ಮಿಂಚಿನ ಕಾರ್ಯಾಚರಣೆ ಮಡಬೂರಿನಲ್ಲಿ ಕಾಡಾನೆ ಸೆರೆ
* ಎನ್ ಆರ್ ಪುರ ತಾಲೂಕಿನಲ್ಲಿ ಸೆರೆಯಾದ ಎರಡನೇ ಪುಂಡಾನೆ
* ಕೊಪ್ಪದಲ್ಲೂ ಕಾಡಾನೆ ಹಾವಳಿ, ಗ್ರಾಮಸ್ಥರ ಆಕ್ರೋಶ
NAMMMUR EXPRESS NEWS
ಎನ್ ಆರ್ ಪುರ: ತಾಲೂಕಿನ ಮಡಬೂರು ಭಾಗದಲ್ಲಿ ರೈತರ ಜಮೀನಿಗೆ ನುಗ್ಗಿ ಬೆಳೆನಾಶ ಮಾಡುತ್ತಿದ್ದ ಕಾಡಾನೆಯನ್ನು ಇಂದು ಮಿಂಚಿನ ಕಾರ್ಯಾಚರಣೆ ನಡೆಸಿ ಸೆರೆಹಿಡಿಯಲಾಗಿದೆ. ಗ್ರಾಮದ ಕಪ್ಪೂರಿನಿಂದ ಆರಂಭವಾದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಸಕ್ರೇಬೈಲಿನ ನಾಲ್ಕು ಆನೆಗಳ ತಂಡ ಹಾಗೂ ಮಡಿಕೇರಿಯ ಮೂರು ಆನೆಗಳು ಸೇರಿ ಒಟ್ಟು ಏಳು ಆನೆಗಳು ಭಾಗವಹಿಸಿದ್ದವು. ಐವತ್ತಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
* ಕೊಪ್ಪದಲ್ಲೂ ಕಾಡಾನೆ ಹಾವಳಿ, ಗ್ರಾಮಸ್ಥರ ಆಕ್ರೋಶ
ಮಲೆನಾಡಿನಾದ್ಯಂತ ಕಾಡಾನೆ ಹಾವಳಿ ಹೆಚ್ಚಾಗಿದ್ದು ಇದೀಗ ಕೊಪ್ಪ ಭಾಗದಲ್ಲಿ ಉಪಟಳ ಶುರುವಾಗಿದೆ ದಿನವೂ ಮರಿತೊಟ್ಲು ಹಾಗೂ ಹುಲುಗಾರು ಗ್ರಮದ ರೈತರ ಜಮೀನಿಗೆ ಲಗ್ಗೆ ಇಡುವ ಆನೆಗಳು ಅಪಾರ ಪ್ರಮಾಣದಲ್ಲಿ ಬೆಳೆ,ಅಡಿಕೆ ಮರ,ಕಾಫಿ ಗಿಡ,ಭತ್ತದ ಸಸಿಗಳನ್ನು ನಾಶ ಪಡಿಸುತ್ತಿದೆ. ನಿನ್ನೆ ಮತ್ತೆ ಕೊಪ್ಪ ತಾಲೂಕಿನ ಅಂದಗಾರು ಸಮೀಪದ ಹುಲುಗಾರು ಗ್ರಾಮದ ಲಕ್ಷ್ಣಣ್ ಎಂಬುವರ ಜಮೀನಿಗೆ ನುಗ್ಗಿದ ಅಪಾರ ಪ್ರಮಾಣದ ಬೆಳೆ ನಾಶ ಮಾಡಿದೆ. ಹಲವು ದಿನಗಳಿಂದ ಕಾಡಾನೆಯಿಂದ ತೊಂದರೆಯಾಗುತ್ತಿದ್ದು ಕೂಡಲೇ ಕಾಡಾನೆಳನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹಲವು ದಿನಗಳಿಂದ ಕಾಡಾನೆ ಉಪಟಳದ ಮಾಹಿತಿ ಇದ್ದರೂ ಯಾವುದೇ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ,ಶಾಸಕರಿಗೂ ಈ ಬಗ್ಗೆ ಮನವಿ ಮಾಡಿದರು ಆನೆಗಳ ಸ್ಥಳಾಂತರಕ್ಕೆ ಅರಣ್ಯ ಸಚಿವರಿಗೆ ಮನವಿ ಮಾಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಕಾಡು ಪ್ರಾಣಿಗಳ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸದೇ ಇದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
