ತೀರ್ಥಹಳ್ಳಿಯಲ್ಲಿ 25ನೇ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ ಸಂಭ್ರಮ
– ಪ್ರಗತಿ ದಾರಿಯತ್ತ ಜಾಗೃತ ಮಹಿಳೆ ವಿಚಾರ ಸಂಕಿರಣ
– ಸ್ವ ಉದ್ಯೋಗದತ್ತ ಮಹಿಳೆಯರು: ಮೆಚ್ಚುಗೆ
NAMMUR EXPRESS NEWS
ತೀರ್ಥಹಳ್ಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತೀರ್ಥಹಳ್ಳಿ ತಾಲೂಕಿನಲ್ಲಿ “ಪ್ರಗತಿ ದಾರಿಯತ್ತ ಜಾಗೃತ ಮಹಿಳೆ ” ವಿಷಯದ ಕುರಿತು ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಅನಿಲ್ ಕುಮಾರ್ಮುಖ್ಯ ನಿರ್ವಹಣಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.ರಿ.ಧರ್ಮಸ್ಥಳ ಅವರು ಎಲ್ಲಾ ಮಹಿಳೆಯರಿಗೂ ಇಂದಿನ ಕಾಲದಲ್ಲಿ ಜಾಗೃತ ಗೊಳ್ಳಬೇಕು. ಮಹಿಳೆಯರು ಎಲ್ಲಾ ರಂಗಗಳಲ್ಲಿಯೂ ಇದ್ದು, ಹೇಮಾವತಿ ಅಮ್ಮನವರ ಪ್ರೀತಿಯ ಕಾಳಜಿಯ ಕಾರ್ಯಕ್ರಮ ಜ್ಞಾನ ವಿಕಾಸ ಇದನ್ನು ಶಾಶ್ವತವಾಗಿ ಗಟ್ಟಿಗೊಳಿಸಿ ಎಂದು ಎಲ್ಲಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ವಿಶೇಷ ಉಪನ್ಯಾಸದೊಂದಿಗೆ ಮಾರ್ಗದರ್ಶನ ನೀಡಿದರು. ಶಾಸಕ ಅರಗ ಜ್ಞಾನೇಂದ್ರ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ, ಸರಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಿ, ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸಿ.
ಇನ್ನಷ್ಟು ಮಾಹಿತಿ ಪಡೆದು ಸಬಲೀಕರಣ ಹೊಂದಬೇಕು ಎಂದು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಡಾ.ಜೀವಂದರ ಜೈನ್, ಮಾತೃಶ್ರೀ ಹೇಮಾವತಿ ಅಮ್ಮನವರ ಪ್ರೀತಿಯ ಕಾರ್ಯಕ್ರಮ ಜ್ಞಾನ ವಿಕಾಸ ಎಲ್ಲಾ ಮಹಿಳೆಯರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ ಎಂದು ಶುಭ ಹಾರೈಸಿದರು. ಪ್ರಾದೇಶಿಕ ನಿರ್ದೇಶಕರರಾದ ಗೀತಾ ಮೇಡಂ ಇಂದಿನ ಮಹಿಳೆಯರು ಪ್ರಗತಿ ಹೊಂದಿದ್ದು ಇನ್ನಷ್ಟು ಜಾಗೃತಗೊಳ್ಳಬೇಕು, ಮೋಸ ವಂಚನೆಗೆ ಬಲಿಯಾಗದಿರಿ ಎಂದರು. ಎಂದು ಮಾರ್ಗದರ್ಶನ ನೀಡಿದರು. ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಅವರು ತಾಲೂಕಿನ 25ನೇ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ ಆಗಿದ್ದು ದಾಖಲಾತಿಯನ್ನೂ ಕೇಂದ್ರದ ಸದಸ್ಯರಿಗೆ ಹಸ್ತಾಂತರಿಸಿದರು.
ತಾಲೂಕಿನ ಜ್ಞಾನ ವಿಕಾಸ ಕೇಂದ್ರದ ಪದ್ಮಾವತಿ ಹೆಗ್ಗೋಡು ಸ್ವ ಉದ್ಯೋಗ ಮಾಡುತ್ತಿದ್ದು ಲಕ್ಷ್ಮಮ್ಮ ಮನೆ ಮದ್ದು ತಯಾರಿಸುತಿದ್ದು ಆಯ್ದ 2 ಹಿರಿಯ ಸದಸ್ಯರಿಗೆ ಗುರುತಿಸಿ ಮುಖ್ಯ ನಿರ್ವಹಣಾಧಿಕಾರಿಗಳು ಗೌರವಾರ್ಪಣೆ ಮಾಡಿದರು. ಕೇಂದ್ರದ ಸದಸ್ಯರಿಗೆ, ಪುಷ್ಪ ಗುಚ್ಛ ಕರಕುಶಲ ವಸ್ತುಗಳ ಸ್ಪರ್ದೆ ಹಮ್ಮಿಕೊಂಡಿದ್ದು, ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪಿಎಂ ದಿಶಾ ಪ್ರಮಾಣಪತ್ರವನ್ನು ಜ್ಞಾನ ವಿಕಾಸ ಕೇಂದ್ರದ ಓರ್ವ ಸದಸ್ಯರಿಗೆ ವಿತರಿಸಲಾಯಿತು. ವಿಶೇಷ ಮಂಜೂರಾತಿ ಆಗಿರುವ, ಸಂಪೂರ್ಣ ಸುರಕ್ಷಾ ಸಹಾಯಧನ.
ತುರ್ತು ಪರಿಹಾರ ನಿಧಿ. ಸಿಡ್ಬಿ ಸಮೃದ್ಧಿ ಯೋಜನೆಯ ಚೆಕ್ಅನ್ನು ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಅವರು ಹಾಗೂ ವೇದಿಕೆ ಮೇಲಿರುವ ಎಲ್ಲಾ ಗಣ್ಯರು ವಿತರಿಸಿದರು. ಆಪ್ತ ಸಮಾಲೋಚಕರಾದ ವಿನುತ ಮುರಳೀಧರ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಸೊಪ್ಪುಗುಡ್ಡೆ ರಾಘವೇಂದ್ರ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು. ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ನಿರ್ದೇಶಕರಾದ ಚಂದ್ರಶೇಖರ್, ತಾಲೂಕಿನ ಯೋಜನಾಧಿಕಾರಿ ಮಾಲತಿ ದಿನೇಶ್, ಜ್ಞಾನ ವಿಕಾಸ ವಿಭಾಗದ ಯೋಜನಾಧಿಕಾರಿ ರತ್ನ ಮೈಪಾಲ್, ಸಮನ್ವಯಾಧಿಕಾರಿ ಪ್ರಮೀಳಾ ನಿರ್ವಹಿಸಿದ್ದು ಎಲ್ಲಾ ಮೇಲ್ವಿಚಾರಕರು, ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಸೇವಾ ಪ್ರತಿನಿಧಿಗಳು ಭಾಗವಹಿಸಿದರು. ನೂರಾರು ಮಂದಿ ಮಹಿಳೆಯರು ಭಾಗವಹಿಸಿದ್ದರು.
