ತೀರ್ಥಹಳ್ಳಿಯ ತಾರಗೊಳ್ಳಿಯಲ್ಲಿ ಏ. 15ಕ್ಕೆ ಅದ್ದೂರಿ ಪಲ್ಲಕ್ಕಿ ಉತ್ಸವ ಮತ್ತು ಜಾತ್ರೆ
– ಮಲೆನಾಡಿನ ಕಾರಣಿಕ ದೇಗುಲದಲ್ಲಿ ಸಂಭ್ರಮ
– ಕಣ್ಮನ ಸೆಳೆಯಲಿದೆ “ಶ್ರೀ ಕ್ಷೇತ್ರ ಮಹಾತ್ಮೆ ” ಯಕ್ಷಗಾನ: ಸರ್ವರಿಗೂ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ತಾರಗೊಳ್ಳಿ ಶ್ರೀ ಯಕ್ಷೆ ಧಾರ್ಮಿಕ ಸೇವಾ ಟ್ರಸ್ಟ್ ವತಿಯಿಂದ ದೇಗುಲದಲ್ಲಿ ಏ.14, ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು,ಏ. 15 ಮಂಗಳವಾರ “ಪಲ್ಲಕ್ಕಿ ಉತ್ಸವ” ಮತ್ತು “ಜಾತ್ರಾ ಮಹೋತ್ಸವ” ಅದ್ದೂರಿಯಾಗಿ ನಡೆಯಲಿದೆ.
ಏ. 14ನೇ ಸೋಮವಾರ ಹಾಗೂ 15ನೇ ಮಂಗಳವಾರದಂದು ತಾರಗೊಳ್ಳಿಯ ಶ್ರೀ ಯಕ್ಷೆ ದೇವಿಯ “ಪ್ರತಿಷ್ಠಾ ವರ್ಧಂತಿ ಮಹೋತ್ಸವ’ವನ್ನು ಆಯೋಜಿಸಲಾಗಿದೆ.
ವಿವಿಧ ಧಾರ್ಮಿಕ ಕಾರ್ಯಕ್ರಮಗಳ ರಂಗು!
ಏ.14ನೇ ಸೋಮವಾರ ಸಂಜೆ 6-30 ರಿಂದ
ವೇ|| ಬ್ರ|| ಕೂಡಲಿ ಅರುಣಾಚಲ ಅಯ್ಯರ್, ಶಿವಮೊಗ್ಗ ಇವರ ನೇತೃತ್ವದಲ್ಲಿ ಫಲ ಪ್ರಾರ್ಥನೆ, ಗುರು ಗಣಪತಿ ಪೂಜೆ, ಪುಣ್ಯಾಹ ವಾಚನ, ಮಹಾ ಸಂಕಲ್ಪ, ಚತುರ್‌ವಿಂಶತಿ ದ್ರವ್ಯಕಲತ ಸಹಿತ ಬ್ರಹ್ಮಕುಂಭ ಸ್ಥಾಪನೆ, ಮಹಾಪೂಜೆ, ಮಹಾಮಂಗಳಾರತಿ ವೈಭವದಿಂದ ನಡೆಯಿತು.
– ಏ.15ಕ್ಕೆ ಕಣ್ಮನ ಸೆಳೆಯಲಿದೆ “ಪಲ್ಲಕ್ಕಿ ಉತ್ಸವ”
ಏ.15ನೇ ಮಂಗಳವಾರ ಬೆಳಿಗ್ಗೆ 8-30 ರಿಂದ ಮಹಾ ಗಣಪತಿ ಪೂಜೆ, ಪುಣ್ಯಾಹ ವಾಚನ, ದೇವನಾಂದಿ, ಮಹಾ ಸಂಕಲ್ಪ, ಕಲಾ-ತತ್ವ ಅಧಿವಾಸ ಹೋಮ, ದ್ರವ್ಯಕಲಶ ಸಹಿತ ಶ್ರೀ ದೇವಿಗೆ ಬ್ರಹ್ಮಕುಂಭಾಭಿಷೇಕ, ಪಂಚದುರ್ಗಾ ಹೋಮ, ಕನ್ನಿಕಾ ಸುಹಾಸಿನಿ ಪೂಜೆ, ಪೂರ್ಣಾಹುತಿ ಶ್ರೀ ದೇವಿಗೆ ಪುಷ್ಪಾಲಂಕಾರ
ತತ್ವಮಸಿ ರಾಘವೇಂದ್ರ ಹಂದೆ, ಬೆಜ್ಜವಳ್ಳಿ ಇವರ ನೇತೃತ್ವದಲ್ಲಿ “ಪಲ್ಲಕ್ಕಿ ಉತ್ಸವ”ದ ರಂಗು ಕಣ್ಮನ ಸೆಳೆಯಲಿದೆ.
ಮಧ್ಯಾಹ್ನ 12-30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಂತರ “ಮಹಾ ಅನ್ನಸಂತರ್ಪಣೆ” ಆಯೋಜಿಸಲಾಗಿದೆ. ಅನ್ನಸಂತರ್ಪಣೆಯ ಸೇವಾಕರ್ತರು ಶ್ರೀ ಸನ್ನಿಧಿ ಕೆಟರರ್ಸ್,
ಎನ್. ಆರ್. ಕಾಲೋನಿ, ಬೆಂಗಳೂರು.
– ಶ್ರೀ ಕ್ಷೇತ್ರ ಮಹಾತ್ಮೆ ” ಯಕ್ಷಗಾನದ ವೈಭವ!
15ಕ್ಕೆ ರಾತ್ರಿ 7-00ಕ್ಕೆ (ಕಾಲಮಿತಿ) ದೇವಸ್ಥಾನದ ಆವರಣದಲ್ಲಿ ವಿದ್ಯುದ್ದೀಪಾಲಂಕೃತವಾದ ಭವ್ಯ ರಂಗ ಮಂಟಪದಲ್ಲಿ ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ, ಮಡಾಮಕ್ಕಿ ಇವರು “ಶ್ರೀ ಕ್ಷೇತ್ರ ಮಹಾತ್ಮೆ” ಎಂಬ ಪುಣ್ಯ ಕಥಾಭಾಗವನ್ನು ಆಡಿತೋರಿಸಲಿರುವರು.
ತಾವೆಲ್ಲರೂ ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀದೇವಿಯ ಮತ್ತು ಪರಿವಾರ ದೇವತೆಗಳ ಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದಾರೆ.
– ಪ್ರತೀ ತಿಂಗಳ ಸಂಕ್ರಮಣದಂದು ವಿಶೇಷ ಪೂಜೆ!
ಈ ಪುಣ್ಯ ಕಾರ್ಯಕ್ರಮಕ್ಕೆ ತಾವು ಸಹಕರಿಸಲು ಇಚ್ಚಿಸುವಲ್ಲಿ ಕೆನರಾ ಬ್ಯಾಂಕ್, ಕೋಣಂದೂರು
ಶಾಖೆಯ ಎಸ್. ಬಿ. ಖಾತೆ ಸಂಖ್ಯೆ 0562101020243
(IFSC Code: CNRB0000562) ಖಾತೆಗೆ ಕಳುಹಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳಲಾಗಿದೆ
ಈ ಎಲ್ಲಾ ಕಾರ್ಯಕ್ರಮಕ್ಕೆ ಧರ್ಮದರ್ಶಿಗಳು ಟಿ. ವಿ. ವಿಷ್ಣುಮೂರ್ತಿ ರಾವ್, ತಾರಗೊಳ್ಳಿ, ಹಾಗೂ ಟಿ. ವಿ. ನಾಗಭೂಷಣ ರಾವ್ ಶ್ರೀ ಯಕ್ಷೆ ಧಾರ್ಮಿಕ ಸೇವಾ ಟ್ರಸ್ಟ್ (ರಿ.), ತಾರಗೊಳ್ಳಿ ಮತ್ತು ಗ್ರಾಮಸ್ಥರು ಹಾಗೂ ಭಕ್ತಾದಿಗಳು, ತಾರಗೊಳ್ಳಿ ಈ ಮೂಲಕ ಸ್ವಾಗತ ಕೋರುತ್ತಿದ್ದಾರೆ.
