ರೈತ ಹೋರಾಟದ ದನಿಯಾದ ಕಾರ್ಯಕ್ರಮ!
– ಎನ್.ಡಿ.ಸುಂದರೇಶ್ ಅವರ ನೆನಪು, ಕಡಿದಾಳ್ ಶಾಮಣ್ಣನವರಿಗೆ ರೈತೋಪಚಾರ
– ರೈತ ಸಂಘ ಸೇರಿ ರೈತ ವಲಯದ ಸಮಾಗಮ
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯ ರೈತರ ಸಂಘ, ತಾಲೂಕು ಘಟಕ ತೀರ್ಥಹಳ್ಳಿ ಮತ್ತು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಗುರುವಾರ ಎನ್ ಡಿ ಸುಂದರೇಶ್ ಅವರ ನೆನಪು ಮತ್ತು ಕಡಿದಾಳು ಶಾಮಣ್ಣ ಅವರಿಗೆ ತವರೂರು ಸನ್ಮಾನ ,ರೈತೋಪಚಾರ ಕಾರ್ಯಕ್ರಮ ತೀರ್ಥಹಳ್ಳಿಯ ಗೋಪಾಲಗೌಡರಂಗ ಮಂದಿರದಲ್ಲಿ ನಡೆಸಲಾಯಿತು. ನಾಡಗೀತೆ ಮತ್ತು ರೈತ ಗೀತೆಯನ್ನು ಕಾಲೇಜು ಮಕ್ಕಳು ಹಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ರೈತ ಸಂಘದ ಗಣ್ಯರು, ರೈತರು ಶಾಲನ್ನು ಬೀಸುವ ಮೂಲಕ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ರೈತ ಹೋರಾಟಗಾರರಾದ ಕಂಬ್ಳಿಗೆರೆ ರಾಜೇಂದ್ರ ಅವರು ಪ್ರಭುತ್ವದ ಅತಿ ದೊಡ್ಡ ಕಾರ್ಯಕ್ರಮವೇ ರೈತರ ಭೂಮಿಯನ್ನು ಕಿತ್ತುಕೊಳ್ಳುವುದು ಬ್ರಿಟಿಷರ ಆದ್ಯತೆ ಯಾಗಿತ್ತು.
ನಾವು ರೈತರು ಸಂಘಟನೆಯಾಗಬೇಕು, ರೈತರ ಸಂಘಟನೆಗಾಗಿ ಚರ್ಚೆ ಮಾಡಬೇಕು. ನಮಗೆಲ್ಲ ಇಂತಹ ಪಾಠಗಳನ್ನು ಹೇಳಿದವರು ಎನ್ ಡಿ ಸುಂದರೇಶ್ ರವರು, ಎಚ್ಎಸ್ ರುದ್ರಪ್ಪನವರು ಈಗಲೂ ಕೂಡ ಅದೇ ಆಲೋಚನೆಯನ್ನು ಇಟ್ಟುಕೊಂಡಿರುವಂತಹ ಕಡಿದಾಳು ಶಾಮಣ್ಣನವರು ಇದ್ದಾರೆ ಅದು ನಮಗೆ ಸ್ಪೂರ್ತಿಯಾಗಬೇಕು ಎಂದರು. ಅನುಸೂಯಮ್ಮ ಅರಳಾಳುಸಂದ್ರ ಮಾತನಾಡಿ ಮುಂದಿನ ಪೀಳಿಗೆಗೆ ಮಾದರಿಯಾಗಿರುವಂತಹ ಶಾಮಣ್ಣನವರು ರೈತರ ಸಂಘಕ್ಕೆ ಹಿರಿಯರಾಗಿದ್ದಾರೆ. ಶಾಮಣ್ಣನವರು ನಮಗೆ ಪರಿಚಯವಾದ ಒಂದು ಅದೃಷ್ಟ ಎಂದು ಹೇಳಬಹುದು. ಅವರು ಪರಿಚಯವಾಗಿಲ್ಲವೆಂದರೆ ನಾವು ಇನ್ನು ಅಸಹಾಯಕರಾಗಿಯೇ ಇರುತ್ತಿದ್ದೆವು.
ನಮ್ಮ ಗ್ರಾಮದ ಹಾಗೂ ದೇಶದ ಸ್ವಾಭಿಮಾನ ಕಾಪಾಡುವುದು ನಮ್ಮ ಕರ್ತವ್ಯ ಇದನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು. ಸಾಹಿತಿಗಳು ಮತ್ತು ಸಾಮಾಜಿಕ ಹೋರಾಟಗಾರರಾದ ಡಾ. ರಾಜೇಂದ್ರ ಚೆನ್ನಿ ಮಾತನಾಡಿ ಕಡಿದಾಳು ಶಾಮಣ್ಣ ಅವರು ರೈತ ಸಂಘದ ಚಳುವಳಿಯನ್ನು ಮಾಡಿ ಪ್ರಭುತ್ವ ಎನ್ನುವ ರಾಕ್ಷಸ ಚಳುವಳಿಯನ್ನು ಹಿಂದಿಕ್ಕಿದರು. ರೈತ ಸಂಘವನ್ನು ಕಟ್ಟಿಕೊಟ್ಟಂತಹ ಅಭಿಮಾನ ಮತ್ತೆ ಅದರ ಜೊತೆ ಇರುವಂತಹ ಆತ್ಮವಿಶ್ವಾಸ ಎಲ್ಲಾ ಪ್ರಭುತ್ವಗಳು ಅವರ ಕಾಲಿಗೆ ಬೀಳುವ ಹಾಗೆ ಮಾಡಿದ್ದವು ನಮ್ಮ ರೈತ ಸಂಘದ ಚಳುವಳಿ. ಆ ಚಳುವಳಿಯ ನಿಜವಾದ ಒಂದು ಶಕ್ತಿಯನ್ನು ನಾವು ನೋಡಲು ಸಾಧ್ಯವಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ರೈತ ಹೋರಾಟಗಾರ ವೆಂಕಟೇಶ್ ಮಾತನಾಡಿ ಅವರ ಕಾಲದಲ್ಲಿ ಮಾಡಿದ ಹೋರಾಟಗಳು ತೀರ್ಥಹಳ್ಳಿಯಲ್ಲಿ ಆರಂಭ ಮಾಡಿದ್ದ ರೈತರ ಚಳುವಳಿ, ಆಗುಂಬೆ ಘಾಟಿಯಲ್ಲಿ 59 ಎತ್ತಿನಗಾಡಿ, ಟ್ರ್ಯಾಕ್ಟರ್ ತೆಗೆದುಕೊಂಡು ಹೋಗುವುದು. ನಮ್ಮಲ್ಲಿ ವಸೂಲಿಗೆ ಬಂದಂತಹ ಅಧಿಕಾರಿಗಳನ್ನು ಹಿಡಿದು ಕಟ್ಟಿಹಾಕಿ ಇಂತಹ ಬಹಳಷ್ಟು ಹೋರಾಟಗಳನ್ನು ಮಾಡಿದ್ದೆವು. ನಾವು ಯಾವುದೇ ನಿರೀಕ್ಷೆಯನ್ನಿಟ್ಟುಕೊಂಡು ಹೋರಾಟ ಮಾಡಿದವರಲ್ಲ. ನಮ್ಮ ಹೋರಾಟಕ್ಕೆ ಶಾಮಣ್ಣ ಹಾಗೂ ಸುಂದರೇಶ್ ಅಣ್ಣ ಅವರು ಮಾರ್ಗದರ್ಶಿಗಳಾಗಿದ್ದರು. ಅವರ ಆಶಯವನ್ನು ನಮ್ಮ ಮುಂದಿನ ಪೀಳಿಗೆಗೆ ಹಂಚಬೇಕು ಎಂಬುದು ನಮ್ಮ ಆಶಯ ಎಂದರು. ಸಾಹಿತಿಗಳಾದ ಡಾ. ರಾಜೇಂದ್ರ ಚೆನ್ನಿ ಮಾತನಾಡಿ, ಇಂದು ರೈತ ಹೋರಾಟಗಳು ಮರೆಯಾಗಿವೆ. ರಾಜಕೀಯದ ಹೊಡೆತಕ್ಕೆ ಸಂಘಟನಾ ಶಕ್ತಿ ಕುಸಿದಿದೆ ಎಂದು ಆತಂಕವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕರಾದ ಡಾ. ಆರ್. ಎಂ. ಮಂಜುನಾಥ್ ಗೌಡ, ಸಹಕಾರಿ ನಾಯಕರಾದ ವಿಜಯದೇವ್, ರೈತ ಸಂಘದ ಪ್ರಮುಖರಾದ ನೆಂಪೆ ದೇವರಾಜ್ ಇತರರು ಇದ್ದರು.