Categories
ತೀರ್ಥಹಳ್ಳಿ

ಅರೇಹಳ್ಳಿ ಗ್ರಾಮ ಪಂಚಾಯತ್ ಬಿಜೆಪಿ ಪಾಲು!

ಅರೇಹಳ್ಳಿ ಗ್ರಾಮ ಪಂಚಾಯತ್ ಬಿಜೆಪಿ ಪಾಲು!
– ನೂತನ ಅಧ್ಯಕ್ಷರಾಗಿ ಸವಿತಾ ಸುರೇಂದ್ರ, ಉಪಾಧ್ಯಕ್ಷರಾಗಿ ಗಿರೀಶ್ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಅರೆಹಳ್ಳಿ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ಸವಿತಾ ಸುರೇಂದ್ರ ಹಾಗೂ ಉಪಾಧ್ಯಕ್ಷರಾಗಿ ಗಿರೀಶ್ ಕೆ.ಟಿ (ಗುಂಡ )ಆಯ್ಕೆಯಾಗಿದ್ದಾರೆ. ಅರೇಹಳ್ಳಿ ಗ್ರಾಮ ಪಂಚಾಯತ್ 10 ಮಂದಿ ಸದಸ್ಯರ ಪೈಕಿ 9 ಮಂದಿ ಬಿಜೆಪಿ, 1 ಕಾಂಗ್ರೆಸ್ ಇದ್ದು, ಈ ಹಿಂದೆ ಸಿದ್ದಾರ್ಥ ಉಂಟುಗೋಡು, ಶ್ರೀಲತಾ ಉಪಾಧ್ಯಕ್ಷರಾಗಿದ್ದರು.
ಆಯ್ಕೆ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅರೆಹಳ್ಳಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರು ಉಪಾಧ್ಯಕ್ಷರ ಆಯ್ಕೆವೇಳೆ ಪ್ರಮುಖರಾದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಭಾಸ್ಕರ್ ಹಾಗೂ ಸಿದ್ದಾರ್ಥ, ಉಪಾಧ್ಯಕ್ಷರಾದ ಶ್ರೀಲತಾ, ಸದಸ್ಯರು ಹಾಗೂ ಮುಖಂಡರಾದ ಯಶಸ್ವಿ ಕಡ್ತುರು, ಅವಿನಾಶ್, ಸುಬ್ರಹ್ಮಣ್ಯ, ಶಿವಕುಮಾರ್, ಯೋಗೀಶ್ ಹಾಗೂ ಪಕ್ಷದ ಪ್ರಮುಖರಾದ ರಾಘವೇಂದ್ರ ಚೊಕ್ಕಡ ಬೈಲು, ಕೇಶವ, ಮಹೇಶ್ ಕುಡ್ತನಹಳ್ಳಿ, ಅಭಿನಂದನ್ ಕೇಳೂರು, ಆದರ್ಶ ಮೇಕೇರಿ ಸೇರಿದಂತೆ ಹಲವರು ಇದ್ದರು. ನೂತನ ಅಧ್ಯಕ್ಷರು ಉಪಾಧ್ಯಕ್ಷರಿಗೆ ಮುಖಂಡರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ : ಜನರ ಕಿವಿಗೆ ಹೂ ಮುಡಿಸುತ್ತಿರುವ ಕಾಂಗ್ರೆಸ್ ಸರ್ಕಾರ!

[embedyt] https://www.youtube.com/watch?v=p9w93rFeg28%5B/embedyt%5D

Categories
ತೀರ್ಥಹಳ್ಳಿ

ಯುವ ಮುಖಂಡ ನವೀನ್ ಕುಳ್ಳುಂಡೆಗೆ ಒಲಿದ ಗ್ರಾಪಂ ಅಧ್ಯಕ್ಷಗಿರಿ!

ಯುವ ಮುಖಂಡ ನವೀನ್ ಕುಳ್ಳುಂಡೆಗೆ ಒಲಿದ ಗ್ರಾಪಂ ಅಧ್ಯಕ್ಷಗಿರಿ!
– ತೀರ್ಥಹಳ್ಳಿಯ ಸಿಂಗನಬಿದರೆ ಗ್ರಾಪಂ ಅಧ್ಯಕ್ಷರಾಗಿ ನವೀನ್ ಕುಳ್ಳುಂಡೆ, ಉಪಾಧ್ಯಕ್ಷರಾಗಿ ಸುಜಾತ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಸಿಂಗನಬಿದಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಯುವ ಮುಖಂಡ ನವೀನ್ ಕುಳ್ಳುಂಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಜಾತ ಅವರು ಆಯ್ಕೆಯಾಗಿದ್ದು, ಎಲ್ಲ ಸದಸ್ಯರು ಈ ವೇಳೆ ಹಾಜರಿದ್ದರು. ಸಿಂಗನಬಿದಿರೆ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತರು ಇಬ್ಬರು ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತರು ನಾಲ್ಕು ಮಂದಿ ಇದ್ದರು. ಒಟ್ಟು ಆರು ಸದಸ್ಯ ಬಲದ ಗ್ರಾಮ ಪಂಚಾಯತ್ ನಲ್ಲಿ ಇದೀಗ ನೂತನ ಅಧ್ಯಕ್ಷರು ಉಪಾಧ್ಯಕ್ಷರ ಆಯ್ಕೆಯಾಗಿದೆ. ಈ ವೇಳೆ ಸಂದೇಶ್, ದಿವ್ಯ, ಕುಸುಮ, ತಿಮ್ಮಪ್ಪ ಹಾಜರಿದ್ದರು. ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ, ಗ್ರಾಮಸ್ಥರು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಜನರ ಕಿವಿಗೆ ಹೂ ಮುಡಿಸುತ್ತಿರುವ ಕಾಂಗ್ರೆಸ್ ಸರ್ಕಾರ!

[embedyt] https://www.youtube.com/watch?v=p9w93rFeg28%5B/embedyt%5D

Categories
ತೀರ್ಥಹಳ್ಳಿ

ತೀರ್ಥಹಳ್ಳಿ: ಸಂಸದ ರಾಘವೇಂದ್ರ ಹುಟ್ಟು ಹಬ್ಬ ಆಚರಣೆ

ತೀರ್ಥಹಳ್ಳಿ: ಸಂಸದ ರಾಘವೇಂದ್ರ ಹುಟ್ಟು ಹಬ್ಬ ಆಚರಣೆ
– ತೀರ್ಥಹಳ್ಳಿ ಬಿಜೆಪಿ ವತಿಯಿಂದ ಆಸ್ಪತ್ರೆ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ
– ಯುವ ನಾಯಕನಿಗೆ ಶುಭಾಶಯಗಳ ಮಹಾಪೂರ

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಸಂಸದರಾದ ಬಿ. ವೈ ರಾಘವೇಂದ್ರ ಅವರ ಜನ್ಮ ದಿನದ ಪ್ರಯುಕ್ತ ತೀರ್ಥಹಳ್ಳಿ ಬಿಜೆಪಿ ಘಟಕ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಣೆ ಮಾಡಲಾಯಿತು. ಬಿಜೆಪಿ ಅಧ್ಯಕ್ಷರಾದ ಬಾಳೆಬೈಲ್ ರಾಘವೇಂದ್ರ, ಮುಖಂಡರಾದ ಪ್ರಶಾಂತ್ ಕುಕ್ಕೆ, ಚಂದವಳ್ಳಿ ಸೋಮಶೇಖರ್, ರಕ್ಷಿತ್ ಮೇಗರವಳ್ಳಿ, ಸಂದೇಶ್ ಜವಳಿ , ಸೊಪ್ಪುಗುಡ್ಡೆ ರಾಘವೇಂದ್ರ, ನವೀನ್ ಯತಿರಾಜ್, ಮಧುರಾಜ್ ಹೆಗ್ಡೆ, ಶ್ರೀಕಾಂತ್ ಅತ್ತಿಕೊಡಿಗೆ, ರವೀಶ್ ಬಾಬಿ, ದಯಾನಂದ್ ಸಾಲಿಯಾನ್, ವಿನುತ್ ಗೌಡ, ಅಭಿ,, ಡಾಕಮ್ಮ, ಜ್ಯೋತಿ ದಿಲೀಪ್, ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ : ಜನರ ಕಿವಿಗೆ ಹೂ ಮುಡಿಸುತ್ತಿರುವ ಕಾಂಗ್ರೆಸ್ ಸರ್ಕಾರ!

[embedyt] https://www.youtube.com/watch?v=p9w93rFeg28%5B/embedyt%5D