ಊರಿಗೆ ಬಂತು ದೊಡ್ಡ ಹೆಬ್ಬಾವು!
– ತೀರ್ಥಹಳ್ಳಿಯ ಹೊಸ ಅಗ್ರಹಾರ ಬಳಿ ಹೆಬ್ಬಾವು ಪತ್ತೆ
– ಹಾವು ನೋಡಿ ಗಾಬರಿಗೊಂಡ ಜನ
NAMMUR EXPRESS NEWS
ತೀರ್ಥಹಳ್ಳಿ: ಬೃಹತ್ ಹೆಬ್ಬಾವೊಂದು ತೀರ್ಥಹಳ್ಳಿ ತಾಲೂಕು ಹೊಸ ಅಗ್ರಹಾರ ಬಳಿ ಶುಕ್ರವಾರ ಸಂಜೆ ಪತ್ತೆಯಾಗಿದೆ.
ರಾಮಕೃಷ್ಣ ಸಮೀಪದ ತೋರಳಿ ಬಳಿ ಡಾಕಪ್ಪ ಗೌಡ ಹಾಗೂ ಚಿನ್ನಪ್ಪ ಗೌಡ ಅವರ ತೋಟದ ಬಳಿ ಬೃಹತ್ ಗಾತ್ರದ ಹಾವು ನೋಡಿ ಗಾಬರಿಗೊಂಡ ಜನ ಇದೀಗ ಅರಣ್ಯ ಇಲಾಖೆಗೆ ಮಾಹಿತಿ ತಲುಪಿಸಿದ್ದಾರೆ. ಇತ್ತೀಚಿಗೆ ಅರಣ್ಯದಿಂದ ಊರಿಗೆ ಹಾವು ಬರುವ ಪ್ರಕರಣಗಳು ಹೆಚ್ಚಾಗಿವೆ. ಈ ನಡುವೆ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿರುವುದು ಗಾಬರಿ ಹುಟ್ಟಿಸಿದೆ.