ಟೆಲಿಗ್ರಾಂ ಮೆಸೇಜ್ ನಂಬಿ 2 ಲಕ್ಷ ಕಳೆದುಕೊಂಡ ಯುವತಿ!
– ತೀರ್ಥಹಳ್ಳಿ ಮೂಲದ ಯುವತಿಗೆ ಆನ್ಲೈನ್ ವಂಚನೆ
– ವಂಚಕರ ಪತ್ತೆಗೆ ಶಿವಮೊಗ್ಗದ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಕೇಸ್
NAMMUR EXPRESS NEWS
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಸಮೀಪದ ಯುವತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು, 2,28,170 ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ
ಟೆಲಿಗ್ರಾಂನಲ್ಲಿ ನೋಡುತ್ತಿದ್ದಾಗ, ‘ವರ್ಕ್ ಫ್ರಂ ಹೋಂ’ ಎಂಬ ಜಾಹೀರಾತು ಕಾಣಿಸಿದೆ. ಅದನ್ನು ಕ್ಲಿಕ್ ಮಾಡಿದಾಗ ಅಪರಿಚಿತ ಖಾತೆಯೊಂದಕ್ಕೆ ಜಾಯಿನ್ ಆಗಿದ್ದಾರೆ. ಅದರಲ್ಲಿ, ಮನೆಯಲ್ಲಿಯೇ ಹಲವು ವಸ್ತುಗಳನ್ನು ಪ್ರಮೋಟ್ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ವಂಚಕರು ನಂಬಿಸಿದ್ದಾರೆ. ಇದನ್ನು ನಂಬಿದ ಯುವತಿ, ವಂಚಕರಿಗೆ ಹಂತ ಹಂತವಾಗಿ 2,28,170 ರೂಪಾಯಿ ಹಣವನ್ನು ನೀಡಿದ್ದಾರೆ. ನಂತರ ವಂಚಕರು ಲಾಭಾಂಶವನ್ನೂ ನೀಡದೆ, ಅಸಲು ಹಣವನ್ನೂ ಹಿಂದಿರುಗಿಸದೆ ಮೋಸ ಮಾಡಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ, ಯುವತಿ ವಂಚಕರನ್ನು ಪತ್ತೆ ಹಚ್ಚುವಂತೆ ಶಿವಮೊಗ್ಗದ ಸಿಇಎನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಣವನ್ನು ಹಾಕಿದ ನಂತರವೂ ಸಹ ನನಗೆ ಯಾವುದೇ ಹಣವನ್ನು ನೀಡಿರುವುದಿಲ್ಲ. ಅಲ್ಲದೇ ನಾನು ಗೋದ್ರೆಜ್ ಪ್ರಾಪರ್ಟಿಸ್ ಪ್ರಮೋಟ್ ಮಾಡಿದರೆ ಹೆಚ್ಚಿನ ಮತದ ಕಮಿಷನ್ ಪಡೆಯಲು ಹಾಗೂ ಇತರೆ ಕಾರಣಗಳಿಗೆ ಎಂದು ಒಟ್ಟು 2,28,170/- ರೂಗಳನ್ನು ಅವರು ಹೇಳಿದ ಖಾತೆಗಳಿಗೆ ನನ್ನ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿರುತ್ತೇನೆ. ಅಲ್ಲದೆ ಪುನಃ ಹಣ ಹಾಕುವಂತೆ ತಿಳಿಸಿದರಿಂದ ನನಗೆ ಅನುಮಾನ ಬಂದು ನನ್ನ ಸ್ನೇಹಿತರಲ್ಲಿ ಮತ್ತು ಸಂಬಂಧಿಕರಲ್ಲಿ ವಿಚಾರ ತಿಳಿಸಿದ್ದು, ನನ್ನ ಸ್ನೇಹಿತರು ಮತ್ತು ಸಂಬಂಧಿಕರು ನಿನಗೆ ಗೋದ್ರೆಜ್ ಪ್ರಾಪರ್ಟಿ ಪ್ರಮೋಟ್ ಮಾಡಿದರೆ ಹೆಚ್ಚಿನ ಮೊತ್ತದ ಕಮಿಷನ್ ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡಿ ಹಣವನ್ನು ಹಾಕಿಸಿಕೊಂಡಿರುವುದಾಗಿ ಹೇಳಿದ್ದು ಠಾಣೆಗೆ ಹೋಗಿ ದೂರು ನೀಡುವಂತೆ ತಿಳಿಸಿರುವುದರಿಂದ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
Dreams 3298 ಎಂಬ ಕಂಪನಿಯವರಂತೆ ನಟಿಸಿ ನಂಬಿಸಿ ವಿವಿಧ ಹಂತದಲ್ಲಿ ನನ್ನ jana Small Finance Bank ಬ್ಯಾಂಕ್ ಮತ್ತು ಕ್ಯಾಶ್ ಡೆಪಾಸಿಟ್ ಮೂಲಕ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಕೈಗೊಂಡು ನನ್ನ ಹಣವನ್ನು ವಾಪಸ್ಸು ಕೊಡಿಸಬೇಕೆಂದು ದೂರು ನೀಡಿದ್ದಾರೆ.
