Categories
ತೀರ್ಥಹಳ್ಳಿ

ಗಡ್ಕರಿ ಅವರಿಗೆ ತೀರ್ಥಹಳ್ಳಿ ಬೈ ಪಾಸ್ ರಸ್ತೆಗೆ ಮನವಿ ಪತ್ರ ನೀಡಿದ ಆರಗ!

ತೀರ್ಥಹಳ್ಳಿ ಪ್ರಮುಖ ಸುದ್ದಿಗಳು ಟಾಪ್-3

ಗಡ್ಕರಿ ಅವರಿಗೆ ತೀರ್ಥಹಳ್ಳಿ ಬೈ ಪಾಸ್ ರಸ್ತೆಗೆ ಮನವಿ ಪತ್ರ ನೀಡಿದ ಆರಗ!

ವೃದ್ದಾಶ್ರಮದಲ್ಲಿ ಸಮರ್ಪಣಾ ತಂಡದ ವಾರ್ಷಿಕೋತ್ಸವ ಸಂಭ್ರಮ
– ತಾಯಂದಿರ ಜೊತೆ ಮನರಂಜನೆಯೊಂದಿಗೆ ಸಿಹಿ ಭೋಜನ ವಿಶೇಷ ಕಾರ್ಯಕ್ರಮ

– ತೀರ್ಥಹಳ್ಳಿ ಸೈoಟ್ ಮೇರಿಸ್ ಸಂಸ್ಥೆಯಲ್ಲಿ

NAMMUR EXPRESS NEWS
ತೀರ್ಥಹಳ್ಳಿ: ಸಮರ್ಪಣಾ ತಂಡ ರಾಮಕೃಷ್ಣಪುರದ ವತಿಯಿಂದ ಮೂರನೇ ವರ್ಷದ ಸಂಘದ ವಾರ್ಷಿಕ ಆಚರಣೆಯ ಕಾರ್ಯಕ್ರಮವಾಗಿ ಭಾನುವಾರ ಸಾವಿತ್ರಮ್ಮ ರಾಮಕೃಷ್ಣ ಶರ್ಮ ಟ್ರಸ್ಟ್ ಬಸವಾನಿ ಇವರ ಮಾತೃ ಮಂದಿರ ವೃದ್ಧಾಶ್ರಮದಲ್ಲಿ ಆಶ್ರಮದ ಎಲ್ಲಾ ತಾಯಂದಿರ ಜೊತೆ ಮನರಂಜನೆಯೊಂದಿಗೆ ಸಿಹಿ ಭೋಜನ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಎಲ್ಲಾ ಮಾತೆಯರ ನೋವನ್ನು ಮರೆಸುವ ವಿಭಿನ್ನ ಪ್ರಯತ್ನ ಮಾಡಿದರು.
ಸಂಘದ ಸದಸ್ಯರೇ ಕಲಾವಿದರಾದ್ದರಿಂದ ಭಾವಗೀತೆ, ಚಿತ್ರಗೀತೆ, ದೇವರ ನಾಮವನ್ನು ಹಾಡುತ್ತಾ, ಅಲ್ಲಿನ ಮಾತೆಯರಿಗೂ ಹಾಡಿಸುತ್ತ ಹಾಸ್ಯ ಚಟಾಕಿಯನ್ನು ಹಾರಿಸುತ್ತ, ಆಶ್ರಮದ ನಿತ್ಯದ ಏಕತಾನತೆಯನ್ನು ದೂರ ಮಾಡಿದರು.
ಜೀವನದ ಯಾವುದೊ ಕಾರಣದಿಂದ ಇಲ್ಲಿನ ಆಶ್ರಮಕ್ಕೆ ಸೇರಿದ ಮಾತೆಯರಿಗಂತೂ ಇದೊಂದು ಸಂತಸದ ಘಳಿಗೆಯಾಗಿತ್ತು. ಸಮರ್ಪಣಾ ಮಿತ್ರರೆಲ್ಲ ನಿಜಕ್ಕೂ ಬಾವುಕಾರಾಗಿದ್ದರು.
ಮದ್ಯಾಹ್ನ ತಂಡದ ಸದಸ್ಯ ಮಿತ್ರರು ಸಿಹಿ ಊಟವನ್ನು ಎಲ್ಲಾ ಮಾತೆಯರಿಗೂ ಉಣ ಬಡಿಸಿದರು. ಅಲ್ಲದೇ ದಿನಸಿ ಕಿಟ್ ನ್ನು ಟ್ರಸ್ಟ್ ನ ಕಾರ್ಯದರ್ಶಿಯವರಾದ ರಾಘವೇಂದ್ರ ಭಟ್ ಇವರಿಗೆ ನೀಡಿದರು.
ಒಂದು ಟ್ರಸ್ಟ್ ಮೂವತ್ತು ವರ್ಷದಿಂದ ವೃದ್ಧಾಶ್ರಮ ವನ್ನು ಉಚಿತವಾಗಿ ನಡೆಸುತ್ತಿರುವುದು ನಿಜಕ್ಕೂ ಅದ್ಭುತ ಸಾಹಸವಾಗಿದ್ದು ಇದರ ಹೆಚ್ಚಿನ ಹೊಣೆಗಾರಿಕೆ ಹೊತ್ತು ನಿತ್ಯವೂ ತಾಯಂದಿರ ಸೇವೆ ಮಾಡುವ ರಾಘವೇಂದ್ರ ಭಟ್ ಮತ್ತು ಸಂಸ್ಥೆಯ ಸೇವೆ ಸ್ಮರಿಸಲಾಯಿತು. ಇಂತಹ ಸಮಾಜಮುಖಿ ಕೆಲಸ ಮಾಡುತ್ತಿರುವ ಸಮರ್ಪಣಾ ತಂಡ ರಾಮಕೃಷ್ಣಪುರ ಇವರಿಗೆ ಅಭಿನಂದನೆಗಳು.

ಗಡ್ಕರಿ ಅವರಿಗೆ ತೀರ್ಥಹಳ್ಳಿ ಬೈ ಪಾಸ್ ರಸ್ತೆಗೆ ಮನವಿ ಪತ್ರ ನೀಡಿದ ಆರಗ

ತೀರ್ಥಹಳ್ಳಿ : ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ತೀರ್ಥಹಳ್ಳಿ ತಾಲೂಕಿನ ತೀರ್ಥಹಳ್ಳಿ ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ ಭಾನುಗೋಡಿನಿಂದ ತೀರ್ಥಹಳ್ಳಿ ಆಗುಂಬೆ ರಾಷ್ಟ್ರೀಯ ಹೆದ್ದಾರಿಯನ್ನು ತೀರ್ಥಹಳ್ಳಿ ನಗರ ಸಂಪರ್ಕಿಸದೇ, ಭಾನುಗೋಡು ಭಾರತೀಪುರ ಕಿತ್ತನಗದ್ದೆ ಮೂಲಕ ರಂಜದಕಟ್ಟೆ ಸಂಪರ್ಕಿಸುವ ಬೈ ಪಾಸ್ ರಸ್ತೆಗೆ ಅನುದಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಬೇಡಿಕೆ ಸಲ್ಲಿಸಿದರು,
ಈಗಾಗಲೇ ಕಳೆದ ಅವದಿಯಲ್ಲಿ 8 ಕೋಟಿ ಮಂಜುರಾಗಿ ಕಾಮಗಾರಿ ಪ್ರಗತಿಯಲ್ಲಿದೆ, ಇನ್ನೂ ಹೆಚ್ಚಿನ ಅನುದಾನ ಬೇಕಾಗಿದ್ದು ಶಾಸಕ ಆರಗ ಜ್ಞಾನೇಂದ್ರರವರು ಕೇಂದ್ರ ಲೋಕೋಪಯೋಗಿ ಮಂತ್ರಿ ನಿತಿನ್ ಗಡ್ಕರಿಯವರಿಗೆ ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮನವಿ ಪತ್ರ ನೀಡಿದರು.

ಸೈಂಟ್ ಮೇರೀಸ್ ಶಾಲೆಯಲ್ಲಿ ತಂದೆಯರ ದಿನ ಕಾರ್ಯಕ್ರಮ ಯಶಸ್ವಿ
– ಮಂದಾರ ದಾಯಿನಿ ಕಾಲೇಜು ಪ್ರಿನ್ಸಿಪಾಲರಾದ ಪ್ರವೀಣ್ ಅವರಿಂದ ಸ್ಫೂರ್ತಿ ಮಾತು

ತೀರ್ಥಹಳ್ಳಿಯ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆ ಇಂದಿರಾನಗರ ಇಲ್ಲಿ ತಂದೆಯರ ದಿನ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿಶೇಷವಾದ ಹಾಗೂ ತಂದೆಯ ಶ್ರಮ, ತ್ಯಾಗ, ಕಾಳಜಿಯನ್ನು ಅಭಿವ್ಯಕ್ತ ಪಡಿಸುವ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಅಪ್ಪಂದಿರು ವಿನೋದ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಮಕ್ಕಳಿಗೆ ಸಂತೋಷ ಹಾಗು ಸ್ಪೂರ್ತಿ ನುಡಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪ್ರವೀಣ್ ಪ್ರಾಂಶುಪಾಲರು ಮಂದಾರ ಜ್ಞಾನದಾಯಿ ಪದವಿಪೂರ್ವ ಕಾಲೇಜು ಶಿವಮೊಗ್ಗ ಇವರು ತಂದೆಯ ಜವಾಬ್ದಾರಿಯುತ ಬದುಕು,ಮಕ್ಕಳೊಂದಿಗೆ ಬಾಂಧವ್ಯ, ಹಾಗು ತಂದೆಯ ಶ್ರಮ, ತ್ಯಾಗಗಳನ್ನು ನಿದರ್ಶನಗಳೊಂದಿಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ತೀರ್ಥಹಳ್ಳಿಯ ಲೂರ್ದು ಮಾತೆ ದೇವಾಲಯದ ಧರ್ಮಗುರುಗಳಾದ ರೆವರೆಂಟ್ ಫಾದರ್ ವೀರೇಶ್ ವಿಕ್ಟರ್ ಮೊರಾಸ್ ತಂದೆಯ ದುಡಿಮೆಯ ಬೆವರಿನ ಫಲವನ್ನು ಅರಿತು ಮಕ್ಕಳು ಛಲದಿಂದ ಬದುಕು ನಡೆಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆವರೆಂಟ್ ಸಿಸ್ಟರ್ ಆನಿ ಸಿ.ಜೆ ಸಂಚಾಲಕರು ಸೈಂಟ್ ಮೇರೀಸ್ ವಿದ್ಯಾಸಂಸ್ಥೆ ಇವರು ವಹಿಸಿದ್ದರು. ಈ ಕಾರ್ಯಕ್ರಮದದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲೀನಾ ಬಾರ್ಬೋಸ, ಪಿ,ಟಿ,ಎ,ಉಪಾಧ್ಯಕ್ಷರಾದ ಶ್ರೀ ಓವಿನ್ ಡಿಸೋಜ, ಶಿಕ್ಷಕ ವೃಂದ, ಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.