ಪುನೀತ್ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ
– ರಕ್ತದಾನ ಮಾಡುವುದರ ಮೂಲಕ ಪುನೀತ್ ಜನ್ಮದಿನ ಆಚರಣೆ
– ಎರಡನೇ ವರ್ಷದ ರಕ್ತದಾನ ಶಿಬಿರವು ಸಮರ್ಪಣಾ ತಂಡದಿಂದ ಯಶಸ್ವಿ
NAMMUR EXPRESS NEWS
ತೀರ್ಥಹಳ್ಳಿ : ಪುನೀತ್ ಜನ್ಮದಿನದ ಆಚರಣೆಯ ಅಂಗವಾಗಿ ಮಾರ್ಚ್ 16 ರಂದು ಎರಡನೇ ವರ್ಷದ ರಕ್ತದಾನ ಶಿಬಿರವು ಸಮರ್ಪಣಾ ತಂಡದಿಂದ ರಾಮಲಿಂಗೇಶ್ವರ ದೇವಾಲಯ ಸಭಾಭವನ ಮುತ್ತವಳ್ಳಿಯಲ್ಲಿ ನಡೆಯಿತು. ರಕ್ತದಾನ ಶಿಬಿರವನ್ನು ರಾಮಕೃಷ್ಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿರಾವ್ ಉದ್ಘಾಟನೆ ಮಾಡಿದರು.
ಪ್ರತಿ ವರ್ಷವೂ ಪುನೀತ್ ಜನ್ಮದಿನದಂದು ರಕ್ತದಾನ ಶಿಬಿರ ನಡೆಸುತ್ತಿದ್ದು, ಈ ವರ್ಷವೂ ರಕ್ತದಾನ ಶಿಬಿರ ನಡೆಸಿ 35 ಜನ ರಕ್ತದಾನ ಮಾಡುವುದರ ಮೂಲಕ ಪುನೀತ್ ಜನ್ಮದಿನವನ್ನು ಆಚರಣೆ ಮಾಡಿದರು. ಇದೇ ಸಂದರ್ಭದಲ್ಲಿ ಸಮರ್ಪಣಾ ತಂಡದವರು ಪುನೀತ್ ರಾಜ್ ಕುಮಾರ್ ಅವರ ಹೆಸರಲ್ಲಿ ಒಳ್ಳೆಯ ಕೆಲಸಗಳು ಎಲ್ಲಾ ಕಡೆಯಲ್ಲೂ ನಡೆಯುತ್ತಿರಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರೋಟರಿ ಬ್ಲಡ್ ಬ್ಯಾಂಕಿನ ಅಧ್ಯಕ್ಷರಾದ ಅರುಣ್, ಸಮರ್ಪಣಾ ತಂಡದ ಅಧ್ಯಕ್ಷರಾದ ಸುಮಂತ್ ಹಾಗೂ ಸಮರ್ಪಣಾ ತಂಡದ ಸದಸ್ಯರು ಉಪಸ್ಥಿತರಿದ್ದರು.
