ಅಂತರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಆಶಿಕ್ ಕೆ.ಎಸ್. ಅವರಿಗೆ ಪ್ರಥಮ ಸ್ಥಾನ
– ಕೋಣಂದೂರಿನ ಶರಾವತಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ
– ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು, ಆಡಳಿತ ಸಿಬ್ಬಂದಿ ವರ್ಗದವರಿಂದ ಅಭಿನಂದನೆ
NAMMUR EXPRESS NEWS
ಮೂರನೇ ಅಂತರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕೋಣಂದೂರಿನ ಶರಾವತಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯಾದ ಆಶಿಕ್ ಕೆ.ಎಸ್. ಅವರಿಗೆ ಪ್ರಥಮ ಸ್ಥಾನ”
ದಿನಾಂಕ: 03.08.2025ರಂದು ನೆಹರು ಇಂಡೋರ್ ಸ್ಟೇಡಿಯಂ ಶಿವಮೊಗ್ಗದಲ್ಲಿ ನಡೆದ ಕರಾಟೆ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಕೋಣಂದೂರಿನ ಶರಾವತಿ ಪ್ರಥಮ ದರ್ಜೆ ಕಾಲೇಜಿನ ಕು: ಆಶಿಕ್ ಕೆ.ಎಸ್ ಪ್ರಥಮ ಬಿ.ಎ. ಇವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಕ್ರೀಡಾಪಟು ಕು: ಆಶಿಕ್ ಇವರು ಉತ್ತಮ ಅಥ್ಲೆಟಿಕ್ಸ್ ಆಗಿದ್ದು – ಇವರು ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಆರಡಿ ಮಲ್ಲಯ್ಯ ಪಿ. ಅವರು ಶುಭ ಹಾರೈಸಿದರು. ಕ್ರೀಡಾ ನಿರ್ದೇಶಕರಾದ ಶ್ರೀ ಜಿ.ಕೆ. ಗಿರೀಶ ಅವರನ್ನೂ ಅಭಿನಂದಿಸಿದರು. ಹಾಗೂ ಡಾ. ಪ್ರದೀಪ್ ಎನ್.ವಿ ಮುಖ್ಯಸ್ಥರು ಇತಿಹಾಸ ವಿಭಾಗ, ಬಿ. ಪ್ರಕಾಶ್, ಶ್ರೀಮತಿ ಸುಮನ ನತೀಶ್, ಶ್ರೀ ಕಾರ್ತಿಕ್ ಜಿ.ಡಿ. ಉಪನ್ಯಾಸಕರುಗಳು ಅಭಿನಂದಿಸಿದರು. ಕು: ಆಶಿಕ್ ನ ಸಾಧನೆಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ.) ಶಿವಮೊಗ್ಗ, ಸ್ಥಳೀಯ ಸಲಹಾ ಸಮಿತಿ, ಕೋಣಂದೂರು, ಇದರ ಆಡಳಿತ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು ಅಭಿನಂದಿಸಿದ್ದಾರೆ. ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು, ಆಡಳಿತ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕು: ಆಶಿಕ್ ಕೆ.ಎಸ್ ಇವರನ್ನು ಅಭಿನಂದಿಸಿದ್ದಾರೆ.
