Categories
ಹೊಸನಗರ

ಹೊಸನಗರದಲ್ಲಿ ಕೃಷಿ ಮೇಳದ ರಂಗು!

ಹೊಸನಗರದಲ್ಲಿ ಕೃಷಿ ಮೇಳದ ರಂಗು!
– ಕೃಷಿ ಪರಿಕರಗಳು ಕೃಷಿ ನಾವಿನ್ಯತೆಗಳ ಪ್ರಯೋಗ
– ಅತ್ಯಂತ ಯಶಸ್ವಿ ಕಾರ್ಯಕ್ರಮ: ನೀವು ಭೇಟಿ ನೀಡಿ
– ಜೆಸಿಐ ಹೊಸನಗರ, ಡಿಸಿಸಿ ಬ್ಯಾಂಕ್, ಕಿಲಂಬಿ ಸಂಸ್ಥೆ ಸಹಯೋಗ: ಪ್ರಾಣೇಶ್ ಕಾಮಿಡಿಗೆ ಜನರ ಫಿದಾ

NAMMUR EXPRESS NEWS
ಹೊಸನಗರ: ಹೊಸನಗರದಲ್ಲಿ ಜನವರಿ 12ರಿಂದ 14ರ ವರೆಗೆ ಆಯೋಜಿಸಿರುವ ರಾಜ್ಯ ಮಟ್ಟದ ಕೃಷಿ ಮೇಳ ಇದೀಗ ಅನೇಕ ಹೊಸತನಗಳಿಗೆ ಸಾಕ್ಷಿಯಾಗಿದೆ. ಕೃಷಿ ಪರಿಕರಗಳು, ಗಿಡಗಳು, ಅಲಂಕಾರಿಕ ವಸ್ತುಗಳು ಹಾಗೂ ಕೃಷಿ ಯಂತ್ರಗಳ ಪ್ರತಿಕ್ಷತೆಗಳು ಇಲ್ಲಿವೆ. ಇನ್ನೂ ಕೃಷಿಗೆ ಸಂಬಂಧಪಟ್ಟ ಅನೇಕ ಕಾರ್ಯಕ್ರಮಗಳನ್ನು ಈ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಮಲೆನಾಡಿನ ಕೃಷಿಕರಿಗೆ ಇದೊಂದು ಅತ್ಯುತ್ತಮ ಅವಕಾಶವನ್ನ ಹೊಸನಗರ ಜೆ ಸಿ ಐ ಡೈಮಂಡ್ ಹಾಗೂ ಕಿಲಂಬಿ ಗ್ರೂಪ್ ಹಾಗೂ ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಸಾವಿರಾರು ಮಂದಿ ಮೊದಲ ದಿನ ಜನವರಿ 12ರಂದು ಭೇಟಿ ನೀಡಿದ್ದು ಸಚಿವ ಮಧು ಬಂಗಾರಪ್ಪ ಶಾಸಕರಾದ ಆರಗ ಜ್ಞಾನೇಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ, ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ.

ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಗಂಗಾವತಿ ಪ್ರಾಣೇಶ್ ಅವರ ನಗೆ ಹಬ್ಬ, ಅತ್ಯಂತ ಜನಮನ ಸೆಳೆಯಿತು. ಸಾವಿರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಲೆನಾಡಿನ ತಂಡ ಮಾಡಿರುವ ಶಾಖಾಹಾರಿ ಸಿನಿಮಾದ ಪ್ರೊಮೋ ಕೂಡ ಕಂಡುಬಂದಿತ್ತು. ಜೊತೆಗೆ ಇಲ್ಲಿ ರಾಜ್ಯದ ವಿವಿಧ 150ಕ್ಕೂ ಹೆಚ್ಚು ಮಂದಿ ಸ್ಟಾಲ್ ಬಂದಿದೆ. ಈ ಕಾರ್ಯಕ್ರಮವನ್ನು ಮತ್ತೊಮ್ಮೆ ಮಲೆನಾಡಿಗರು ಕಣ್ತುಂಬಿಕೊಳ್ಳಲು ಭೇಟಿ ನೀಡಿ ಕೃಷಿಯ ವಿವಿಧ ಮಜಲುಗಳನ್ನ ನೋಡಬಹುದಾಗಿದೆ. ಜ.14ರವರೆಗೆ ಈ ಕೃಷಿ ಮೇಳ ನಡೆಯಲಿದೆ.

ನಮ್ಮೂರ ಎಕ್ಸ್ಪ್ರೆಸ್ ಕೂಡ ಈ ಕಾರ್ಯಕ್ರಮಕ್ಕೆ ಶುಭ ಹಾರೈಸುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.