ರಾಜ್ಯಕ್ಕೇ ಫಸ್ಟ್ ಕಾರ್ಕಳದ ಸ್ವಸ್ತಿ ಕಾಮತ್!
– ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ 625ಕ್ಕೆ 625 ಅಂಕ ಪಡೆದ ಏಕೈಕ ವಿದ್ಯಾರ್ಥಿನಿ
– ಜ್ಞಾನಸುಧಾದ ವಿದ್ಯಾರ್ಥಿನಿಗೆ 2 ಲಕ್ಷ ರೂ. ನಗದು ಬಹುಮಾನ
NAMMUR EXPRESS NEWS
ಕಾರ್ಕಳ: 2024-25ನೇ ಶೈಕ್ಷಣಿಕ ಸಾಲಿನ SSLC ಫಲಿತಾಂಶದಲ್ಲಿ ರಾಜ್ಯದಲ್ಲಿ 625ಕ್ಕೆ 625 ಅಂಕ ಪಡೆದ 22 ವಿದ್ಯಾರ್ಥಿಗಳಲ್ಲಿ ಜ್ಞಾನಸುಧಾದ ವಿದ್ಯಾರ್ಥಿನಿ ಸ್ವಸ್ತಿ ಕಾಮತ್ ಮಿಂಚಿದ್ದಾರೆ.
ಹೌದು ಈಕೆ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದವರಾಗಿದ್ದು, ಜನಾರ್ಧನ್ ಕಾಮತ್ ಮತ್ತು ಶಾಂತಿ ಕಾಮತ್ ಅವರ ಮಗಳು ಇವರು ರಾಜ್ಯದಲ್ಲೇ ಸಾಧನೆ ಮಾಡಿದ್ದಾರೆ. ಸ್ವಸ್ತಿ ಕಾಮತ್ 625 ಅಂಕ ಪಡೆಯುವುದರೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಜಿಲ್ಲೆಗೆ ಕೀರ್ತಿ ತಂದು ಕೊಟ್ಟಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಿಂದ 625 ಅಂಕ ಏಕೈಕ ವಿದ್ಯಾರ್ಥಿನಿಯಾಗಿರುವ ಸ್ವಸ್ತಿ ಕಾಮತ್‌ಗೆ ಸಂಸ್ಥೆಯಿಂದ 2 ಲಕ್ಷ ರೂ. ಬಹುಮಾನ ದೊರೆಯಲಿದೆ ಎಂದು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ನಗದು ಬಹುಮಾನ ಘೋಷಣೆಯನ್ನು ಮಾಡಿದ್ದಾರೆ.
