ಆಧಾರ್ ಅಪ್ಡೇಟ್: ಜನರ ಪರದಾಟ..!
– ಅಂಚೆ ಕಚೇರಿ, ತಾಲೂಕು ಕಚೇರಿಯ ಮುಂದೆ ಜನರ ಕ್ಯೂ
– ಕರ್ನಾಟಕ ಒನ್ ಕೇಂದ್ರಗಳಿಗೆ ಇನ್ನೂ ಕೂಡ ಅವಕಾಶ ನೀಡದ ಆಡಳಿತ
– ಜನರ ಪರದಾಟ ಕೇಳದ ತೀರ್ಥಹಳ್ಳಿ ನಾಯಕರು!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಿನದಿಂದ ದಿನಕ್ಕೆ ಜನರ ಸಮಸ್ಯೆ ಕೇಳೋರಿಲ್ಲವಾಗಿದೆ. ಆಧಾರ್, ಇತರೆ ದಾಖಲೆಗಳ ತಿದ್ದುಪಡಿಗಾಗಿ ಹಳ್ಳಿಗಳಿಂದ ನೂರಾರು ಮಂದಿ ಆಗಮಿಸುತ್ತಾರೆ. ಆದರೆ ತೀರ್ಥಹಳ್ಳಿಯ ವಿವಿಧ ಸರ್ಕಾರಿ, ಖಾಸಗಿ ಕೇಂದ್ರಗಳಲ್ಲಿ ಇನ್ನೂ ಆ ವ್ಯವಸ್ಥೆ ಮಾಡುವಲ್ಲಿ ಆಡಳಿತ ವಿಫಲವಾಗಿದೆ. ಇನ್ನು ಈಗಾಗಲೇ ಸರ್ಕಾರದ ಅಧೀನದ ಕರ್ನಾಟಕ ಒನ್ ಕೇಂದ್ರವನ್ನು ತೀರ್ಥಹಳ್ಳಿಯಲ್ಲಿ ತೆರೆಯಲಾಗಿದೆ. ಆದರೆ ಆಧಾರ್ ಹಾಗೂ ಇತರೆ ದಾಖಲೆಗಳ ಅಪ್ಡೇಟ್ ಗಳಿಗೆ ಇನ್ನೂ ಅವಕಾಶ ನೀಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು, ತಾಲೂಕು ತಹಸೀಲ್ದಾರರು ತಕ್ಷಣ ಗಮನಿಸಬೇಕು. ಇಲ್ಲವಾದಲ್ಲಿ ಜನರು ಪ್ರತಿದಿನ ಬಂದು ತಮ್ಮ ಸಮಯವನ್ನು ವ್ಯರ್ಥ ಮಾಡುವ ಜೊತೆಗೆ ತಮ್ಮ ಬದುಕು ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ.
ಇನ್ನು ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಪೋಸ್ಟ್ ಆಫೀಸ್ ಗಳಲ್ಲಿ ಅವಕಾಶವನ್ನು ನೀಡಲಾಗಿದ್ದು ಇಲ್ಲಿ ಪ್ರತಿದಿನ 5 ದರಿಂದ 10 ಮಂದಿಯನ್ನ ಮಾತ್ರ ಮಾಡಲಾಗುತ್ತದೆ. ವಿವಿಧ ಕಚೇರಿಯಲ್ಲಿ ಕೂಡ 5 ರಿಂದ 10 ಮಂದಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲಾಗುತ್ತದೆ. ಆದರೆ ಪ್ರತಿ ದಿನ ನೂರಾರು ಮಂದಿ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಈ ಬಗ್ಗೆ ಈಗಾಗಲೇ ಜಿಲ್ಲಾಡಳಿತ ದ ಗಮನಕ್ಕೆ ತಂದಿದ್ದು, ಕರ್ನಾಟಕ ಒನ್ ಸೆಂಟರ್ ಅಧಿಕೃತವಾಗಿ ತೆರೆಯಲಾಗಿದೆ. ಆದರೆ ತಾಲೂಕು ಆಡಳಿತ ಅದಕ್ಕೆ ಇನ್ನೂ ಸೇವೆ ಮಾಡಲು ಇನ್ನು ಅವಕಾಶವನ್ನು ನೀಡಿಲ್ಲ. ಹೀಗಾಗಿ ತಕ್ಷಣ ಸರ್ಕಾರ ವ್ಯಾಪ್ತಿಯ ಈ ಸಂಸ್ಥೆಗಳಿಗೆ ಸೇವೆ ಮಾಡಲು ಅವಕಾಶ ನೀಡಬೇಕು, ಜೊತೆಗೆ ಆಧಾರ ಅಪ್ಡೇಟ್ ಮಾಡಲು ವಿವಿಧ ಸಂಸ್ಥೆಗಳಲ್ಲಿ ಅವಕಾಶ ನೀಡಬೇಕು. ಆಗ ಜನರ ದಾಖಲೆ ಬೇಗ ಆಗುತ್ತದೆಯೇ ಎನ್ನುವ ಆಗ್ರಹ ವ್ಯಕ್ತವಾಗಿದೆ.