Categories
ತೀರ್ಥಹಳ್ಳಿ

ಬಹುಗ್ರಾಮ ಕುಡಿಯುವ ನೀರು ಯೋಜನೆ ಕೈ ಬಿಡಬೇಡಿ!

ಬಹುಗ್ರಾಮ ಕುಡಿಯುವ ನೀರು ಯೋಜನೆ ಕೈ ಬಿಡಬೇಡಿ!
– ಯೋಜನೆ ರದ್ದಾಗಬಾರದು, ಜನರಿಗೆ ಕುಡಿಯುವ ನೀರು ಸಿಗಬೇಕು
– ತೀರ್ಥಹಳ್ಳಿ .ಪಂ ಒಕ್ಕೂಟ ಅಧ್ಯಕ್ಷರಾದ ಟಿ ಜೆ ಅನಿಲ್

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ 36 ಗ್ರಾಮ ಪಂಚಾಯತಿಯ ಎಲ್ಲಾ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರು ಯೋಜನೆ ಕೈ ಬಿಡಬೇಡಿ. ಯೋಜನೆ ರದ್ದಾಗಬಾರದು, ಜನರಿಗೆ ಕುಡಿಯುವ ನೀರು ಸಿಗಬೇಕು ಎಂದು ತೀರ್ಥಹಳ್ಳಿ .ಪಂ ಒಕ್ಕೂಟ ಅಧ್ಯಕ್ಷರಾದ ಟಿ ಜೆ ಅನಿಲ್ ಒತ್ತಾಯಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಲುವಾಗಿ ಭೀಮೇಶ್ವರ ಸಂಗಮದಿಂದ ಹೋರಾಟ ನಡೆಯುತ್ತಿದೆ. ಆದರೆ ಈ ಯೋಜನೆಯಿಂದ ತಾಲೂಕಿಗೆ ಅನುಕೂಲವಿದೆ. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಗೆ ಯಾರೂ ಅಡ್ಡಿಪಡಿಸಬಾರದು.

ಸಾವಿರಾರು ಜನರಿಗೆ ಅನುಕೂಲ ಆಗುವ ಯೋಜನೆಯನ್ನು ಯಾವ ಕಾರಣಕ್ಕೂ ರದ್ದು ಆಗಬಾರದು ರದ್ದು ಆಗಲು ನಾವು ಬಿಡುವುದಿಲ್ಲ. ಅವರು ಜೀವನ ಉಳಿಸಿ ಅಂದರೆ ನಾವು ಜೀವ ಉಳಿಸಿ ಎಂದು ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾ.ಪಂ ಒಕ್ಕೂಟ ಅಧ್ಯಕ್ಷರಾದ ಟಿ ಜೆ ಅನಿಲ್ ಹೇಳಿದರು. ಭೀಮೇಶ್ವರ ಸಂಗಮದ ಹೋರಾಟ ಬೇರೆ ದಿಕ್ಕಿಗೆ ಹೋಗುತ್ತಿದೆ ಎಂಬ ಆತಂಕ ಇದೆ. ತಾಲೂಕಿನಲ್ಲಿ 36 ಗ್ರಾಮ ಪಂಚಾಯಿತಿ ಇದರ ಫಲ ಅನುಭವಿಸುತ್ತದೆ. 32 ಗ್ರಾಮಪಂಚಾಯಿತಿ ಈಗಾಗಲೇ ಇದಕ್ಕೆ ಒಪ್ಪಿಗೆ ಸೂಚಿಸಿವೆ. ಸಿಂಗನಬಿದರೆ ಮತ್ತು ಮಂಡಗದ್ದೆ ಈ ಯೋಜನೆಯಲ್ಲಿ ಬರುವುದಿಲ್ಲ. ಉಳಿದಂತೆ ಹೊಸಳ್ಳಿ, ಮೇಲಿನಕುರುವಳ್ಳಿ ಹೆಗ್ಗೋಡು, ತೀರ್ಥಮುತ್ತೂರು ಇಲ್ಲಿಯವರೆಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ತಟಸ್ಥ ಹೊಂದಿದ್ದಾರೆ. ಅನುಷ್ಠಾನ ಮಾಡಿ ಅಥವಾ ಮಾಡಬೇಡಿ ಎನ್ನುವುದರ ಬಗ್ಗೆ ಹೇಳಿಲ್ಲ ಎಂದರು.

ಹೋರಾಟದ ಆರಂಭದಲ್ಲಿ ರೈತರಿಗೆ ತೊಂದರೆ ಆಗುತ್ತದೆ ಎಂದು ಹೇಳುತ್ತಿದ್ದರು. ನಮ್ಮಲ್ಲಿ ಕೆಲವು ಗ್ರಾಮ ಪಂಚಾಯಿತಿಗಳು ನದಿಯ ನೀರನ್ನು ಅವಲಂಬಿಸಿದ್ದರೆ ಉಳಿದ ಕೆಲವು ಗ್ರಾಮ ಪಂಚಾಯಿತಿಗಳು ಬೋರ್ ವೆಲ್ ನೀರನ್ನು ಅವಲಂಬಿಸಿದೆ. ವರ್ಗ 1 ನ್ನು ಬಳಸಿ ಬೋ‌ರ್ ತೆಗೆಯುವ ಪರಿಸ್ಥಿತಿಯಲ್ಲಿ ನಾವಿಲ್ಲ. ಈ ಯೋಜನೆ ಜಾರಿಯಾಗಬೇಕು. ಶುದ್ಧ ನೀರು ಕೊಡುವ ಜೊತೆಗೆ ಯೋಜನೆ ಜಾರಿಯಾದರೆ 1 ಲಕ್ಷ ಹಣ ಪ್ರತಿಯೊಂದು ಗ್ರಾಮಪಂಚಾಯಿತಿಗೆ ಉಳಿಯುತ್ತದೆ ಎಂದರು.
ತಾಲೂಕಿನಲ್ಲಿ ಪಟ್ಟಣ ಹೊರತು ಪಡಿಸಿ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ.

ನದಿಯ ಪಕ್ಕದಲ್ಲಿ ಗ್ರಾಮಗಳು ಇದ್ದರೂ ಎರಡು ದಿನಕ್ಕೆ ಒಂದು ಬಾರಿ ನೀರು ಬಿಡುತ್ತಿದ್ದೇವೆ. ಶುದ್ಧ ಕುಡಿಯುವ ನೀರು ಸಿಕ್ಕಿದರೆ ಮೋಟರ್ ಅವಶ್ಯಕತೆ ಇಲ್ಲ, ವಿದ್ಯುತ್ ಉಳಿಯುತ್ತದೆ. ರೈತರ ಮಾರಣಹೋಮ ಆಗುತ್ತಿದೆ. ಎಂದು ಬೀದಿಗೆ ಇಳಿಯುವುದು ಸರಿಯಲ್ಲ. ದಲಿತ ಕೇರಿಗಳಿಗೆ ಶುದ್ಧ ಕುಡಿಯುವ ನೀರೇ ಸರಿ ಸಿಗುತ್ತಿಲ್ಲ. ಇಂತಹ ಯೋಜನೆ ಜಾರಿಯಾದರೆ ಎಲ್ಲರಿಗೂ ಸಿಗುತ್ತದೆ. ಈ ಯೋಜನೆ ಜಾರಿ ಆಗಬಾರದು ಎಂದು ಇವರ ಹಿಂದೆ ಯಾರೋ ಇದ್ದಾರೆ ಎಂಬ ಸಂಶಯ ಹುಟ್ಟುತ್ತಿದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರಾಗಿರುವ ನವೀನ್ ಹೊಸಕೆರೆ, ಚಂದ್ರಶೇಖರ, ನವೀನ್ ಆರ್, ಸುಬ್ರಮಣ್ಯ, ಕವಿತಾ ಭಾಸ್ಕರ್, ಚಂದ್ರಶೇಖರ ಲೋಕೇಶ್, ರಾಘವೇಂದ್ರ ಪವಾರ್ ಸೇರಿ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.