Categories
ತೀರ್ಥಹಳ್ಳಿ

ವೈಕುಂಠ ಏಕಾದಶಿ ಆಚರಣೆಗೆ ಸಿದ್ಧತೆ!

ವೈಕುಂಠ ಏಕಾದಶಿ ಆಚರಣೆಗೆ ಸಿದ್ಧತೆ!
– ತೀರ್ಥಹಳ್ಳಿ ವೆಂಕಟರಮಣ, ಅರುಣಗಿರಿಯಲ್ಲಿ ಅದ್ದೂರಿ ಆಚರಣೆ
– ಡಿ.23ಕ್ಕೆ ಆಚರಣೆ: ಎಲ್ಲೆಲ್ಲಿ ಆಚರಣೆ?

NAMMUR EXPRESS NEWS
ತೀರ್ಥಹಳ್ಳಿ: ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರಣೆಯೂ ವಿಶಿಷ್ಠ ಹಾಗೂ ವಿಶೇಷ. ಹಿಂದೂಗಳು ಪ್ರತಿ ತಿಂಗಳು ಏಕಾದಶಿ ವ್ರತ ಆಚರಿಸುತ್ತಾರೆ. ವಿಷ್ಣುವನ್ನು ಆರಾಧಿಸುವ ದಿನ ಏಕದಶಿ. ಈ ದಿನ ಉಪವಾಸ ಮಾಡುವ ಮೂಲಕ ದೇವರಕೃಪೆಗೆ ಪಾತ್ರರಾಗಲು ಬಯಸುತ್ತಾರೆ. ಒಂದು ತಿಂಗಳಲ್ಲಿ ಎರಡು ಬಾರಿ ಏಕಾದಶಿ ಬರುತ್ತದೆ. ಕೃಷ್ಣ ಪಕ್ಷದಲ್ಲಿ ಒಮ್ಮೆ ಏಕಾದಶಿ ಬಂದರೆ, ಇನ್ನೊಮ್ಮೆ ಶುಕ್ಲ ಪಕ್ಷದಲ್ಲಿ ಏಕಾದಶಿ ಆಚರಣೆ ಇರುತ್ತದೆ. ವರ್ಷದಲ್ಲಿ ಒಟ್ಟು 24 ಏಕಾದಶಿಗಳಿರುತ್ತವೆ. ವೈಕುಂಠ ಏಕಾದಶಿಯನ್ನು ಕರ್ನಾಟಕದಲ್ಲಿ ಬಹಳ ವಿಶೇಷವಾಗಿ ಆಚರಿಸುತ್ತಾರೆ. ವೈಕುಂಠ ಏಕಾದಶಿಯನ್ನು ಪೌಷ ಪುತ್ರದಾ ಏಕಾದಶಿ, ಮುಕ್ಕೋಟಿ ಏಕಾದಶಿ, ಭೀಷ್ಮ ಏಕಾದಶಿ ಎಂದೂ ಕರೆಯುತ್ತಾರೆ.

ಡಿಸೆಂಬರ್ 23ರ ವೈಕುಂಠ ಏಕಾದಶಿಯಂದು ತೀರ್ಥಹಳ್ಳಿಯ ರಥಬೀದಿಯ ವೆಂಕಟರಮಣ ದೇವಸ್ಥಾನದಲ್ಲಿ ಹಾಗೂ ಅರುಣಗಿರಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ವೈಕುಂಠ ಏಕಾದಶಿಯನ್ನು ಆಚರಿಸಲಾಗುವುದು. ಇನ್ನು ಅರುಣಗಿರಿ ದೇವಾಲಯದಲ್ಲೂ ಕೂಡ ವೈಕುಂಠ ಏಕಾದಶಿ ಆಚರಣೆ ಮಾಡಲಾಗುವುದು. ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಎಲ್ಲಾ ಲಕ್ಷ್ಮಿ ವೆಂಕಟರಮಣ ದೇವಾಲಯದಲ್ಲಿ ವೈಕುಂಠ ಏಕಾದಶಿ ಆಚರಣೆ ಮಾಡಲಾಗುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.