ಬಾಳೆಹೊನ್ನೂರಲ್ಲಿ ಹಾವು ಕಚ್ಚಿ ಮಹಿಳೆ ಸಾವು
– ಚಿಕ್ಕಮಗಳೂರು: ಕಬ್ಬಿನ ಗದ್ದೆಯಲ್ಲಿ ಕಾಡಾನೆಗಳು
– ಹೊಸನಗರದಲ್ಲಿ ವೃದ್ಧ ಆತ್ಮಹತ್ಯೆ
NAMMUR EXPRESS NEWS
ಬಾಳೆಹೊನ್ನೂರು: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ವ್ಯಾಪ್ತಿಯ ಅಂಡವಾನೆ ಗ್ರಾಮದಲ್ಲಿ ನಡೆದಿದೆ. ಅಂಡವಾನೆ ಗ್ರಾಮದ ಸುಜಾತ ಹಾವು ಕಚ್ಚಿ ಮೃತಪಟ್ಟಿರುವ ಮಹಿಳೆ ಬೆಳಗ್ಗೆ ತೋಟದಲ್ಲಿ ಕೆಲಸ ಮಡುವಾಗ ಕಚ್ಚಿದೆ ಎನ್ನಲಾಗಿದೆ.
ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು!
ಚಿಕ್ಕಮಗಳೂರು ನಲ್ಲೂರಿನಲ್ಲಿ 6 ಕಾಡಾನೆಗಳನ್ನು ಮತ್ತೆ ಕಾಡಿಗಟ್ಟುವ ಕಾರ್ಯಾಚರಣೆ ಮುಂದುವರೆದಿದೆ. ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟಿರುವ ಭುವನೇಶ್ವರಿ ಗ್ಯಾಂಗ್ನ ಆರು ಕಾಡಾನೆಗಳನ್ನು ಮತ್ತೆ ಅರಣ್ಯಕ್ಕೆ ಓಡಿಸಲು 3 ಸಾಕಾನೆಗಳನ್ನು ಬಳಸಿ ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿಯಿಂದ ಕಾರ್ಯಾಚರಣೆ ಶುರುವಾಗಿದೆ. ಚಿಕ್ಕಮಗಳೂರು ನಗರದಿಂದ ಕೇವಲ ಒಂದು ಕಿ.ಮೀ ದೂರದಲ್ಲಿ ಕಾಡಾನೆಗಳ ಹಿಂಡಿದೆ. ಅವು ನಗರ ಪ್ರವೇಶಿಸದಂತೆ ಓಡಿಸಲಾಗುತ್ತಿದೆ. ಮುನ್ನೆಚ್ಚರಿಕೆಯಿಂದ ಕಾರ್ಯಾಚರಣೆ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕೂಡ ಅಳವಡಿಸಲಾಗಿದೆ. ಭುವನೇಶ್ವರಿ ಗ್ಯಾಂಗ್ನ ಕಾಡಾನೆಗಳ ಉಪಟಳಕ್ಕೆ ಬೇಸತ್ತಿದ್ದ ಗ್ರಾಮಸ್ಥರ ಆಕ್ರೋಶ ಹಿನ್ನೆಲೆ ಅರಣ್ಯ ಸಿಬ್ಬಂದಿಯಿಂದ ಈ ಕಾರ್ಯಾಚರಣೆ ನಡೆಸಲಾಗಿದೆ.
ನೇಣು ಬಿಗಿದುಕೊಂಡು ವೃದ್ಧ ಆತ್ಮಹತ್ಯೆ!
ಹೊಸನಗರ ತಾಲೂಕಿನ ರಾಮಚಂದ್ರಪುರ ಗ್ರಾಮದ ಜಯನಗರ ಕಲ್ಲುಗುಡ್ಡೆಯ ನಿವಾಸಿ ಕೃಷಿಕ ಲಕ್ಷ್ಮಣ (67 )ಎಂಬುವವರು ಗುರುವಾರ ರಾತ್ರಿ ತಮ್ಮ ಮಗನ ಮನೆಯ ಹಿಂಭಾಗದ ಹಳೆಯ ಶೌಚಾಲಯ ಪಕಾಸಿಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಹೊಂದಿದ್ದು ಅವರಿಗೆ ಎರಡು ಬಾರಿ ಅಪಘಾತವಾಗಿದ್ದು ಅಧಿಕ ರಕ್ತದೊತ್ತಡ ಹಾಗು ಹೊಟ್ಟೆನೋವು ಸಮಸ್ಯೆ ಕಾಡುತ್ತಿದ್ದರಿಂದ ಜೀವನದಲ್ಲಿ ಜಿಗುಪ್ಪೆಗೊಂಡ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ. ಹೊಸನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.