ಕಾರ್ಕಳದ ಹೆಮ್ಮೆಯ ಕಬ್ಬಡಿ ಆಟಗಾರ ಪ್ರೀತಂ ಶೆಟ್ಟಿ ಸ್ಮರಣಾರ್ಥ ಮೇ. 3ಕ್ಕೆ ಅದ್ದೂರಿ ಕಬ್ಬಡಿ ಪಂದ್ಯಾಟ!
* ಕಾರ್ಕಳ ಶ್ರೀಅರ್ಧನಾರೀಶ್ವರ ಸ್ಪೋರ್ಟ್ಸ್ ಕ್ಲಬ್ ಮುಟ್ಲುಪಾಡಿ ವತಿಯಿಂದ ಆಯೋಜನೆ
* ಪತ್ರಿಕಾಗೋಷ್ಠಿ ನಡೆಸಿ ಪಂದ್ಯಾಟದ ಮಾಹಿತಿ ನೀಡಿದ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷರು ಗಿರೀಶ್ ಶೆಟ್ಟಿ ತೆಳ್ಳಾರ್!
ಕಾರ್ಕಳ: ಕಾರ್ಕಳ ಪ್ರಕಾಶ್ ಹೋಟೆಲಿನಲ್ಲಿ ಮಾ. 18ರಂದು
ಶ್ರೀಅರ್ಧನಾರೀಶ್ವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪತ್ರಿಕಾಗೋಷ್ಠಿ ನಡೆಯಿತು.
ಕಾರ್ಕಳದ ಹೆಮ್ಮೆಯ ಯುವಕ, ರಾಷ್ಟ್ರಮಟ್ಟದ ಕಬ್ಬಡಿ ಆಟಗಾರ ಪ್ರೀತಂ ಶೆಟ್ಟಿಯವರ ಸ್ಮರಣಾರ್ಥ, ಕಾರ್ಕಳ ವಿಧಾನಸಭಾ ವ್ಯಾಪ್ತಿ ಹಾಗೂ ರಾಷ್ಟ್ರೀಯ ಮಟ್ಟದ ಕಬ್ಬಡಿ ಪಂದ್ಯಾಟ ಆಯೋಜಿಸಲಾಗಿದೆ ಎಂದು ಮುಟ್ಲುಪಾಡಿಯ
ಶ್ರೀ ಅರ್ಧನಾರೀಶ್ವರ ಸ್ಪೋರ್ಟ್ಸ್ ಕ್ಲಬಿನ ಗೌರವಾಧ್ಯಕ್ಷರಾದ ಗಿರೀಶ್ ಶೆಟ್ಟಿ ತೆಳ್ಳಾರ್ ಅವರು ಮಾಹಿತಿ ನೀಡಿದರು.
ಪಂದ್ಯಾಟವು ಮುನಿಯಾಲಿನ ಸಾರ್ವಕರ್ ಮೈದಾನದಲ್ಲಿ ಮೇ. 03 2025ರಂದು ಬೆಳಗ್ಗೆ 9.30ಕ್ಕೆ ಆರಂಭವಾಗಿ ಸಂಜೆ 6.30ಕ್ಕೆ ರಾಷ್ಟ್ರೀಯ ಮಟ್ಟದ ಪಂದ್ಯಾವಳಿ ನಡೆಯಲಿದೆ ಎಂದು ತಿಳಿಸಿದರು.
ಪ್ರೊ. ಕಬ್ಬಡಿ ಆಟಗಾರನ್ನೊಳಗೊಂಡ 8 ವಿವಿಧ ಮಾಲಕರ 8 ತಂಡಗಳು, ಹೆಸರಾಂತ ಮಾಜಿ ಕ್ರಿಕೆಟಿಗರು, ಬಾಲಿವುಡ್, ಸ್ಯಾಂಡಲ್ ವುಡ್ ತಾರೆಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಅದ್ದೂರಿ ಯೋಜನೆಯ ಜೊತೆಗೆ 10 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಲು ಗ್ಯಾಲರಿ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಕಳ ವಿಧಾನಸಭಾ ವ್ಯಾಪ್ತಿಯ ಪಂದ್ಯಾಟದಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 25000, ದ್ವಿತೀಯ ಬಹುಮಾನ 15000, ತೃತೀಯ 10,000 ನಗದು ಬಹುಮಾನ, ಚತುರ್ಥ ಬಹುಮಾನ 10000 ಎಂದು ಹಾಗೂ ರಾಷ್ಟ್ರೀಯ ಮಟ್ಟದ ಪಂದ್ಯಾಟದಲ್ಲಿ 1,00,000 ಪ್ರಥಮ ಬಹುಮಾನ, 75000 ದ್ವಿತೀಯ ಬಹುಮಾನ,50,000 ತೃತೀಯ ಬಹುಮಾನ, 50,000 ಚತುರ್ಥ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ 25,000 ರೂ. ನಗದು ಬಹುಮಾನ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಅರ್ಧನಾರೀಶ್ವರ ಸ್ಪೋರ್ಟ್ಸ್ ಕ್ಲಬ್ (ರಿ.) ಮುಟ್ಲುಪಾಡಿ ಇದರ ಗೌವಾಧ್ಯಕ್ಷರಾದ ಗಿರೀಶ್ ಶೆಟ್ಟಿ ತೆಳ್ಳಾರ್, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಅಧ್ಯಕ್ಷರು ಜಗದೀಶ್ ಕುಂಬ್ಳೆ, ಖಜಾಂಚಿ ಸುದೀಪ್ ಅಜಿಲ, ಕಾರ್ಯದರ್ಶಿ ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಹರೀಶ್ ಶೆಟ್ಟಿ ಪಡುಕುಡೂರು ಹಾಗೂ ಉದ್ಯಮಿಗಳಾದ ಗೋಪಿನಾಥ್ ಭಟ್ ಇವರು ಉಪಸ್ಥಿತರಿದ್ದರು.
