ಅರಳಸುರಳಿ ಪ್ರಕರಣ: ಉಳಿದವನೊಬ್ಬನೂ ಸಾವು!
– ಬೆಂಗಳೂರಲ್ಲಿ ಚಿಕಿತ್ಸೆ ಫಲ ನೀಡದೆ ಸಾವು
– ತಂದೆ ತಾಯಿ ಸುಟ್ಟಲ್ಲೇ ಸುಟ್ಟು ಬಿಡಿ ಎಂದು ಕೊನೆ ಮಾತು!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಅರಳಸುರಳಿ ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಬೆಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ, ಮತ್ತೋರ್ವ ಚಿಕಿತ್ಸೆ ಫಲ ನೀಡದೆ ಮಂಗಳವಾರ ಮೃತಪಟ್ಟಿದ್ದಾನೆ. ಅಲ್ಲಿಗೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಚಿಕಿತ್ಸೆ ಕೊಡಿಸಿ ಅಲ್ಲಿಂದ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿತ್ತು. ಅರಳಸುರಳಿ ಕುಟುಂಬದ ಸದಸ್ಯರೆಲ್ಲರೂ ಭಾನುವಾರ ಸಜೀವ ದಹನ ಮಾಡಿಕೊಂಡಿದ್ದರು. ಓರ್ವ ಬೆಂಕಿಯಿಂದ ಹೊರ ಬಂದಿದ್ದರು.
ಭಾನುವಾರ ಮುಂಜಾನೆ ಮನೆಯ ಪಕ್ಕದ ಕೋಣೆಯೊಳಗೆ ಕಟ್ಟಿಗೆಗಳನ್ನು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಬೆಂಕಿ ದುರಂತದಲ್ಲಿ ರಾಘವೇಂದ್ರಕೆಕೋಡ್ (65), ಪತ್ನಿನಾಗರತ್ನಾ (55), ಹಿರಿಯ ಪುತ್ರ ಶ್ರೀರಾಮ್ (30) ಸಜೀವವಾಗಿ ಬೆಂಕಿಗೆ ಆಹುತಿಯಾಗಿದ್ದರು. ಇನ್ನೋರ್ವ ಪುತ್ರ ಭರತ್ (28) ಮಂಗಳವಾರ ಮೃತಪಟ್ಟಿದ್ದಾರೆ.
ಸುಡಬಹುದಾದ ಎಲ್ಲಾ ವಸ್ತುಗಳು ಅಂದರೆ ಕಟ್ಟಿಗೆ,ಹಾಸಿಗೆ, ಚಾಪೆ ಬಟ್ಟೆ ಬರೆ ಪೇಪರ್ ಪೇಸ್ಟು ಎಲ್ಲವನ್ನು ಕೋಣೆಯಲ್ಲಿ ಹಾಕಿಕೊಂಡು ಮದ್ಯದಲ್ಲಿ ಈ ಕುಟುಂಬ ಪೆಟ್ರೋಲ್ ಸುರಿದುಕೊಂಡು ಸಜೀವವಾಗಿ ದಹಿಸಿಕೊಂಡಿದ್ದಾರೆ. ಅಂದೇ ರಾತ್ರಿ ಮೂವರನ್ನು ಪೊಲೀಸರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ಕೂಡ ನಡೆದಿದೆ. ತಂದೆ ತಾಯಿ ಸುಟ್ಟಲ್ಲೇ ಸುಟ್ಟು ಬಿಡಿ ಎಂದು ಆತ ಹೇಳಿಕೆ ನೀಡಿದ್ದಾನೆ. ಬುಧವಾರ ಅರಳಸುರಳಿಗೆ ಶವ ತರುವ ಸಾಧ್ಯತೆ ಇದೆ.