Categories
ಕರಾವಳಿ

ರಾಜ್ಯ ಮಟ್ಟದಲ್ಲಿ ಎಕ್ಸಲೆಂಟ್ ಪಿಯು ವಿದ್ಯಾರ್ಥಿಗಳ ಸಾಧನೆ!

ರಾಜ್ಯ ಮಟ್ಟದಲ್ಲಿ ಎಕ್ಸಲೆಂಟ್ ಪಿಯು ವಿದ್ಯಾರ್ಥಿಗಳ ಸಾಧನೆ!

– ‘ನಾವೇನು ಕಮ್ಮಿ ಇಲ್ಲ’ ಎಂದು ತೋರಿಸಿಕೊಟ್ಟ ಎಕ್ಸಲೆಂಟ್ ಬಾಲಕರು!
– ಸಂಸ್ಥೆಯಲ್ಲಿ 241ಮಂದಿ 100ಕ್ಕೆ 100 ಅಂಕ!

NAMMUR EXPRESS NEWS
ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ಪಿಯು ಕಾಲೇಜು ರಾಜ್ಯ ಮಟ್ಟದಲ್ಲಿ ವಿಜ್ಞಾನ ವಿಭಾಗಕ್ಕೆ ನಾಲ್ಕನೇ ಹಾಗೂ ವಾಣಿಜ್ಯ ವಿಭಾಗದಲ್ಲಿ ನಾಲ್ಕನೇ ಸ್ಥಾನದೊಂದಿಗೆ 13 ಸ್ಥಾನಗಳನ್ನು ಪಡೆದು ಉತ್ತಮ ಫಲಿತಾಂಶ ದಾಖಲಿಸಿಕೊಂಡಿದೆ.
ವಿಜ್ಞಾನ ವಿಭಾಗದಲ್ಲಿ ಪ್ರಮುಖ್ ತುಳುಪುಳೆ (596) 4ನೇ ಸ್ಥಾನ ಗಳಿಸಿದ್ದಾರೆ. ರೋಹಿತ್ ಕಾಮತ್ (593), ಶಿಶಿರ್ ಎಚ್ ಶೆಟ್ಟಿ(593), ಥಿಯಾನ್ ಮಹೇಶ್‌ ಸೋನ್ಸ್(593), ವರುಣ್ (593) ಸ್ಥಾನ ಗಳಿಸಿ ಎಲ್ಲರೂ 7ನೇ ಸ್ಥಾನ ಪಡೆದಿದ್ದಾರೆ.
ಸುಜನಾ (591), ಕೆ ಸುಮಾ ಪೈ (591) ಇಬ್ಬರೂ 9ನೇ ಸ್ಥಾನ, ಧನಾಂಶ್ ವಿ(590), ದಿವೇಶ್‌ ಶರ್ಮಾ (590), ಎಡುಲಾ ಓಂಸಾಯಿ(590) ಮೂವರೂ 10ನೇ ಸ್ಥಾನ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಅನೂಪ್ ಶಾನ್ ಗೋಮ್ಸ್ (596) ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದರೆ, ಅದಿತಿ ಕೆ (594) 6ನೇ ಹಾಗೂ ಆದಿತ್ಯಶೆಟ್ಟಿ (590) 10ನೇ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ 953 ವಿದ್ಯಾರ್ಥಿಗಳಲ್ಲಿ 595 ವಿದ್ಯಾರ್ಥಿ ಗಳು ಉತ್ಕೃಷ್ಟ ಶ್ರೇಣಿ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ. 100 ಫಲಿತಾಂಶ ದಾಖಲಾಗಿದ್ದು ಸಂಸ್ಥೆಯ 241ಮಂದಿ ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದಿರುತ್ತಾರೆ. ಒಟ್ಟು ಫಲಿತಾಂಶ ಶೇ 99.89 ದಾಖಲಿಸಿದೆ. ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.