Categories
ಮಲ್ನಾಡ್

ಬಿಸಿಲ ಧಗೆ: ಮಳೆ ಇಲ್ಲದೆ ಮುಗಿದು ಹೋಯ್ತಾ ಮಳೆಗಾಲ!?

ಬಿಸಿಲ ಧಗೆ: ಮಳೆ ಇಲ್ಲದೆ ಮುಗಿದು ಹೋಯ್ತಾ ಮಳೆಗಾಲ!?
– ಮಲೆನಾಡಲ್ಲಿ ಮಳೆ ಕೊರತೆ: ಬತ್ತಿ ಹೋದ ನದಿ, ಹೊಳೆ, ಕೆರೆ!
– ಬೇಸಿಗೆ ಬಿಸಿಲು ಶುರು: ಕುಡಿಯುವ ನೀರಿಗೂ ಬರಗಾಲ?

NAMMUR EXPRESS NEWS
ತೀರ್ಥಹಳ್ಳಿ/ಶೃಂಗೇರಿ: ಮಳೆಗಾಲ ಮುಗಿದು ಅಕ್ಟೋಬರ್ ನಿಂದ ಚಳಿಗಾಲ ಶುರುವಾಗಿದ್ದು ಇದೀಗ ಮಳೆ ಕಡಿಮೆ ಯಾಗಿರುವುದರಿಂದ ಬರಗಾಲದ ಭೀತಿ ಎದುರಾಗಿದೆ. ವಾತಾವರಣದಲ್ಲಿ ತಾಪಮಾನ ಹೆಚ್ಚಿದ್ದು, ನೀರಿನ ಕೊರತೆ ಎದ್ದು ಕಾಣುತ್ತಿದೆ. ಈಗಾಗಲೇ ತಾಪಮಾನ ಇಷ್ಟರ ಮಟ್ಟಿಗೆ ಹೆಚ್ಚಿದ್ದರೆ ಇನ್ನೂ ಏಪ್ರಿಲ್ ಮೇ ತಿಂಗಳಿನಲ್ಲಿ ಎಷ್ಟು ತಾಪಮಾನ ಏರಿಕೆ ಆಗಬಹುದು ಎಂಬುದು ಆತಂಕ ಉಂಟು ಮಾಡುತ್ತಿದೆ. ದಿನೇ ತುಂಗಾ ನದಿಯಲ್ಲಿಗ ನೀರಿನ ಮಟ್ಟ ಇಳಿಯಲಾರಂಭಿಸುತ್ತಿದೆ.
ತುಂಗಾ ನದಿಯು ಮೈದುಂಬಿ ಹರಿದು ಭಾರಿ ಪ್ರಮಾಣದ ನೀರು ಬರಬೇಕಿತ್ತು. ಈಗ ಮಳೆ ಇಲ್ಲದೆ ನದಿ, ಹಳ್ಳ, ಬಾವಿ, ಕೆರೆ ಎಲ್ಲವೂ ಬತ್ತಿಹೊಗುತ್ತಿದ್ದು ಬರಗಾಲದ ಮುನ್ಸೂಚನೆ ನೀಡಿದಂತಾಗಿದೆ. ಶಿವಮೊಗ್ಗ, ಚಿಕ್ಕಮಗಳೂರಿನ ಜನ ಮಳೆ ಇಲ್ಲದೆ ಮುಂದೇನು ಕಥೆ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಬೇಸಿಗೆ ಬಿಸಿಲು ಶುರುವಾಗಿದೆ

ಇನ್ನೂ ಬಿಸಿಲು ಝಳ ಹೆಚ್ಚಾಗಿ ಜನರು ಫ್ಯಾನ್ ಕೆಳಗೆ ಕೂರುವಂತೆ ಮಾಡಿದೆ. ಬಿತ್ತಿದ ಬೆಳೆಗೆ ನೀರು ಇಲ್ಲದೆ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗುವುದರ ಜತೆಗೆ ಬಿಸಿಲ ಝಳ ಜಾಸ್ತಿಯಾಗಿ ಪೈರಿನ ಗರಿಗಳು ಒಣಗಲಾರಂಭಿಸಿದ್ದು ಅಕ್ಕಿ, ತರಕಾರಿ, ಬೇಳೆ ಕಾಳುಗಳ ಬೆಲೆ ಏರಿಕೆಯಾದರೆ ಮುಂದೇನು ಗತಿ ಎಂಬಂತಾಗಿದೆ. ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಸಿದ್ಧವಾಗಿರುವ ಶಿವಮೊಗ್ಗ ಜಿಲ್ಲೆಯಾದ್ಯಂತ ಜಲ ಮೂಲಗಳು ಬತ್ತಿವೆ. ನದಿಗಳು ಸಹ ಹರಿವು ನಿಲ್ಲಿಸಿವೆ. ಸುಡು ಬಿಸಿಲು ತಾಂಡವಾಡುತ್ತಿದ್ದು ಜಲಾಶಯಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಬಿಸಿಲ ಬೇಗೆಗೆ ಬಾವಿಗಳಲ್ಲೂ ನೀರು ತಳಮಟ್ಟಕ್ಕೆ ತಲುಪಿದೆ. ಈ ಬಾರಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದ್ದು ಹೀಗೆ ಮುಂದುವರೆದರೆ ಜನಕುಡಿಯುವ ನೀರಿಗೂ ಪರಿತಪಿಸುವ ಪರಿಸ್ಥಿತಿ ಎದುರಾಗುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.