Categories
ತೀರ್ಥಹಳ್ಳಿ

ತೀರ್ಥಹಳ್ಳಿ ತುಂಗಾ ನದಿಯಲ್ಲಿ ಬೋಟಿಂಗ್ ಜೋರು!

ತೀರ್ಥಹಳ್ಳಿ ತುಂಗಾ ನದಿಯಲ್ಲಿ ಬೋಟಿಂಗ್ ಜೋರು!
– ನದಿಯಲ್ಲಿ ಬೋಟಿಂಗ್ ಮಾಡಿದ ಆರಗ ಜ್ಞಾನೇಂದ್ರ
– ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ!
– ತುಂಗಾ ನದಿಯಲ್ಲಿ ನಾಪತ್ತೆಯಾಗಿದ್ದವರ ಶವ ಎತ್ತಲು ಸಹಕರಿಸಿದ ಬೋಟಿಂಗ್ ಹುಡುಗರು!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವದಲ್ಲಿ ತುಂಗಾ ನದಿಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದು ಜಾತ್ರೆಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ. ತುಂಗಾ ನದಿಯಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ದಿ.11ನೇ ಗುರುವಾರದಿಂದ 14ನೆ ಭಾನುವಾರದವರೆಗು ಮಾಡಲಾಗಿದೆ. ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬೋಟಿಂಗ್ ಅಲ್ಲಿ ಸುತ್ತಿ ತಮ್ಮ ಒತ್ತಡದ ನಡುವೆ ಎಂಜಾಯ್ ಮಾಡಿದ್ದಾರೆ. ತೀರ್ಥಹಳ್ಳಿಯ ತುಂಗಾ ತೀರದಲ್ಲಿ ಬೋಟಿಂಗ್ ‘ಕಾರ್ಲಾ ಕರಾವಳಿ ಅಡ್ವೆಂಚರ್ಸ್’ ಕಾರ್ಕಳ ಮುಂದಾಗಿದ್ದು ತೀರ್ಥಹಳ್ಳಿಯಲ್ಲಿ ಬೋಟಿಂಗ್ ಉತ್ಸವವನ್ನು ಪ್ರಸ್ತುತ ಪಡಿಸುತ್ತಿದೆ. ಇತ್ತೀಚಿಗೆ ನದಿಯಲ್ಲಿ ನಾಪತ್ತೆಯಾಗಿದ್ದ ಬಾಲಕನ ಶವ ಎತ್ತಲು ಈ ಬೋಟಿಂಗ್ ಟೀಮ್ ಸಹಕಾರ ಮಾಡಿದ್ದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ಬೋಟಿಂಗ್ ಬೆಳಿಗ್ಗೆ 6 ರಿಂದ ಸಂಜೆ 6-30 ರವರೆಗೆ ನಡೆಯಲಿದೆ. ಬೋಟಿಂಗ್ ತೀರ್ಥಹಳ್ಳಿ ರಥಬೀದಿಯ ತುಂಗಾತೀರದಲ್ಲಿ ಆಯೋಜಿಸಲಾಗಿದ್ದು, ಥ್ರಿಲ್ಲಿಂಗ್ ಅಂಡ್ ಎಕ್ಸೈಟಿಂಗ್ ಆಗಿ ಇರಲಿದೆ. ಆಯೋಜಕರು ತರಬೇತಿ, ಅನುಭವ ಹಾಗು ಕೇರಿಂಗ್ ಹೊಂದಿದವರಾಗಿದ್ದಾರೆ. ಎಲ್ಲ ವಯಸ್ಸಿನವರೂ ಬೋಟಿಂಗ್ ನ ಥ್ರಿಲ್ ಅನುಭವಿಸಬಹುದಾಗಿದೆ. ಮಕ್ಕಳು ಮತ್ತು ಫ್ಯಾಮಿಲಿಗೆ ಇದೊಂದ್ ಫುಲ್ ಪ್ಯಾಕೇಜ್ ಎಂಟರ್ಟೈನ್ಮೆಂಟ್ ಆಗಿದೆ. ತುಂಗಾ ನದಿ ನೀರಿನಲ್ಲಿ ಬೋಟಿಂಗ್ ಮಾಡುತ್ತಾ ಸುತ್ತಲಿನ ಪ್ರಕೃತಿ ಸೌಂದರ್ಯ ಸವಿಯುವುದರೊಂದಿಗೆ ಒಂದು ಅಡ್ವೆಂಚರಸ್ ಅನುಭವ ಹೊಂದಲು ‘ಕಾರ್ಲಾ ಕರಾವಳಿ ಅಡ್ವೆಂಚರ್ಸ್’ ಕರೆ ನೀಡಿದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯ್ತಿ (ಶಾಲಾ-ಕಾಲೇಜು ಗುರುತಿನ ಪತ್ರ ಕಡ್ಡಾಯ)ಯನ್ನೂ ನೀಡುತ್ತಿದ್ದಾರೆ. .

ಹೆಚ್ಚಿನ ಮಾಹಿತಿಗಳಿಗಾಗಿ :

ಪ್ರಚಿತ್ ಕುಮಾರ್ 9980952026
ಗುರು ಕಿರಣ್ 9900883677 ಸಂಪರ್ಕಿಸಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.