ಮಕ್ಕಿಮನೆ-ಹೊನ್ನೇಕಟ್ಟೆ ದೇಗುಲ ಅಭಿವೃದ್ಧಿಗೆ ಅಂಟಿಗೆ ಪಿಂಟಿಗೆ!
– ಕಲಾನಾಥೇಶ್ವರ, ದುರ್ಗಾಪರಮೇಶ್ವರಿ, ಭದ್ರಕಾಳಿ ದೇಗುಲ: ದೇಗುಲ ಅಭಿವೃದ್ಧಿಗೆ ಬೇಕು ಧನ ಸಹಾಯ
NAMMUR EXPRESS NEWS
ತೀರ್ಥಹಳ್ಳಿ: ಶ್ರೀ ಕಲಾನಾಥೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಭದ್ರಕಾಳಿ ದೇವಸ್ಥಾನ, ಮಕ್ಕಿಮನೆ, ಹೊನ್ನೇಕಟ್ಟೆ, ಸಾಲೂರು ಗ್ರಾಮ, ಸಾಲೂರು ಅಂಚೆ, ತೀರ್ಥಹಳ್ಳಿ ತಾಲ್ಲೂಕು ಇಲ್ಲಿ ದೇಗುಲ ಅಭಿವೃದ್ಧಿಗಾಗಿ ಅಂಟಿಗೆ ಪಿಂಟಿಗೆ ಕಟ್ಟಲಾಗಿದೆ. ಈ ಮೂಲಕ ದೇವರ ಕೆಲಸಕ್ಕೆ ಗ್ರಾಮಸ್ಥರು ಜತೆಯಾಗಿದ್ದಾರೆ. ಹಳೆಯ ಕಾಲದ ಈ ದೇಗುಲ ಅಭಿವೃದ್ಧಿಗೆ ಧನ ಸಹಾಯಕ್ಕೆ ಮನವಿ ಮಾಡಲಾಗಿದೆ.