Categories
ತೀರ್ಥಹಳ್ಳಿ

ರೈತರ ಆಶಾಕಿರಣ ಕುಂಟುವಳ್ಳಿ ವಿಶ್ವನಾಥ್ ಜನ್ಮ ದಿನ

ರೈತರ ಆಶಾಕಿರಣ ಕುಂಟುವಳ್ಳಿ ವಿಶ್ವನಾಥ್ ಜನ್ಮ ದಿನ
– ಮಲೆನಾಡು ರೈತರ ಆಪತ್ ಬಾಂಧವ
– ವಿ ಟೆಕ್ ಸಂಸ್ಥೆ ಕಟ್ಟಿ ಸಾವಿರಾರು ಮಂದಿಗೆ ಉದ್ಯೋಗ

NAMMUR EXPRESS NEWS
ತೀರ್ಥಹಳ್ಳಿ: ಅಡಿಕೆ ಸುಲಿಯುವ ತಂತ್ರಜ್ಞಾನದ ಮೂಲಕ ಮಲೆನಾಡು, ಬಯಲು ಸೀಮೆಯ ರೈತರ ಬದುಕಿಗೆ ಭದ್ರತೆ ಹಾಗೂ ಸೌಲಭ್ಯ ಕೊಟ್ಟ ಯುವ ಉದ್ಯಮಿ ಕುಂಟುವಳ್ಳಿ ವಿಶ್ವನಾಥ್ ಅವರ ಜನ್ಮ ದಿನದಂದು ಸಾವಿರಾರು ಮಂದಿ ಅವರಿಗೆ ಶುಭಾಶಯ ಹೇಳಿದ್ದಾರೆ. ವಿಟೆಕ್ ಸಮೂಹ ಸಂಸ್ಥೆಗಳ ಮೂಲಕ ಅಡಿಕೆ ಸುಲಿಯುವ ಯಂತ್ರ, ರೈತರ ಅನೇಕ ಸಲಕರಣೆ ಕಂಡು ಹಿಡಿದು ರೈತರ ಕೃಷಿಗೆ ನೆರವಾದ ವಿಶ್ವನಾಥ್ ಅವರ ಸೇವೆ ಅಪಾರ.

ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ, ವೆಚ್ಚ ಹೆಚ್ಚಳ ಸಂದರ್ಭದಲ್ಲಿ ವಿ ಟೆಕ್ ಇಂಜಿನಿಯರ್ಸ್ ತಮ್ಮ ಸೇವೆ ಮೂಲಕ ಗಮನ ಸೆಳೆದಿದೆ. ಇಂದಿಗೂ ಅಡಿಕೆ ಮಿಷನ್ ವಿಭಾಗದಲ್ಲಿ ಮೂಲ ಸಂಶೋಧಕರಾಗಿ ದೇಶದಲ್ಲೇ ನಂಬರ್ 1 ಸ್ಥಾನ ಪಡೆದಿದ್ದಾರೆ. ತೀರ್ಥಹಳ್ಳಿಯಲ್ಲಿ ಉದ್ಯೋಗ ಸೃಷ್ಟಿ ಮೂಲಕ ರಾಜ್ಯದಲ್ಲೇ ಗಮನ ಸೆಳೆದಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿ ಪಡೆದಿರುವ ವಿಶ್ವನಾಥ್ ಅವರ ಸೇವೆಗೆ ಹ್ಯಾಟ್ಸ್ ಅಪ್. ಇನ್ನಷ್ಟು ಅಭಿವೃದ್ಧಿ ಅಗಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.