Categories
ತೀರ್ಥಹಳ್ಳಿ

ಐಷಾರಾಮಿ ಕಾರಲ್ಲಿ ತುಂಬುತ್ತಾರೆ ದನ!

ಐಷಾರಾಮಿ ಕಾರಲ್ಲಿ ತುಂಬುತ್ತಾರೆ ದನ!
– ದನ ಸಾಗಣೆಗೆ ಹೊಸ ಪ್ಲಾನ್,ಮಧ್ಯರಾತ್ರಿ ಜಾನುವಾರು ತುಂಬುವ ಕೆಲಸ!
-ತೀರ್ಥಹಳ್ಳಿ ಬಾಳೇಬೈಲಿನಲ್ಲಿ ಮಧ್ಯರಾತ್ರಿ ಗೋ ಸಾಗಾಟ! ಸ್ಥಳೀಯರ ದೂರು.

NAMMUR EXPRESS NEWS
ತೀರ್ಥಹಳ್ಳಿ : ಐಷಾರಾಮಿ ಕಾರುಗಳಲ್ಲಿ ದನಗಳನ್ನು ಸಾಗಾಟ ಮಾಡುವ ಘಟನೆ ಇತ್ತೀಚಿಗೆ ತೀರ್ಥಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ತೀರ್ಥಹಳ್ಳಿಯಲ್ಲಿ ಮಧ್ಯರಾತ್ರಿ ಜಾನುವಾರುಗಳನ್ನ ಕಳ್ಳ ಸಾಗಾಟನೆ ಮಾಡುವ ಜಾಲ ಈಗ ಮತ್ತೆ ಸಕ್ರಿಯವಾಗಿದೆ. ಶುಕ್ರವಾರ ರಾತ್ರಿ ಸುಮಾರು 2:30 ವೇಳೆಗೆ KA 19 ನೋಂದಣಿ ಉಳ್ಳ ಹೈಟೆಕ್ XUV ಕಾರ್ ನಲ್ಲಿ ದನಗಳನ್ನು ಸಾಗಣೆ ಮಾಡಲಾಗಿದೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತೀರ್ಥಹಳ್ಳಿಯಲ್ಲಿ ಬೀಡಾಡುವ ದನಗಳ ಹಾವಳಿ ಹೆಚ್ಚಾಗಿದ್ದು, ಇದನ್ನೇ ಪ್ಲಸ್ ಮಾಡಿಕೊಂಡ ದನ ಸಾಗಾಣಿಕೆಕಾರರು ಕಾರುಗಳಲ್ಲಿ ಹಾಗೂ ಪಿಕಪ್ ಇತರೆ ವಾಹನಗಳಲ್ಲಿ ದನ ಸಾಗಣೆ ಮಾಡಲಾಗುತ್ತಿದೆ ಎಂಬ ದೂರು ಇದೀಗ ಕೇಳಿ ಬಂದಿದೆ.

ಪೊಲೀಸರು ಹಾಗೂ ಸ್ಥಳೀಯರು ಈ ಬಗ್ಗೆ ಗಮನ ವಹಿಸಬೇಕಾಗಿದೆ. ಶುಕ್ರವಾರ ರಾತ್ರಿ 2:30 ವೇಳೆಗೆ ಬಾಳೇ ಬೈಲಿನಲ್ಲಿ ದನವನ್ನು ಕಾರಿನಲ್ಲಿ ತುಂಬುತ್ತಿರುವ ವೇಳೆ ಸ್ಥಳೀಯರು ನೋಡಿದ್ದಾರೆ. ಈ ಬಗ್ಗೆ ಅವರನ್ನು ಹಿಡಿಯಲು ಹೋದಾಗ ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು ಪೊಲೀಸರು ಈ ಬಗ್ಗೆ ಗಮನ ವಹಿಸಬೇಕಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.