ತೀರ್ಥಹಳ್ಳಿ: ಭೀಕರ ಅಪಘಾತಕ್ಕೆ ಓರ್ವ ಬಲಿ!
– ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಬಳಿ ಘಟನೆ
– ಆಗುಂಬೆ ಫಾರೆಸ್ಟ್ ಗೇಟ್ ವಾಚರ್ ರಮೇಶ್ ನಿಧನ
– ಹಬ್ಬದ ಸಂದರ್ಭದಲ್ಲಿ ವಾಹನ ಓಡಿಸುವಾಗ ಹುಷಾರ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಬಳಿ ಭಾನುವಾರ ಸಂಜೆ ಬೈಕ್ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅರಣ್ಯ ಇಲಾಖೆ ನೌಕರರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ತೀರ್ಥಹಳ್ಳಿ -ಆಗುಂಬೆಯ ಮಾರ್ಗದ ಬಾಳೆಬೈಲು ಮಲ್ನಾಡ್ ಕ್ಲಬ್ ಸಮೀಪ ರಾಕ್ ವೀವ್ ಹೊಟೇಲ್ ಎದುರು ಬುಲೆಟ್ ಬೈಕ್ ಮತ್ತು ಸ್ವಿಫ್ಟ್ ಕಾರು ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಅಪಘಾತದಲ್ಲಿ ಬುಲೆಟ್ ಸವಾರ ಆಗುಂಬೆ ಫಾರೆಸ್ಟ್ ಗೇಟ್ ವಾಚರ್ ರಮೇಶ್ ಎಂಬುವರಿಗೆ ಗಂಭೀರ ಗಾಯವಾಗಿದ್ದ ಕಾರಣ ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೊಂಡೊಯ್ಯುಲಾಗಿತ್ತು.ಆದರೆ ದಾರಿ ಮಧ್ಯೆ ರಮೇಶ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದೇ ಜಾಗದಲ್ಲಿ ಅನೇಕ ಅಪಘಾತ ಸಂಭವಿಸಿವೆ. ರಮೇಶ್ ಹಂಗಾಮಿ ನೌಕರರಾಗಿದ್ದು ಇನ್ನು ಒಂದು ತಿಂಗಳು ಸೇವಾ ಅವಧಿ ಇತ್ತು.
ವಾಹನ ಸವಾರರೇ ಹುಷಾರ್!
ತೀರ್ಥಹಳ್ಳಿ ಸೇರಿ ಹಳ್ಳಿಗಳಲ್ಲಿ ವಾಹನ ಅತೀ ಹೆಚ್ಚು ಸಂಖ್ಯೆಯಲ್ಲಿ ಓಡಾಡುತ್ತಿವೆ. ಹೀಗಾಗಿ ಎಚ್ಚರಿಕೆ ವಹಿಸಬೇಕು ಎಂಬುದು ನಮ್ಮೂರ್ ಎಕ್ಸ್ ಪ್ರೆಸ್ ಕಾಳಜಿ. ಅದರಲ್ಲೂ ಅಮಾವಾಸ್ಯೆ ಮುನ್ನ ದಿನ ನಡೆದ ಈ ಘಟನೆ ಇದೀಗ ಭಾರೀ ನೋವಿಗೆ ಕಾರಣವಾಗಿದೆ.