ತೀರ್ಥಹಳ್ಳಿಯಲ್ಲಿ ಅದ್ದೂರಿ ತೆಪ್ಪೋತ್ಸವ!
– ಶ್ರೀ ರಾಮೇಶ್ವರ ದೇವರ ಅದ್ದೂರಿ ತೆಪ್ಪೋತ್ಸವ
– 40 ಸಾವಿರಕ್ಕೂ ಹೆಚ್ಚು ಜನರ ಆಗಮನ
NAMMUR EXPRESS NEWS
ತೀರ್ಥಹಳ್ಳಿ: ಪುರಾಣ ಪ್ರಸಿದ್ದ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಅದ್ದೂರಿ ತೆಪ್ಪೋತ್ಸವ ಸಾವಿರಾರು ಜನರ ಕಣ್ಮನ ಸೆಳೆಯಿತು. ಎಳ್ಳಮಾವಾಸ್ಯೆ ಜಾತ್ರೆಯ ಕಡೆಯ ದಿನವಾದ ಶನಿವಾರ ತುಂಗಾ ನದಿಯಲ್ಲಿ ಅದ್ದೂರಿ ತೆಪ್ಪೋತ್ಸವದಲ್ಲಿ ತುಂಗಾ ನದಿಯಲ್ಲಿ ರಾಮೇಶ್ವರ ದೇವರ ಮೆರವಣಿಗೆ ಮಾಡಲಾಯಿತು. ನಂತರ ಪಟಾಕಿ ಆಕಾಶದೇತ್ತರಕೆ ಚಿಮ್ಮಿದವು. ಪಟಾಕಿ ಶಬ್ದಕ್ಕೆ ಜನ ಕೇಕೆ ಕೇಕೆ, ಶಿಳ್ಳೆ ಹಾಕಿದರು.
