Categories
ತೀರ್ಥಹಳ್ಳಿ

ನಿದ್ದೆ ಮಂಪರಿನಲ್ಲಿ ದರೆ ಕೆಳಗೆ ಉರುಳಿದ ಪಿಕಪ್.

ನಿದ್ದೆ ಮಂಪರಿನಲ್ಲಿ ದರೆ ಕೆಳಗೆ ಉರುಳಿದ ಪಿಕಪ್.
* ಬೆಳ್ಳಂಬೆಳಿಗ್ಗೆ ವಿದ್ಯುತ್ ಕಂಬ ಮುರಿದ ಪಿಕಪ್ !
* ಚಾಲಕ ಕೂದಲೆಳೆಯ ಅಂತರದಲ್ಲಿ ಪಾರು.
NAMMUR EXPRESS NEWS
ತೀರ್ಥಹಳ್ಳಿ ತಾಲೂಕಿನ ಹಿರೇಸರ ದ ವರಸಿದ್ಧಿ ವಿನಾಯಕ ದೇವಸ್ಥಾನದ ಬಳಿ ಕೋಣಂದೂರಿನ ಮಲ್ಲಿಕಟ್ಟೆ ಮೂಲದ ವ್ಯಕ್ತಿ ಮದುವೆ ಸಮಾರಂಭದ ಅಲಂಕಾರ(ಡೆಕೋರೇಷನ್) ಮುಗಿಸಿಕೊಂಡು ಪಿಕಪ್ ನಲ್ಲಿ ಮನೆಗೆ ಹಿಂತಿರುಗುವ ಸಮಯದಲ್ಲಿ. ಏಪ್ರಿಲ್ 9 ಬೆಳಗ್ಗೆ ಸುಮಾರು 8:45 ರ ಸಮಯದಲ್ಲಿ ನಿದ್ದೆ ಮಂಪರಿನಲ್ಲಿದ್ದ ಡ್ರೈವರ್ ನ ಅಚಾತುರ್ಯದಿಂದ ಪಿಕಪ್ ವಿದ್ಯುತ್ ಕಂಬಕ್ಕೆ ಮತ್ತು ಮರಕ್ಕೆ ಡಿಕ್ಕಿ ಹೊಡೆದರ ಪರಿಣಾಮವಾಗಿ ಪಿಕಪ್ ರಸ್ತೆಯಿಂದ ಆಚೆಗೆ ನುಗ್ಗಿ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ.ಚಾಲಕ ಕೂದಲೆಳೆಯ ಅಂತರದಲ್ಲಿ ಪಾರು.
ನಿದ್ದೆ ಮಂಪರಿನಲ್ಲಿ ಯಾರು ವಾಹನಗಳನ್ನು ಚಲಾಯಿಸಬೇಡಿ ಹತ್ತು ನಿಮಿಷ ತಡ ಆದರೂ ಸರಿ. ನಿದ್ದೆ ಬಂದರೆ ವಾಹನ ನಿಲ್ಲಿಸಿ ನಿದ್ದೆ ಪೂರೈಸಿಯೆ ವಿಶ್ರಾಂತಿಯ ಬಳಿಕ ವಾಹನ ಚಲಾಯಿಸಿ.ಚಾಲಕರ ಬೇಜವಾಬ್ದಾರಿ ಯಿಂದ ಎದುರಿಗೆ ಬರುವ ವ್ಯಕ್ತಿ,ಪ್ರಾಣಿ,ಪಕ್ಷಿ ಗಳ ಪ್ರಾಣ ಹೋಗಬಹುದು. ಸದಾ ಎಚ್ಚರದಿಂದ ವಾಹನಗಳನ್ನು ಚಲಾಯಿಸಿ, ಇದು ನಮ್ಮೂರ್ ಎಕ್ಸ್ಪ್ರೆಸ್ ಮೀಡಿಯಾ ದ ಕಳಕಳಿಯ ಮನವಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.