Categories
ತೀರ್ಥಹಳ್ಳಿ

ಶ್ರೀ ರಾಮೇಶ್ವರ ದೇವರ ನಿತ್ಯ ಅನ್ನ ಸಂತರ್ಪಣಾ ಮತ್ತು ಧಾರ್ಮಿಕ ಸೇವಾ ಸಮಿತಿ ಇವರ ವತಿಯಿಂದ ಚಿಲುಮೆ ಅರ್ಥ ಸಹಿತ ಭಗವದ್ಗೀತೆ ಕಾರ್ಯಕ್ರಮ

ಶ್ರೀ ರಾಮೇಶ್ವರ ದೇವರ ನಿತ್ಯ ಅನ್ನ ಸಂತರ್ಪಣಾ ಮತ್ತು ಧಾರ್ಮಿಕ ಸೇವಾ ಸಮಿತಿ ಇವರ ವತಿಯಿಂದ ಚಿಲುಮೆ ಅರ್ಥ ಸಹಿತ ಭಗವದ್ಗೀತೆ ಕಾರ್ಯಕ್ರಮ
– 12 ದಿನಗಳ ಮಕ್ಕಳ ಉಚಿತ ಬೇಸಿಗೆ ಕಲಿಕಾ ಶಿಬಿರ ಆಯೋಜನೆ
– ಇನ್ನೂ ಕೂಡ ಹೆಸರನ್ನು ನೊಂದಾಯಿಸಿಕೊಳ್ಳಲು ಅವಕಾಶ

NAMMUR EXPRESS NEWS
ಶ್ರೀರಾಮೇಶ್ವರ ದೇವರ ನಿತ್ಯ ಅನ್ನ ಸಂತರ್ಪಣಾ ಮತ್ತು ಧಾರ್ಮಿಕ ಸೇವಾ ಸಮಿತಿ (ರಿ ) ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ಚಿಲುಮೆ ಅರ್ಥ ಸಹಿತ ಭಗವದ್ಗೀತೆ 12 ದಿನಗಳ ಮಕ್ಕಳ ಉಚಿತ ಬೇಸಿಗೆ ಕಲಿಕಾ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬ ಮಕ್ಕಳು ಕೂಡ ಪಡೆದುಕೊಳ್ಳಬೇಕು ಎಂಬುದು ಸಮಿತಿಯ ಉದ್ದೇಶವಾಗಿದೆ. ಏಪ್ರಿಲ್ 29 ಮಂಗಳವಾರದಿಂದ ಮೇ 10 ಶನಿವಾರದವರೆಗೆ ಸಮಯ – ಮಧ್ಯಾಹ್ನ 4:00 ರಿಂದ 6:00 ವರೆಗೆ
ಶ್ರೀ ರಾಮೇಶ್ವರ ಸಭಾಭವನ,ರಥಬೀದಿ, ತೀರ್ಥಹಳ್ಳಿಯಲ್ಲಿ ನಡೆಯಲಿದೆ. ಶಿಬಿರದ ವಿಶೇಷತೆ ಎಂದರೆ ಪಂಚಾಂಗ, ಧಾರ್ಮಿಕ ವಚನ, ಸಂಸ್ಕೃತ ಶ್ಲೋಕ, ಭಗವದ್ಗೀತೆ, ಜನಪದ ಗೀತೆ,ಭಜನಾ ನೃತ್ಯ, ಅಭಿನಯ ಗೀತೆ, ದೇಶಭಕ್ತಿ ಗೀತೆ, ಮಂಕುತಿಮ್ಮನೆ ಕೆಗ್ಗ, ಒಗಟು, ಯೋಗ, ಆರೋಗ್ಯ, ಇನ್ನೂ ಅನೇಕ ವಿಷಯಗಳು ಸಂಪನ್ಮೂಲ ವ್ಯಕ್ತಿಗಳಿಂದ ಈ ಮಹತ್ತರವಾದ ಶಿಬಿರ ನೆರವೇರಲಿದೆ. ಇನ್ನು ಕೂಡ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಇದೆ. ಇದರ ಸದುಪಯೋಗ ಪಡೆದುಕೊಳ್ಳಿಬೇಕಾಗಿ ಶ್ರೀರಾಮೇಶ್ವರ ದೇವರ ನಿತ್ಯ ಸಂತರ್ಪಣಾ ಮತ್ತು ಧಾರ್ಮಿಕ ಸೇವಾ ಸಮಿತಿ ಇವರು ಕೋರಿದ್ದಾರೆ.

ಹೆಸರು ನೊಂದಾಯಿಸಲು ಸಂಪರ್ಕ ಸಂಖ್ಯೆ –

8431991670, 9480577931, 6362819283

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.