ತೀರ್ಥಹಳ್ಳಿಯಲ್ಲಿ 4 ದಿನ ಬೋಟಿಂಗ್ ಉತ್ಸವ್!
– ತುಂಗಾ ನದಿಯಲ್ಲಿ ಬೋಟಿಂಗ್ ಎಂಜಾಯ್ಮೆಂಟ್!
– ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ!
– ನೀವೂ ಒಮ್ಮೆ ತುಂಗಾ ನದಿಯ ಸೊಬಗು ನೋಡಬಹುದು
NAMMUR EXPRESS NEWS
ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಜಾತ್ರೆಯೆಂದರೆ ಊರ ಹಬ್ಬ. ಊರಿಗೆ ಊರೇ ಓಡಾಡಿ, ಆಡಿ, ನಲಿದಾಡುವ ಧಾರ್ಮಿಕ ಹಬ್ಬ. ಆ ಜಾತ್ರಾ ಮಹೋತ್ಸವದ ಮೆರುಗನ್ನು ಇನ್ನಷ್ಟು ಹೆಚ್ಚಿಸಲು ಬರುತ್ತಿದೆ ಬೋಟಿಂಗ್ ಉತ್ಸವ್!. ಕಾರ್ಕಳದ ಕಾರ್ಲ ಕರಾವಳಿ ಅಡ್ವೆಂಚರ್ಸ್ ವತಿಯಿಂದ ಜ.11ನೇ ಗುರುವಾರದಿಂದ 14ನೆ ಭಾನುವಾರದವರೆಗೂ ತೀರ್ಥಹಳ್ಳಿಯ ತುಂಗಾ ತೀರದಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ತೀರ್ಥಹಳ್ಳಿಯ ಸಮಸ್ತ ನಾಗರಿಕರಿಗೆ ಎಳ್ಳಮವಾಸ್ಯೆ ಜಾತ್ರೆಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ ಜಾತ್ರೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ‘ಕಾರ್ಲಾ ಕರಾವಳಿ ಅಡ್ವೆಂಚರ್ಸ್’ ಕಾರ್ಕಳ ಮುಂದಾಗಿದ್ದು ತೀರ್ಥಹಳ್ಳಿಯಲ್ಲಿ ಬೋಟಿಂಗ್ ಉತ್ಸವವನ್ನು ಪ್ರಸ್ತುತ ಪಡಿಸುತ್ತಿದೆ.
ಬೋಟಿಂಗ್ ಸಮಯ
ಬೋಟಿಂಗ್ ಬೆಳಿಗ್ಗೆ 6 ರಿಂದ ಸಂಜೆ 6-30 ರವರೆಗೆ ನಡೆಯಲಿದೆ. ಬೋಟಿಂಗ್ ತೀರ್ಥಹಳ್ಳಿ ರಥಬೀದಿಯ ತುಂಗಾತೀರದಲ್ಲಿ ಆಯೋಜಿಸಲಾಗಿದ್ದು, ಥ್ರಿಲ್ಲಿಂಗ್ ಅಂಡ್ ಎಕ್ಸೈಟಿಂಗ್ ಆಗಿ ಇರಲಿದೆ. ಆಯೋಜಕರು ತರಬೇತಿ, ಅನುಭವ ಹಾಗು ಕೇರಿಂಗ್ ಹೊಂದಿದವರಾಗಿದ್ದಾರೆ.
ತುಂಗಾ ನದಿ ಸೌಂದರ್ಯ ಸವಿಯಿರಿ..!
ಎಲ್ಲಾ ವಯಸ್ಸಿನವರೂ ಬೋಟಿಂಗ್ ಥ್ರಿಲ್ ಅನುಭವಿಸಬಹುದಾಗಿದೆ. ಮಕ್ಕಳು ಮತ್ತು ಫ್ಯಾಮಿಲಿಗೆ ಇದೊಂದ್ ಫುಲ್ ಪ್ಯಾಕೇಜ್ ಎಂಟರ್ಟೈನ್ಮೆಂಟ್ ಆಗಿದೆ. ತುಂಗಾ ನದಿ ನೀರಿನಲ್ಲಿ ಬೋಟಿಂಗ್ ಮಾಡುತ್ತಾ ಸುತ್ತಲಿನ ಪ್ರಕೃತಿ ಸೌಂದರ್ಯ ಸವಿಯುವುದರೊಂದಿಗೆ ಒಂದು ಅಡ್ವೆಂಚರಸ್ ಅನುಭವ ಹೊಂದಲು ‘ಕಾರ್ಲಾ ಕರಾವಳಿ ಅಡ್ವೆಂಚರ್ಸ್’ ಕರೆ ನೀಡಿದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯ್ತಿ (ಶಾಲಾ-ಕಾಲೇಜು ಗುರುತಿನ ಪತ್ರ ಕಡ್ಡಾಯ)ಯನ್ನೂ ನೀಡುತ್ತಿದ್ದಾರೆ.
ಎಲ್ಲರೂ ಬನ್ನಿ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಹೆಚ್ಚಿನ ಮಾಹಿತಿಗಳಿಗಾಗಿ
ಪ್ರಚಿತ್ ಕುಮಾರ್ 9980952026
ಗುರು ಕಿರಣ್ 9900883677 ಸಂಪರ್ಕಿಸಿ.