 3.00.96.184 ರೂ ಗಳ ಹೂಡಿಕೆಯನ್ನು ಹೊಂದಿದೆ ಎಂದರು.

ಟಿಎಪಿಸಿಎಂಎಸ್ ಗೆ ರೈತರೇ ಆಧಾರ ಸ್ಥಂಭ. ಇಲ್ಲಿನ ರೈಸ್ ಮಿಲ್ ಕೂಡ ರೈತರಿಗೆ ಅನುಕೂಲವಾಗಲು ರೈತರ ಭತ್ತವನ್ನು ಖರೀದಿ ಮಾಡಿ ಅಕ್ಕಿಯನ್ನು ವಾಪಾಸ್ ಕೊಡುತ್ತೇವೆ. ಸಂಘದ ಸದಸ್ಯರ ಕೃಷಿಗೆ ಅವಶ್ಯಕತೆ ಇರುವ ರಾಸಾಯನಿಕ ಗೊಬ್ಬರ, ಉತ್ತಮ ಬೀಜ, ಕ್ರಿಮಿನಾಶಕಗಳು, ವ್ಯವಸಾಯ ಉಪಕರಣಗಳು ಖರೀದಿಸಿ ರೈತರಿಗೆ ಮಾರಾಟ ಮಾಡುತ್ತೇವೆ ಎಂದರು.
ಸಹಕಾರಿ ನಾಯಕರಾದ ವಿಜಯದೇವ್, ಮಂಜಪ್ಪ ಗೌಡ, ತಾರಾನಾಥ್, ಕಾರ್ಯದರ್ಶಿ ರಚನಾ ಸೇರಿ ಹಲವರು ಉಪಸ್ಥಿತರಿದ್ದರು

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪ್ರಮುಖ ಸುದ್ದಿಗಳು

ಚಂದ್ರಯಾನ ಸಕ್ಸಸ್: 2 ಕಿಮಿ ನಡೆದು ಮಕ್ಕಳ ಶುಭಾಶಯ!
– ಕೋಣಂದೂರಿನ ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ಮಕ್ಕಳ ಶುಭಾಶಯ
– ವಿನಯ್ ಗುರೂಜಿ ಭಕ್ತರಿಂದ ಕೋಮನೆ ಶಾಲೆಯಲ್ಲಿ ವಿನಯ್ ಗುರೂಜಿ ಹುಟ್ಟು ಹಬ್ಬ ಆಚರಣೆ

NAMMUR EXPRESS THIRTHAHALLI :
ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾವತಿಯಿಂದ 23-08-2023ರ ಚಂದ್ರಯಾನ 3ರ ಯಶಸ್ಸಿಗೆ ಶುಭಹಾರೈಸುವ ಸಲುವಾಗಿ 1ನೇ ತರಗತಿಯ ಚಿಣ್ಣರರಿಂದ 7ನೇ ತರಗತಿವರೆಗಿನ ಎಲ್ಲಾ ಮಕ್ಕಳು ಕೋಣಂದೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಿಂದ ಸಿ.ಕೆ.ವೃತ್ತ ಮಾರ್ಗವಾಗಿ ಮತ್ತು ಸಿ.ಕೆ. ವೃತ್ತದಿಂದ ಆಸ್ಪತ್ರೆಯವರೆಗೆ ಸಾಗಿ ನಮ್ಮ ಇಸ್ರೋ ವಿಜ್ಞಾನಿಗಳಿಗೆ ಶುಭಕೋರಿದ್ದಾರೆ. ಜಾಥಾದಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು, ಪೋಷಕರು ಪಾಲ್ಗೊಂಡು ಈ ಜಾತವನ್ನು ಯಶಸ್ವಿಗೊಳಿಸಿದ್ದಾರೆ. ಒಟ್ಟು 2:30 ಕಿ.ಮೀ ಜಾಥಾದಲ್ಲಿ ಮಕ್ಕಳೆಲ್ಲರೂ ಹರ್ಷೋದ್ಧಾರದೊಂದಿಗೆ ಜಯಕಾರ ಕೂಗುತ್ತ ಸಾಗಿರುತ್ತಾರೆ. ಇಸ್ರೋ ವಿಜ್ಞಾನಿಗಳ ಸಾಧನೆಯು ಮಕ್ಕಳಗೆ ಸ್ಪೂರ್ತಿಯಾಗಲಿ ಎಂಬುದೇ ವಿದ್ಯಾಸಂಸ್ಥೆಯ ಆಶಯವಾಗಿದೆ.

ವಿನಯ್ ಗುರೂಜಿ ಹುಟ್ಟು ಹಬ್ಬ: ಸಾಮಾಜಿಕ ಸೇವೆ
– ಮೇಗರವಳ್ಳಿ ವಿನಯ್ ಗುರೂಜಿ ಭಕ್ತ ವೃಂದದಿಂದ ಕಾರ್ಯಕ್ರಮ

ತೀರ್ಥಹಳ್ಳಿ: ಅವಧೂತ ಶ್ರೀ ವಿನಯ್ ಗುರೂಜಿಯವರ ಹುಟ್ಟು ಹಬ್ಬದ ವಿಶೇಷವಾಗಿ ಮೇಗರವಳ್ಳಿ ಭಕ್ತ ವೃಂದದಿಂದ ಒಂದರಿಂದ ಐದರವರೆಗೆ ಓದುತ್ತಿರುವ ಸರಕಾರಿ ಕೋಮನೆ ಶಾಲಾ ಮಕ್ಕಳಿಗೆ ಹುಟ್ಟುಹಬ್ಬದ ಅಂಗವಾಗಿ ಸಿಹಿ ಹಂಚಲಾಯಿತು. ಹಾಗೂ 25 ಮಕ್ಕಳಿಗೆ ಡ್ರಾಯಿಂಗ್ ಕಿಟ್ ವಿತರಣೆ ಮಾಡಲಾಯಿತು. ಕೇಕ್ ಅನ್ನು ಕಟ್ ಮಾಡಿ ವಿನಯ್ ಗುರೂಜಿ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಮೇಗರವಳ್ಳಿ ಭಕ್ತ ವೃಂದದ ಅಭಿಲಾಶ್, ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಂಡೆ ವೆಂಕಟೇಶ್ಹಾಗೂ ಎಸ್ ಟಿ ಎಂ ಸಿ ಸದಸ್ಯರು ಹಾಗೂ ಉಪಾಧ್ಯಕ್ಷರು, ಪೋಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅವಧೂತ ವಿನಯ್ ಗುರೂಜಿಯವರ ಹುಟ್ಟು ಹಬ್ಬದ ಅಂಗವಾಗಿ ಬಡ ಮಕ್ಕಳಿಗೆ ಸಹಾಯ ಮಾಡುವ ಕಾರ್ಯವನ್ನು ವಿನಯ್ ಗುರೂಜಿ ಭಕ್ತ ವೃಂದ ಮೇಗರವಳ್ಳಿ ಇವರು ಕಳೆದ 3 ವರ್ಷದಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ತೀರ್ಥಹಳ್ಳಿ

ತುಳುನಾಡು ಸಿರಿ ಸೌಹಾರ್ದ ಸಹಕಾರಿಯಿಂದ ಉಚಿತ ಅರೋಗ್ಯ ಶಿಬಿರ

ತುಳುನಾಡು ಸಿರಿ ಸೌಹಾರ್ದ ಸಹಕಾರಿಯಿಂದ ಉಚಿತ ಅರೋಗ್ಯ ಶಿಬಿರ
– ಸೆ.12ರಂದು ತೀರ್ಥಹಳ್ಳಿಯಲ್ಲಿ ಆಯೋಜನೆ
– ಷೇರುದಾರರು, ಜನತೆ ಸದುಪಯೋಗಪಡಿಸಿಕೊಳ್ಳಲು ರಾಘವೇಂದ್ರ ಶೆಟ್ಟಿ ಮನವಿ

NAMMUR EXPRESS NEWS
ತೀರ್ಥಹಳ್ಳಿ: ತುಳುನಾಡು ಸಿರಿ ಸೌಹಾರ್ದ ಸಹಕಾರಿ ಸಂಘ ತೀರ್ಥಹಳ್ಳಿ ತಾಲ್ಲೂಕು ಇವರ ಆಶ್ರಯದಲ್ಲಿ
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಭಾಗಿತ್ವದಲ್ಲಿ 12 ಸೆಪ್ಟೆಂಬರ್ 2023 ಮಂಗಳವಾರ ತೀರ್ಥಹಳ್ಳಿಯಲ್ಲಿ
ಬೃಹತ್ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಅಂದೇ ಷೇರುದಾರರ ಸಭೆ ನಡೆಯಲಿದೆ.
ಮಣಿಪಾಲ ನುರಿತ ತಜ್ಞರಿಂದ ಸಮಾಲೋಚನೆ ರಕ್ತದ ಸಕ್ಕರೆ ಅಂಶದ ಪರೀಕ್ಷೆ (GRBS) | ಬಿಪಿ (BP) ಬಾಯಿ ಮತ್ತು ಹಲ್ಲುಗಳ ಸಂಪೂರ್ಣ ತಪಾಸಣೆ ಮತ್ತು ಸಲಹೆ ಇರಲಿದೆ. 12 ಸೆಪ್ಟೆಂಬರ್ ಮಂಗಳವಾರ ಸಮಯ ಬೆಳಗ್ಗೆ 8-00 ರಿಂದ ಮಧ್ಯಾಹ್ನ 1-00ರವರೆಗೆ ತೀರ್ಥಹಳ್ಳಿ ಮಾಧವ ಮಂಗಲ ಸಭಾಭವನ, ತುಂಗಾತೀರ ಇಲ್ಲಿ ಆರೋಗ್ಯ ಶಿಬಿರ ನಡೆಯಲಿದೆ.
ಷೇರುದಾರ ಸದಸ್ಯರು ಹಾಗೂ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿ ತುಳುನಾಡು ಸಿರಿ ಸೌಹಾರ್ದ ಸಹಕಾರಿ ಸಂಘ ತೀರ್ಥಹಳ್ಳಿ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಮತ್ತು ಎಲ್ಲಾ ನಿರ್ದೇಶಕರು ಮನವಿ ಮಾಡಿದ್ದಾರೆ.

ಶಿಬಿರದಲ್ಲಿ ಲಭ್ಯವಿರುವ ಚಿಕಿತ್ಸಾ ವಿಭಾಗಗಳು

1. ಚರ್ಮ ರೋಗ ತಪಾಸಣಾ ವಿಭಾಗ
2, ಕಿವಿ, ಮೂಗು, ಗಂಟಲು ತಪಾಸಣಾ ವಿಭಾಗ
3. ಸಮುದಾಯ ದಂತ ಚಿಕಿತ್ಸಾ ವಿಭಾಗ
4. ಕೀಲು ಮತ್ತು ಮೂಳೆ ತಪಾಸಣಾ ವಿಭಾಗ
5. ಸ್ತ್ರೀ ರೋಗ ತಪಾಸಣಾ ವಿಭಾಗ
6. ಜನರಲ್ ಮೆಡಿಸಿನ್

ಶಿಬಿರಕ್ಕೆ ನೋಂದಾವಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9448617498, 9480282858 9741626317 9113231844

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲೂ ಕನ್ನಡಕ್ಕೆ ಕುತ್ತು!?

ತೀರ್ಥಹಳ್ಳಿಯಲ್ಲೂ ಕನ್ನಡಕ್ಕೆ ಕುತ್ತು!?
– ಕನ್ನಡ ನಾಮಫಲಕಕ್ಕೆ ತಿಲಾಂಜಲಿ ಇಡ್ತಿದ್ದಾರಾ?
– ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಕ್ಕೆ ಕರವೇ ಮನವಿ: ಏನಿದು ಮನವಿ..?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿರುವ ಬಹುತೇಕ, ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ನಾಮಫಲಕವನ್ನು ಆಂಗ್ಲ ಭಾಷೆಯಲ್ಲಿ ಅಳವಡಿಸಿದ್ದು, ಸಣ್ಣದಾಗಿ ಕನ್ನಡದಲ್ಲಿ ಬೋರ್ಡ್ ಹಾಕಲಾಗಿದೆ. ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ತೀರ್ಥಹಳ್ಳಿ ಕರವೇ ಸ್ಥಳೀಯ ಆಡಳಿತವನ್ನು ಅಗ್ರಹಿಸಿದೆ. ಕರ್ನಾಟಕ ಸರ್ಕಾರದ ಆದೇಶದಂತೆ 70 % ಭಾಗಶಃ ಕನ್ನಡದಲ್ಲಿಯೇ ಇರಬೇಕು ಎಂಬುದಾಗಿದೆ, ಆದರೆ ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ ಆಂಗ್ಲ ಭಾಷೆಯಲ್ಲಿ ನಾಮಫಲಕ ಅಳವಡಿಸಿದ್ದಾರೆ. ಕೆಲವೊಂದು ಇಂಗ್ಲಿಷಲ್ಲಿ ದೊಡ್ಡದಾಗಿ ನಾಮಫಲಕವನ್ನು ಅಳವಡಿಸಿ ಕನ್ನಡವನ್ನು ಚಿಕ್ಕದಾಗಿ ಸೇರಿಸಿರುತ್ತಾರೆ.

ತಾವುಗಳು ದಯಮಾಡಿ ಇದನ್ನು ಗಮನಿಸಿ. ಈ ಕೂಡಲೇ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಬಳಸಬೇಕೆಂದು ಆದೇಶವನ್ನು ಹೊರಡಿಸಬೇಕು. ಹಿಂದೆ ನಾಮಫಲಕಗಳಲ್ಲಿ ಆಗಿರುವ ದೋಷವನ್ನು ಸರಿಪಡಿಸಿಕೊಳ್ಳಲು ಒಂದು ತಿಂಗಳ ಕಾಲಾವಕಾಶವನ್ನು ನೀಡಿ ಸಂಪೂರ್ಣ ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲಾ ನಾಮಫಲಕಗಳು ಕನ್ನಡದಲ್ಲಿ ಬರುವಂತೆ ಗಮನಹರಿಸಬೇಕು. ಕನ್ನಡಕ್ಕೆ ಮಾನ್ಯತೆ ಬರುವಂತೆ ಮಾಡಬೇಕೆಂದು ಪಟ್ಟಣ ಪಂಚಾಯತ್ ಮುಖ್ಯಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಮನವಿ ಮಾಡಿದೆ. ಈ ಸಂದರ್ಭದಲ್ಲಿ ಕರವೇ ಪ್ರಮುಖರಾದ ಮಲ್ಲಕ್ಕಿ ರಾಘವೇಂದ್ರ, ಯಡೂರು ಸುರೇಂದ್ರ, ಶ್ರೀಕಾಂತ್ ಬೆಟ್ಟಮಕ್ಕಿ, ಜ್ಯೋತಿ ದಿಲೀಪ್,ವಿಕ್ರಮ್ ಶೆಟ್ಟಿ, ಅರ್ಜುನ್, ವಾಣಿ ಗಣೇಶ್ ಸೇರಿ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ನಂದಿನಿ ಸಿಹಿ ಉತ್ಸವ

ತೀರ್ಥಹಳ್ಳಿಯಲ್ಲಿ ನಂದಿನಿ ಸಿಹಿ ಉತ್ಸವ
– ಗ್ರಾಹಕರಿಗೆ ಶೇ.20ರಷ್ಟು ರಿಯಾಯಿತಿಯಲ್ಲಿ ಸಿಹಿ
– ತೀರ್ಥಹಳ್ಳಿಯ ಆಗುಂಬೆ ನಂದಿನಿ ಪಾರ್ಲರ್ ಅಲ್ಲಿ ಕಾರ್ಯಕ್ರಮ

NAMMUR EXPRESS NEWS
ಗ್ರಾಹಕರಿಗೆ ಶೇ.20ರಷ್ಟು ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮಾರಾಟ ಮಾಡಲು ಶಿಮುಲ್ ನಿರ್ಧರಿಸಿದೆ. ಅತ್ಯುತ್ತಮ ಗುಣಮಟ್ಟಣದ ಸಿಹಿ ತಿನಿಸುಗಳ ಉತ್ಪನ್ನ ಗ್ರಾಹಕರಿಗೆ ದೊರೆಯಲಿದೆ. ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದಲ್ಲಿರುವ ನಂದಿನಿ ಪಾರ್ಲರ್ ಅಲ್ಲಿ ನಡೆದ ಕಾರ್ಯಕ್ರಮದಲ್ಲಿ ನಂದಿನಿ ಸಿಹಿ ಉತ್ಸವವನ್ನು ಗುರುವಾರ ಉದ್ಘಾಟಿಸಲಾಯಿತು.

ಉತ್ತಮ ಸ್ಪಂದನೆ:

ಗ್ರಾಮಾಂತರ ಪ್ರದೇಶಕ್ಕೂ ನಂದಿನಿ ಹಾಲಿನ ಉತ್ಪನ್ನಗಳು ಪೂರೈಕೆ ಆಗಬೇಕು ಎಂಬ ಮಹತ್ವದ ಉದ್ದೇಶದಲ್ಲಿ ಶಿಮುಲ್ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲೆಡೆ ಉತ್ತಮ ಸ್ಪಂದನೆ ಸಿಕ್ಕಿದೆ. ಪ್ರವಾಸಿ ಸ್ಥಳ ಹೊಂದಿರುವ ತೀರ್ಥಹಳ್ಳಿ ತಾಲೂಕಿನಲ್ಲಿ ನಂದಿನಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಶಿಮುಲ್ ನಿರ್ದೇಶಕ ಕಡಿದಾಳ್ ತಾರಾನಾಥ್ ಹೇಳಿದ್ದಾರೆ. ಈ ಸಂದರ್ಭ ಶಿಮುಲ್ ಅಧಿಕಾರಿಗಳಾದ ಬಸವರಾಜ, ನವೀನ್, ಪಾರ್ಲರ್ ಮಾಲೀಕ ಸುನಿಲ್‌ ಮತ್ತಿತರರು ಇದ್ದರು. ತೀರ್ಥಹಳ್ಳಿ ಪಟ್ಟಣದ ಆಗುಂಬೆ ವೃತ್ತದಲ್ಲಿ ನಂದಿನಿ ಸಿಹಿ ಉತ್ಸವವನ್ನು ಗುರುವಾರ ಉದ್ಘಾಟಿಸಲಾಯಿತು.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?
– ಯಡೆಹಳ್ಳಿಕೆರೆ ಬಳಿ ಇಬ್ಬರು ಪೊಲೀಸರ ವಶಕ್ಕೆ
– ಗಾಂಜಾ ಅಡ್ಡೆಯಾಗುತ್ತಿದೆಯಾ ಮಲೆನಾಡು?
– ಪೋಲೀಸರ ಖಡಕ್ ಕ್ರಮಕ್ಕೆ ಜನರ ಮೆಚ್ಚುಗೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕೋಣಂದೂರು ಬಳಿ ಇತ್ತೀಚಿಗೆ ತಾನೇ ತೋಟದಲ್ಲೇ ಗಾಂಜಾ ಗಿಡ ಬೆಳೆದ ಇಬ್ಬರನ್ನು ಅರೆಸ್ಟ್ ಮಾಡಿರುವ ಪ್ರಕರಣ ಮಾಸುವ ಮುನ್ನವೇ ತೀರ್ಥಹಳ್ಳಿ ಪಟ್ಟಣದ ಯಡೆಹಳ್ಳಿ ಕೆರೆ ಬಳಿ ಗಾಂಜಾ ಸೇವನೆ ಮಾಡಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮತ್ತೆ ಮತ್ತೆ ತೀರ್ಥಹಳ್ಳಿ ತಾಲೂಕಿನ ಹಲವು ಭಾಗಗಳಲ್ಲಿ ಅನೈತಿಕ ಗಾಂಜಾ ಚಟುವಟಿಕೆಗಳು ನಡೆಯುತ್ತಿವೆ. ಇದೀಗ ಯಡೆಹಳ್ಳಿ ಕೆರೆ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಸಿಕ್ಕಿಬಿದ್ದಿರುವ ಘಟನೆ ಕಂಡುಬಂದಿದೆ. ತೀರ್ಥಹಳ್ಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ತೀರ್ಥಹಳ್ಳಿಯಲ್ಲಿ ಹೆಚ್ಚಿದ ಅಮಲು!:

ತೀರ್ಥಹಳ್ಳಿ ತಾಲೂಕಿನಲ್ಲಿ ಯುವಕರು, ಕೆಲವು ವಿದ್ಯಾರ್ಥಿಗಳು ಗಾಂಜಾ ಅಮಲಲ್ಲಿ ತೇಲಾಡುತ್ತಿರುವ ದೃಶ್ಯ ಮಾಮೂಲಾಗಿದೆ. ನದಿ ತೀರ, ಕಾಲೇಜಗಳ ಸಮೀಪ, ಹೋಟೆಲ್ ಬಾರ್ ರೆಸ್ಟೋರೆಂಟ್ ಸೇರಿ ಹಲವು ಅಡ್ಡೆಗಳಲ್ಲಿ ಗಾಂಜಾ ಗಮ್ಮತ್ತು ನಡೆಯುತ್ತಿದೆ. ಇದೀಗ ಪೊಲೀಸರು ಕಾರ್ಯಚರಣೆ ನಡೆಸುತ್ತಿರುವುದು ಜನರ ಮೆಚ್ಚುಗೆ ಗಳಿಸಿದೆ.
ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ, ಸಿಪಿಐ ಅಶ್ವತ್ ಗೌಡ ನೇತೃತ್ವದಲ್ಲಿ ಪೊಲೀಸರು ಖಡಕ್ ಕ್ರಮ ಜರುಗಿಸುತ್ತಿದ್ದಾರೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ತೀರ್ಥಹಳ್ಳಿ

ರಕ್ತದಾನದ ಮೂಲಕ ಸ್ವಾತಂತ್ರ್ಯ ದಿನ ಆಚರಿಸಿದ ನಿವೃತ್ತ ಯೋಧರು!

ರಕ್ತದಾನದ ಮೂಲಕ ಸ್ವಾತಂತ್ರ್ಯ ದಿನ ಆಚರಿಸಿದ ನಿವೃತ್ತ ಯೋಧರು!
– ತೀರ್ಥಹಳ್ಳಿ ಮಾಜಿ ಸೈನಿಕರ ಸಂಘದವರಿಂದ ಸ್ವಯಂ ಪ್ರೇರಿತ ರಕ್ತದಾನ

NAMMUR EXPRESS NEWS
ತೀರ್ಥಹಳ್ಳಿ: ಸ್ವಾತಂತ್ರೋತ್ಸವದ ಆಚರಣೆ ಪ್ರಯುಕ್ತ ಮಾಜಿ ಸೈನಿಕರ ಸಂಘ ತೀರ್ಥಹಳ್ಳಿ ಇದರ ಸದಸ್ಯರು ರಕ್ತದಾನ ಮಾಡಿ ಸ್ವಾತಂತ್ರ್ಯ ದಿನ ಆಚರಿಸಿದರು. ರೋಟರಿ ಐಎಂಎ ರಕ್ತನಿಧಿ ಕೇಂದ್ರಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಶಿವಪ್ಪ ಮತ್ತು ಕಾರ್ಯದರ್ಶಿ ಮೂರ್ತಿ ಇವರ ಮಾರ್ಗದರ್ಶನದಲ್ಲಿ ಮಾಜಿ ಸೈನಿಕರಾದ ಕೃಷ್ಣಕುಮಾರ್, ಕವೀಶ್, ಸುಧಾಕರ್,ಕಾರ್ತಿಕ್, ಕುಮಾರ್, ಯುವರಾಜ್, ಸಂತೋಷ್ ಉಪಸ್ಥಿತರಿದ್ದು ರಕ್ತದಾನ ಮಾಡಿದರು.

ಭಾರತದ ಸೈನ್ಯದ ಸೇವೆಯ ನಂತರದ ದಿನಗಳಲ್ಲಿ ಮಾಜಿ ಸೈನಿಕರು ರಕ್ತದಾನ ಮಾಡುವುದು ಪ್ರಸಂಶನೀಯ ಮತ್ತು ಇತರೆ ರಕ್ತದಾನಿಗಳಿಗೆ ಮಾದರಿ ಎಂದು ರೊ ಕೆ ಪಿ ಎಸ್ ಸ್ವಾಮಿ ,ಸಾರ್ವಜನಿಕ ಸಂಪರ್ಕಾಧಿಕಾರಿ ,ರೋಟರಿ ಐಎಮ್ಎ ರಕ್ತನಿಧಿ ಕೇಂದ್ರ, ತೀರ್ಥಹಳ್ಳಿ ಇವರು ಮಾಜಿ ಸೈನಿಕರಿಗೆ ಶುಭ ಕೋರಿ, ಧನ್ಯವಾದಗಳನ್ನು ತಿಳಿಸಿದರು. ರಕ್ತ ನಿಧಿ ಕೇಂದ್ರದ ತಂತ್ರಜ್ಞಾರಾದ ಅರುಣ್ ,ಪವಿತ್ರ ಈ ಸಂದರ್ಭದಲ್ಲಿ ಸಹಕರಿಸಿದರು.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಶ್ರೀ ವಿಶ್ವಕರ್ಮ ಸೌಹಾರ್ಧ ಸಹಕಾರಿ ಸಂಘಕ್ಕೆ ನೂತನ ಸಾರಥಿಗಳು!

ತೀರ್ಥಹಳ್ಳಿ ಶ್ರೀ ವಿಶ್ವಕರ್ಮ ಸೌಹಾರ್ಧ ಸಹಕಾರಿ ಸಂಘಕ್ಕೆ ನೂತನ ಸಾರಥಿಗಳು!
– ಶ್ರೀ ವಿಶ್ವಕರ್ಮ ಸಹಕಾರಿ ವೇದಿಕೆಯಿಂದ ಸಮಸ್ತರಿಗೆ ಧನ್ಯವಾದ

NAMMUR EXPRESS NEWS
( Thirthahalli ) ಶ್ರೀ ವಿಶ್ವಕರ್ಮ ಸಹಕಾರಿ ವೇದಿಕೆ” ತೀರ್ಥಹಳ್ಳಿ ತಾಲ್ಲೂಕಿನಿಂದ ತೀರ್ಥಹಳ್ಳಿ ತಾಲ್ಲೂಕು ಶ್ರೀ ವಿಶ್ವಕರ್ಮ ಸೌಹಾರ್ಧ ಸಹಕಾರಿ ಸಂಘ ನಿ.,ತೀರ್ಥಹಳ್ಳಿ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಜಯಶಾಲಿಯಾದರು.

ನೂತನ ನಿರ್ದೇಶಕರು ಇವರು

ಉಪೇಂದ್ರ ಆಚಾರ್ ಮೇಲಿನ ಕುರುವಳ್ಳಿ , ಶಂಕರಾಚಾರ್ ಬಿ.ಜಿ. ಆರಗ ಗೇಟ್ ನಾಗಪ್ಪಾಚಾರ್ ಎನ್.ಎಸ್. ನಾಡ್ತಿ-ಸೊಪ್ಪುಗುಡ್ಡೆ, ಭಾಸ್ಕರಾಚಾರ್ ಪಿ. ಹೈಸ್ಕೂಲ್ ರೋಡ್-ತೀರ್ಥಹಳ್ಳಿ , ಮೋಹನ್ ಎಸ್.ಜಿ. ಶೇಡ್ಗಾರ್, ಜ್ಯೋತಿ ಎಸ್. ತುಂಬೇಸರ, ಶಾರದ ಬಳಗೋಡು, ರಾಘವೇಂದ್ರ ಎನ್ ಗುಡ್ಡೇಕೊಪ್ಪ, ಮನೋಜ್ ಕುಮಾರ್ ಮೊನೊ ಆರ್ಟ್ಸ್ ತೀರ್ಥಹಳ್ಳಿ, ಚಂದ್ರಶೇಖರ ಜಿ. ಮಂಡಗದ್ದೆ, ಮಂಜುನಾಥ ಎಲ್. ತ್ಯಾರಂದೂರು, ರಾಘವೇಂದ್ರ ಪಿ. ಕುಂಬಾರದಡಿಗೆ ಆಯ್ಕೆಯಾಗಿದ್ದಾರೆ.

ಸಮಸ್ತರಿಗೆ ಅಭಿನಂದನೆಗಳು

ನೂತನ ನಿರ್ದೇಶಕರು ತಮ್ಮ ಅತ್ಯಮೂಲ್ಯ ಮತ ನೀಡಿ ಜಯಶಾಲಿಯಾಗಲು ಸಹಕರಿಸಿದ ತೀರ್ಥಹಳ್ಳಿ ತಾಲ್ಲೂಕಿನ ವಿಶ್ವಕರ್ಮ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ತೀರ್ಥಹಳ್ಳಿ

ಹೊಸಹಳ್ಳಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ನೇತ್ರಾವತಿ ಗಿರೀಶ್, ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆ

ಹೊಸಹಳ್ಳಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ನೇತ್ರಾವತಿ ಗಿರೀಶ್, ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆ
– ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರ ಅಭಿನಂದನೆ

NAMMUR EXPRESS NEWS
ತೀರ್ಥಹಳ್ಳಿ: ಹೊಸಹಳ್ಳಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ನೇತ್ರಾವತಿ ಗಿರೀಶ್, ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆ ಆಗಿದ್ದಾರೆ. ಆಯ್ಕೆ ವೇಳೆ ಗ್ರಾಮ ಪಂಚಾಯತ್ ಸದಸ್ಯರು ಮಾಜಿ ಅಧ್ಯಕ್ಷರಾದ ರಾಜೇಶ್,ಲತಾ ಪುರುಷೋತ್ತಮ್, ಮಮತ, ಸುಮಿತ್ರ, ನಾರಾಯಣ ಮೂರ್ತಿ, ಕಾಂಗ್ರೆಸ್ ನಾಯಕರಾದ ಕಾಂಗ್ರೆಸ್ ನಾಯಕರಾದ ಶಶಿಧರ್ ಈಚಲಬೈಲು, ಬಾಳೆಹಳ್ಳಿ ಪ್ರಭಾಕರ್, ವೆಂಕಟೇಶ್ ಹೆಗಡೆ, ಚಂದ್ರಹಾಸ ಬಾಳೆಹಳ್ಳಿ, ಸಂತೋಷ್ ಹೆಗ್ಡೆ ಕೈಮರ, ಶ್ರೀನಿವಾಸ್ ಕೊರನಕೋಟೆ ಸೇರಿದಂತೆ ಹಲವರು ಇದ್ದರು. 7 ಕಾಂಗ್ರೆಸ್, 2 ಬಿಜೆಪಿ, 1 ಪಕ್ಷೇತರ ಸದಸ್ಯರು ಗ್ರಾಮ ಪಂಚಾಯತ್ ಅಲ್ಲಿದ್ದಾರೆ. ಇದೀಗ ಕಾಂಗ್ರೆಸ್ ಬೆಂಬಲಿತರು ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ : ಜನರ ಕಿವಿಗೆ ಹೂ ಮುಡಿಸುತ್ತಿರುವ ಕಾಂಗ್ರೆಸ್ ಸರ್ಕಾರ!

[embedyt] https://www.youtube.com/watch?v=p9w93rFeg28%5B/embedyt%5D