Categories
ಚಿಕ್ಕಮಗಳೂರು

ಮಕ್ಕಳ ವೈದ್ಯರ ಕೊರತೆ,ಸಿಗದ ಸೂಕ್ತ ಚಿಕಿತ್ಸೆ ಮಗು ಸಾವು

ಚಿಕ್ಕಮಗಳೂರು ಟಾಪ್ ನ್ಯೂಸ್

* ಮಕ್ಕಳ ವೈದ್ಯರ ಕೊರತೆ,ಸಿಗದ ಸೂಕ್ತ ಚಿಕಿತ್ಸೆ ಮಗು ಸಾವು
* ಕಾರ್ಮಿಕನ ಮೇಲೆ ಕಾಡುಕೋಣ ದಾಳಿ
* ಕಾಡು ಹಂದಿ ದಾಳಿಗೆ ರೈತನ ಬೆರಳು ತುಂಡು
* ಹೃದಯಾಘಾತದಿಂದ ಸಾಫ್ಟ್‌ವೇರ್ ಇಂಜಿನಿಯರ್ ಸಾವು

NAMMMUR EXPRESS NEWS
* ಮಕ್ಕಳ ವೈದ್ಯರ ಕೊರತೆ,ಸಿಗದ ಸೂಕ್ತ ಚಿಕಿತ್ಸೆ ಮಗು ಸಾವು
ಮೂಡಿಗೆರೆ: ತಾಲೂಕಿನ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ 2 ತಿಂಗಳ ಮಗುವೊಂದು ಬಲಿಯಾದ ಆರೋಪ ಕೇಳಿಬಂದಿದೆ.
ತಾಲೂಕಿನ ಸುಂಕಸಾಲೆ ಗ್ರಾಮದ ಶೇಖರ್ ದಂಪತಿಯ 2 ತಿಂಗಳು 10 ದಿನದ ಮಗು ತೀವ್ರ ಜ್ವರ, ಕಫದ ಸಮಸ್ಯೆಯಿಂದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರಿಲ್ಲದ ಕಾರಣ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಸೂಚನೆ ನೀಡಿದ್ದಾರೆ.
ಸುಮಾರು ಅರ್ಧ ಗಂಟೆ‌ ಕಾದರು ಕೂಡ ಆಂಬುಲೆನ್ಸ್ ಬರಲಿಲ್ಲ. ಜೊತೆಗೆ ವೈದ್ಯರು ಚಿಕಿತ್ಸೆ ನೀಡಲಿಲ್ಲ. ಹೀಗಾಗಿ ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಹಾಗೂ ಆಕ್ಸಿಜನ್ ಸಿಗದೆ ಮಗು ಸಾವನ್ನಪ್ಪಿದ್ದು, ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷಕ್ಕೆ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

* ಕಾರ್ಮಿಕನ ಮೇಲೆ ಕಾಡುಕೋಣ ದಾಳಿ
ಕೊಪ್ಪ: ಕೃಷಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಕಾಡುಕೋಣ ದಾಳಿ ಮಾಡಿರುವ ಘಟನೆ ತಾಲೂಕಿನ ಶಾನುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಶಾನುವಳ್ಳಿ ಗ್ರಾಮದ ಧೃವ ಎಂಬುವರ ತೋಟದಲ್ಲಿ ವಿಠಲ ಪೂಜಾರಿ ಎಂಬುವವರು ಕೃಷಿ ಕೆಲಸ ಮಾಡುತ್ತಿದ್ದಾಗ ಕಾಡುಕೋಣ ದಾಳಿ ನಡೆಸಿದೆ. ವಿಠಲ ಪೂಜಾರಿ ಅವರ ತಲೆ, ಸೊಂಟ ಹಾಗೂ ಕಾಲಿಗೆ ಪೆಟ್ಟಾಗಿದೆ. ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ.

* ಕಾಡು ಹಂದಿ ದಾಳಿಗೆ ರೈತನ ಬೆರಳು ತುಂಡು
ಮೂಡಿಗೆರೆ: ತಾಲೂಕಿನ ಅಲೆಕಾನ್ ಗ್ರಾಮದಲ್ಲಿ ದನ ಮೇಯಿಸಲು ಹೋಗಿದ್ದಾಗ ಕಾಡು ಹಂದಿ ದಾಳಿ ಮಾಡಿರುವ ಘಟನೆ ನಡೆದಿದೆ. ದಾಳಿಗೆ ಅಲೆಕಾನ್ ಗ್ರಾಮದ ರೈತ ಉಪೇಂದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ.
ದನಗಳನ್ನು ಮೇಯಿಸಿ ಹಿಂತಿರುಗುತ್ತಿದ್ದ ವೇಳೆ ಏಕಾಏಕಿ ಬಂದ ಕಾಡು ಹಂದಿ ಕೈ ಮೇಲೆ ದಾಳಿ ನಡೆಸಿದ್ದು, ಒಂದು ಬೆರಳನ್ನು ತೀವ್ರವಾಗಿ ಕಚ್ಚಿ, ಬೆರಳು ಸಂಪೂರ್ಣವಾಗಿ ತುಂಡಾಗಿದೆ. ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕೂಡ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

* ಹೃದಯಾಘಾತದಿಂದ ಸಾಫ್ಟ್‌ವೇರ್ ಇಂಜಿನಿಯರ್ ಸಾವು
ಚಿಕ್ಕಮಗಳೂರು:ಕಾಫಿನಾಡಿನ ಸೌಂದರ್ಯ ಸವಿಯಲು ಪ್ರವಾಸಕ್ಕೆಂದು ಬಂದಿದ್ದ 30 ವರ್ಷದ ಯುವಕ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ.
ಮೃತನನ್ನ ಬೆಂಗಳೂರು ಮೂಲದ ರಾಹುಲ್ ಎಂದು ಗುರುತಿಸಲಾಗಿದೆ. ಮೃತ ಯುವಕ ಸ್ನೇಹಿತರ ಜೊತೆ ಕಳೆದ ಎರಡು ದಿನದ ಹಿಂದೆಯೇ ಚಿಕ್ಕಮಗಳೂರು ಹೊರಹೊಲಯದ ನಲ್ಲೂರು ಗ್ರಾಮದ ಹೋಂ ಸ್ಟೇಗೆ ಬಂದು ತಂಗಿದ್ದನು.ಭಾನುವಾರ ಮಧ್ಯಾಹ್ನವಾದರೂ ಬಾಗಿಲು ತೆರೆಯದ ಹಿನ್ನೆಲೆ ಹೋಂ ಸ್ಟೇ ಮಾಲೀಕರು ಹಾಗೂ ಸ್ನೇಹಿತರು ಬಾಗಿಲು ತೆಗೆದು ನೋಡಿದಾಗ ಪ್ರಜ್ಞೆ ಇಲ್ಲದೆ ಬಿದ್ದಿದ್ದ. ಎಲ್ಲರೂ ಆತನನ್ನ ಎಬ್ಬಿಸುವ ಪ್ರಯತ್ನ ಮಾಡಿ ಎಚ್ಚರಿಸಿ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಮಾರ್ಗ ಮಧ್ಯೆ ತೀವ್ರ ಹೃದಯಾಘಾತದಿಂದ ಯುವಕ ಸಾವನ್ನಪ್ಪಿದ್ದಾನೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.