Categories
ರಾಜ್ಯ

ಪಟಾಕಿ ಸ್ಫೋಟ: 9 ಮಂದಿ ಸಜೀವ ದಹನ!

ಪಟಾಕಿ ಸ್ಫೋಟ: 9 ಮಂದಿ ಸಜೀವ ದಹನ!
– 7 ಅಂಗಡಿಗಳು ಭಸ್ಮ: ಉತ್ತರ ಪ್ರದೇಶದಲ್ಲಿ ಘಟನೆ
– ಪಟಾಕಿ ಬಗ್ಗೆ ಹುಷಾರ್: ಹಬ್ಬದ ಸಂಭ್ರಮ ಬದುಕು ತೆಗೆಯದಿರಲಿ…!

NAMMUR EXPRESS NEWS
ಭಾನುವಾರ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಒಟ್ಟು ಒಂಭತ್ತು ಮಂದಿ ಸುಟ್ಟು ಕರಕಲಾಗಿರುವ ಘಟನೆ ಉತ್ತರ ಪ್ರದೇಶದ ಮಥುರಾ ನಗರದ ಹೊರವಲಯದ ಗೋಪಾಲಬಾಗ್‌ನಲ್ಲಿ ನಡೆದಿದೆ.
ಲಕ್ಕೋದ ಗೋಪಾಲಬಾಗ್ ಪ್ರದೇಶದ ಪಟಾಕಿ ಮಾರುಕಟ್ಟೆಯ ಕೆಲವು ಅಂಗಡಿಗಳಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡು ಭಾರೀ ಅವಘಡ ಉಂಟಾಗಿದ್ದು, ಈ ಅವಘಡದಲ್ಲಿ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಒಂಭತ್ತು ಮಂದಿ ಸುಟ್ಟು ಕರಕಲಾಗಿದ್ದು, ಏಳು ಪಟಾಕಿ ಅಂಗಡಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಘಟನೆ ವೇಳೆ ಪಟಾಕಿ ಮಾರುಕಟ್ಟೆಯಲ್ಲಿ ಜನಸಂದಣಿ ಇದ್ದಿದ್ದು, ಜನರು ಪಟಾಕಿ ಖರೀದಿಯಲ್ಲಿ ನಿರತರಾಗಿದ್ದರು. ಈ ವೇಳೆ ಒಂದು ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿ ಹರಡಲು ಪ್ರಾರಂಭಿಸಿ ಅಕ್ಕಪಕ್ಕದ ಅಂಗಡಿಗಳಿಗೆ ಬೆಂಕಿ ಆವರಿಸಿದೆ.

ರಾಜಧಾನಿಯ ಅತ್ತಿಬೆಲೆಯಲ್ಲೂ 11 ಮಂದಿ ಸಾವು

ಇತ್ತೀಚಿಗೆ ಬೆಂಗಳೂರು ಅತ್ತಿಬೆಲೆ ಪಟಾಕಿ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡದಲ್ಲಿ 11 ಮಂದಿ ಸಾವನ್ನು ಕಂಡಿದ್ದರು. ರಾಜ್ಯದ ಹಲವೆಡೆ ಸಣ್ಣ ಪುಟ್ಟ ಘಟನೆ ನಡೆದಿದೆ.

ಪಟಾಕಿ ಹುಷಾರ್..!

ಪಟಾಕಿ ಅಂಗಡಿ, ಮನೆಯಲ್ಲಿ ಇಡುವಾಗ ಜಾಗೃತಿ ಇರಲಿ. ಪಟಾಕಿ ಹೊಡೆಯುವ ವೇಳೆ ಕೂಡ ಎಚ್ಚರ ವಹಿಸಿ. ನಿಮ್ಮ ಸಂಭ್ರಮ ಇನ್ನೊಬ್ಬರಿಗೆ ತೊಂದರೆ ಆಗದಿರಲಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.