ತೀರ್ಥಹಳ್ಳಿ ರಥಬೀದಿ, ಮಲ್ನಾಡ್ ಕ್ಲಬ್ಬಲ್ಲಿ ಎಲ್.ಇ.ಡಿ ಪರದೆಯಲ್ಲಿ ವಿಶ್ವ ಕಪ್ ಪ್ರದರ್ಶನ
– ಭಾರತ, ಆಸ್ಟ್ರೇಲಿಯಾ ಪಂದ್ಯದ ಪ್ರದರ್ಶನಕ್ಕೆ ಜನರ ಜೋಷ್
NAMMUR EXPRESS NEWS
ತೀರ್ಥಹಳ್ಳಿ: ಭಾರತ- ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಅಂತಿಮ ಹಣಾಹಣಿಯನ್ನು ಬೃಹತ್ ಎಲ್.ಇ.ಡಿ. ವಾಲ್‌ನಲ್ಲಿ ತೀರ್ಥಹಳ್ಳಿಯ ರಥ ಬೀದಿ, ಮಲ್ನಾಡ್ ಕ್ಲಬ್ ಸೇರಿ ಅನೇಕ ಕಡೆ ಪ್ರದರ್ಶನ ಮಾಡಲಾಗುತ್ತಿದೆ. ಭಾರತ ತಂಡ ಬ್ಯಾಟಿಂಗ್ ಮಾಡುತ್ತಿದ್ದು, ಎಲ್ಲೆಡೆ ಭಾರತದ ಗೆಲುವಿಗೆ ಹಾರೈಕೆ ಕಂಡು ಬರುತ್ತಿದೆ. ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ತುಂಗಾ ಕಂಪ್ಯೂಟ್ರಾನಿಕ್ಸ್ ಎಲ್ಇಡಿ ವಾಲಿನಲ್ಲಿ ಪ್ರದರ್ಶನ ಮಾಡಲಾಗಿದ್ದು ಶ್ರೀ ಚಾಮುಂಡೇಶ್ವರಿ ಸೌಂಡ್ಸ್ ಅವರು ಸೌಂಡ್ಸ್ ವ್ಯವಸ್ಥೆ ಮಾಡಿದ್ದಾರೆ. ನೂರಾರು ಮಂದಿ ವೀಕ್ಷಿಸುತ್ತಿದ್ದು ರಥಬೀದಿಯಲ್ಲಿ ಜನ ಸೇರಿದ್ದಾರೆ. ಮಲ್ನಾಡ್ ಕ್ಲಬ್ ಅಲ್ಲಿ ವಿಶೇಷ ಪರದೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಇನ್ನು ರಾಕ್ ವೀವ್, ತೀರ್ಥ ಹೋಟೆಲ್ ಸೇರಿ ಅನೇಕ ಕಡೆ ನೇರ ಪ್ರಸಾರ ನೋಡುವ ವ್ಯವಸ್ಥೆ ಮಾಡಲಾಗಿದೆ