Categories
ತೀರ್ಥಹಳ್ಳಿ

ವಿದ್ಯುತ್ ಬೆಳಕಲ್ಲಿ ಅರಳಿದ ಅಯೋಧ್ಯೆ!

ವಿದ್ಯುತ್ ಬೆಳಕಲ್ಲಿ ಅರಳಿದ ಅಯೋಧ್ಯೆ!
– ತೀರ್ಥಹಳ್ಳಿ ತುಂಗಾ ನದಿ ತೀರದಲ್ಲಿ ಅಯೋಧ್ಯೆ ಮಾದರಿ!
– ಗಮನ ಸೆಳೆದ ವಿದ್ಯುತ್ ಅಲಂಕಾರ! ಭಕ್ತರಿಂದ ಮೆಚ್ಚುಗೆ
– ಭಾವುಕರಾದ ಭಕ್ತರು!

NAMMUR EXPRESS NEWS
ತೀರ್ಥಹಳ್ಳಿ ಜಾತ್ರೆ ವಿಶೇಷ: ತೀರ್ಥಹಳ್ಳಿಯ ಈ ಬಾರಿ ಜಾತ್ರೆಯಲ್ಲಿ, ನೂತನವಾಗಿ ನಿರ್ಮಾಣವಾದ ಮೆಟ್ಟಿಲುಗಳು ಮತ್ತು ಕಿರುಸೇತುವೆ ಬಹಳ ಅನುಕೂಲಕರ ಹಾಗು ಆಕರ್ಷಕವಾಗಿದ್ದರೆ, ವಿದ್ಯುತ್ ದೀಪಗಳಿಂದ ತಯಾರಾದ ಅಯೋಧ್ಯೆಯ ರಾಮಮಂದಿರದ ವಿನ್ಯಾಸ ಅತ್ಯಂತ ಆಕರ್ಷಣೀಯವಾಗಿದೆ. ಅಯೋಧ್ಯೆ ಮಾದರಿಗೆ ಕೊಂಚವೂ ಚ್ಯುತಿ ಬಾರದಂತೆ ಬಹಳಷ್ಟು ಕಷ್ಟಪಟ್ಟು ಈ ವಿನ್ಯಾಸ ಮಾಡಲಾಗಿದೆ. ಮರಳಿನಲ್ಲಿ ಕಂಬಗಳನ್ನು ಹುಗಿಯುವುದು ತ್ರಾಸದಾಯಕ ಎನಿಸಿದಿರೂ ಕೊನೆಗೂ ಈ ಕೆಲಸವನ್ನು ಬಹಳ ಶ್ರದ್ಧೆಯಿಂದ ಅಚ್ಚುಕಟ್ಟಾಗಿ ತೀರ್ಥಹಳ್ಳಿಯ ಪ್ರಸಿದ್ಧ ಫ್ಲವರ್ ಡೆಕೋರೇಟರ್ ಆದ ಎಂ ಎಸ್ ಡೆಕೋರೇಟರ್ಸ್ ಮಾಡಿದ್ದಾರೆ.

ಪಟಾಕಿ ಹೊಡೆಯುವ ಸ್ಥಳದಲ್ಲಿ ಅಯೋಧ್ಯ ರಾಮ ಮಂದಿರದ ಲೈಟನ್ನು ಆನ್ ಮಾಡಿದ್ದು ಈ ಫೋಟೋ ಮತ್ತು ವಿಡಿಯೋಗಳು ಇಡೀ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಅಯೋಧ್ಯೆ ಮಂದಿರದ ಮಾದರಿಯನ್ನು ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ. ಈ ದೃಶ್ಯವನ್ನು ನೋಡುತ್ತಿರುವ ಜನ ಬಹಳ ಭಾವನಾತ್ಮಕ ರಾಗಿ, ಪಾದರಕ್ಷೆಗಳನ್ನು ತೆಗೆದು ಕೈ ಮುಗಿಯುತ್ತಿದ್ದಾರೆ. ಮತ್ತು ಸಾಕ್ಷಾತ್ ಅಯೋಧ್ಯೆಯನ್ನೇ ನೆನಪಿಸುವ ಮಂದಿರ ಇದಾಗಿದ್ದು, ಜಬಿ, ಶಮೀರ್, ಜೇಮ್ಸ್, ರಾಘು ಮತ್ತು ಸಮೀರ್ ಆಸಿಫ್ ಅವರ ಶ್ರಮದ ಫಲವಾಗಿ ಅದ್ಭುತವಾಗಿ ಅರಳಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.