ಸರ್ಕಾರದ 5ನೇ ಗ್ಯಾರಂಟಿ: ಶಿವಮೊಗ್ಗ ಸಜ್ಜು
– ಜ.12 ಶಿವಮೊಗ್ಗದಲ್ಲಿ ಉದ್ಘಾಟನೆ
– ಯುವ ನಿಧಿಯ ಉದ್ಘಾಟನೆಗೆ ಕಾಂಗ್ರೆಸ್ ಸಿದ್ಧತೆ
– ನುಡಿದಂತೆ ನಡೆದ ನಮ್ಮ ಕಾಂಗ್ರೆಸ್ ಸರಕಾರ; ಕಿಮ್ಮನೆ ರತ್ನಾಕರ್
– 2000 ಬಸ್ ಅಲ್ಲಿ ಬರಲಿದ್ದಾರೆ ಜನ
NAMMUR EXPRESS NEWS:
ತೀರ್ಥಹಳ್ಳಿ,: ಶಿವಮೊಗ್ಗದಲ್ಲಿ ಜ.12ರಂದು ಯುವ ನಿಧಿ ಯೋಜನೆಗೆ ಚಾಲನೆ ಸಿಗಲಿದೆ. ಈ ಬಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸರ್ಕಾರದ ಕೊನೆಯ ಗ್ಯಾರಂಟಿ ಯೋಜನೆಯಾದ “ಯುವ ನಿಧಿಗೆ ಜ. 12ರಂದು ಶಿವಮೊಗ್ಗದ ಫ್ರೀಡಂ ಪಾರ್ಕ್ ಮೈದಾನದಲ್ಲಿ ಚಾಲನೆ ನೀಡಲಿದ್ದು ನಮ್ಮ ಸರ್ಕಾರ ನುಡಿದಂತೆ ನಡೆದುಕೊಂಡಿದೆ ಹಾಗೂ ನಡೆದುಕೊಳ್ಳಲಿದೆ. ಈ ಯುವನಿಧಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ, ಎಂಸಿ ಸುಧಾಕರ್, ಶರಣ್ ಪ್ರಕಾಶ್ ಪಾಟೀಲ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಲು ನಿಮ್ಮೆಲ್ಲರ ಸಹಕಾರ ಬೇಕು ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ 2000 ಬಸ್ಸುಗಳನ್ನು ಆಯೋಜನೆ ಮಾಡಲಾಗಿದೆ. ತೀರ್ಥಹಳ್ಳಿ ತಾಲೂಕಿನಾಧ್ಯoತ ಇದರ ಫಲಾನುಭವಿಗಳು ಭಾಗವಹಿಸಿಬೇಕು. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಆರ್ ಎo ಮಂಜುನಾಥಗೌಡ, ಕಲಗೋಡು ರತ್ನಾಕರ್, ಮತ್ತು ದಿನೇಶ್, ಕೆಸ್ತೂರು ಮಂಜುನಾಥ್, ಡಿಎಸ್ ವಿಶ್ವನಾಥ ಶೆಟ್ಟಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಗೀತಾ ರಮೇಶ್, ಉಪಾಧ್ಯಕ್ಷ ರೆಹಮತ್ತುಲ್ಲಾ ಅಸಾದಿ, ಆದರ್ಶ ಹುಂಚದ ಕಟ್ಟೆ, ಸುಶೀಲಾ ಶೆಟ್ಟಿ, ಮಂಜುಳಾ ನಾಗೇಂದ್ರ, ಅಮರನಾಥ್ ಶೆಟ್ಟಿ ಹಾಗೂ ಪ್ರಮುಖರು. ಉಪಸ್ಥಿತರಿದ್ದರು.
