ಈಶಪ್ರಿಯತೀರ್ಥ ಶ್ರೀಪಾದಂಗಳವರ ಆಶೀರ್ವಚನ
– ಏ.10ಕ್ಕೆ ಬ್ರಾಹ್ಮಣ ಸಂಘ ತೀರ್ಥಹಳ್ಳಿ ಇವರ ಆಯೋಜನೆ
– ಭಾರತೀಯರ ಬದುಕಿನಲ್ಲಿ ಸನಾತನ ಧರ್ಮದ ಮಹತ್ವ ನಿನ್ನೆ, ಇಂದು ಮತ್ತು ನಾಳೆ’ ಎಂಬ ವಿಷಯದ ಬಗ್ಗೆ ಪ್ರವಚನ
NAMMUR EXPRESS NEWS
ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾಲ್ಲೂಕು (ರಿ) ತೀರ್ಥಹಳ್ಳಿ ಮತ್ತು ಹಿರಿಯರ ಬಳಗ ಇವರ ಆಶ್ರಯದಲ್ಲಿ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯ ಮತ್ತು ಆಶೀರ್ವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 10ರಂದು ಗುರುವಾರ ಸಂಜೆ 5ರಿಂದ 6 ಗಂಟೆಯವರೆಗೆ ಗಾಯತ್ರಿ ಮಂದಿರ, ತೀರ್ಥಹಳ್ಳಿಯಲ್ಲಿ ನೆರವೇರಲಿದೆ.
ಉಡುಪಿಯ ಶ್ರೀ ಅದಮಾರು ಮಠದ ಕಿರಿಯ ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದಂಗಳವರಿಂದ ‘ಭಾರತೀಯರ ಬದುಕಿನಲ್ಲಿ ಸನಾತನ ಧರ್ಮದ ಮಹತ್ವ ನಿನ್ನೆ, ಇಂದು ಮತ್ತು ನಾಳೆ’ ಎಂಬ ವಿಷಯದ ಬಗ್ಗೆ ಪ್ರವಚನ ಮತ್ತು ಸಂಜೆ 6 ರಿಂದ 7ರವರೆಗೆ ಶ್ರೀಪಾದಂಗಳವರ ಅಮೃತ ಹಸ್ತದಿಂದ ಮಂತ್ರಾಕ್ಷತೆ ತೀರ್ಥಹಳ್ಳಿ ತಾಲ್ಲೂಕಿನ ಸಮಸ್ತ ನಾಗರೀಕರೂ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವುದಲ್ಲದೆ, ಶ್ರೀ ಪಾದಂಗಳವರ ಕೃಪಾಶೀರ್ವಾದವನ್ನು ಪಡೆದುಕೊಳ್ಳಬೇಕಾಗಿ ಪ್ರಾರ್ಥಿಸುವೆವು. ಸಮಸ್ತ ನಾಗರೀಕರಿಗೂ ಸ್ವಾಗತ-ಸುಸ್ವಾಗತವನ್ನು
ಚಂದ್ರಶೇಖರ್ ತುಂಬರಮನೆ ಅಧ್ಯಕ್ಷರು ಮತ್ತು ಸದಸ್ಯರು ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾII(ರಿ) ತೀರ್ಥಹಳ್ಳಿ, ಡಾ.ಮನೋಹರರಾವ್ ಸಂಚಾಲಕರು ಮತ್ತು ಸದಸ್ಯರು ಹಿರಿಯರ ಬಳಗ ಇವರು ಕೋರಿದ್ದಾರೆ.
