Categories
ಬೆಂಗಳೂರು

ಬಿಸಿಲು ಮಳೆಗೆ ಆರೋಗ್ಯ ಸಮಸ್ಯೆ ಹೆಚ್ಚಳ!

ಬಿಸಿಲು ಮಳೆಗೆ ಆರೋಗ್ಯ ಸಮಸ್ಯೆ ಹೆಚ್ಚಳ!
– ಜನ ಕಲುಷಿತ ನೀರು, ಕಳಪೆ ಆಹಾರ, ತಂಪು ಪಾನೀಯ ಮೊರೆ..!
– ಆರೋಗ್ಯಕ್ಕೆ ಸಂಕಷ್ಟ -ತಜ್ಞರಿಂದ ಎಚ್ಚರಿಕೆ.!

NAMMUR EXPRESS NEWS
ಬೆಂಗಳೂರು: ಬಿರುಬಿಸಿಲು, ಆಕಾಲಿಕವಾಗಿ ಅಲ್ಪ-ಸ್ವಲ್ಪ ಮಳೆಯಿಂದಾಗಿ ಮತ್ತಷ್ಟು ಬೇಗೆ ಹೆಚ್ಚುತ್ತಿದ್ದು ಇದರಿಂದ ಪಾರಾಗಲು ಜನರು ತಂಪು ಪಾನೀಯ ಹಾಗೂ ಇತರೆ ತಂಪು ಪದಾರ್ಥಗಳಿಗೆ ಮೊರೆ ಹೋಗುತ್ತಿದ್ದಾರೆ ಇದರಿಂದಾಗಿ ಅತಿಸಾರ ಸೇರಿದಂತೆ ಇತರೆ ಅನಾರೋಗ್ಯ ಸಮಸ್ಯೆಗೊಳಗಾಗುತ್ತಿದ್ದಾರೆ. ಹಲವಾರು ಆಸ್ಪತ್ರೆಗಳಲ್ಲಿ ಹೊಟ್ಟೆ ನೋವು ಹಾಗೂ ಇತರೆ ಸೋಂಕು ಸಮಸ್ಯೆಗಳಿಂದ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ.

ಕಲುಷಿತ ನೀರು, ತೊಳೆಯದ ಹಣ್ಣುಗಳು ಹಾಗೂ ನೈರ್ಮಲ್ಯ ಕಾಪಾಡದೆ ಆಹಾರ ತಯಾರಿಕೆ ಮಾಡುವುದು, ಕೆಟ್ಟ ನೀರಿನಿಂದ ಮಾಡಿದ ಮಂಜುಗಡ್ಡೆಯಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ರಿಫ್ರೆಶ್ ಪಾನೀಯದಂತೆ ಕಾಣುವ ಪಾನೀಯವು ಗ್ರಾಹಕರನ್ನು ಹಾನಿಕಾರಕ ಬ್ಯಾಕ್ಟಿರಿಯಾ ಮತ್ತು ಗಂಭೀರ ಆರೋಗ್ಯ ಅಪಾಯಗಳಿಗೆ ಒಳಗಾಗುವಂತೆ ಮಾಡಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ರಸ್ತೆಬದಿಯ ಜ್ಯೂಸ್ ಅಂಗಡಿಗಳು ಮೂಲಭೂತ ನೈರ್ಮಲ್ಯ ಅಭ್ಯಾಸಗಳನ್ನು ಅನುಸರಿಸಲು ವಿಫಲವಾಗಿವೆ. ಸಂಸ್ಕರಿಸದ ನೀರು, ತೊಳೆಯದ ಹಣ್ಣುಗಳು ಮತ್ತು ಕಲುಷಿತ ಮೂಲಗಳಿಂದ ತಯಾರಿಸಿದ ಮಂಜುಗಡ್ಡೆಗಳನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ಸಮಸ್ಯೆಗಳು ಎದುರಾಗುತ್ತಿವೆ.

ಈ ಸೋಂಕುಗಳು ಅತಿಸಾರ, ವಾಂತಿ, ಹೊಟ್ಟೆ ನೋವು ಮತ್ತು ಜ್ವರಕ್ಕೆ ಕಾರಣವಾಗಬಹುದು. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಆದರಿಂದ ನಿರ್ಜಲೀಕರಣ, ಎಲೆಕ್ಟೋಲೈಟ್ ಅಸಮತೋಲನ ಅಥವಾ ಹೆಚ್ಚು ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಅಪಾಯಕ್ಕೊಳಗಾಗುವುದು ಹೆಚ್ಚಾಗಿರುತ್ತದೆ

ಉರಿಯೂತದ ಕರುಳಿನ ಕಾಯಿಲೆ ಅಥವಾ ಕರುಳಿನ ಸಿಂಡೋಮ್ ಸಮಸ್ಯೆ ಇರುವವರು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಏಕೆಂದರೆ ಹೆಚ್ಚಿನ ತಾಪಮಾನವು ಬ್ಯಾಕ್ಟಿರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ವಾತಾವರಣ ಆಗಾಗ್ಗೆ ಬದಲಾಗುತ್ತಿದ್ದು, ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಬೇಯಿಸಿದ ಆಹಾರ ಪದಾರ್ಥಗಳು, ಫಿಲ್ಟರ್ ಮಾಡಿದ ನೀರನ್ನು ಮಾತ್ರ ಕುಡಿಯಬೇಕು. ಕಚ್ಚಾ ಆಹಾರ ತ್ಯಜಿಸಬೇಕು. ಚೆನ್ನಾಗಿ ತೊಳೆದ ತರಕಾರಿ ಹಾಗೂ ಹಣ್ಣುಗಳನ್ನು ಸೇವನೆ ಮಾಡಬೇಕು. ಜ್ವರ, ವಾಂತಿ, ನಿರ್ಜಲೀಕರಣದಂತ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯಬೇಕು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.