Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಜೂ. 14ಕ್ಕೆ ರಕ್ತದಾನ ಶಿಬಿರ

ತೀರ್ಥಹಳ್ಳಿಯಲ್ಲಿ ಜೂ. 14ಕ್ಕೆ ರಕ್ತದಾನ ಶಿಬಿರ
– ರಕ್ತದಾನ ಮಾಡುವುದರ ಮೂಲಕ ರಕ್ತದಾನ ಶಿಬಿರ ಆಚರಣೆ
– ಹಲವು ಸಂಘಟನೆಗಳ ಆಯೋಜನೆ: ನೀವೂ ರಕ್ತದಾನ ಮಾಡಿ

NAMMUR EXPRESS NEWS
ತೀರ್ಥಹಳ್ಳಿ: ಶ್ರೀ ಜಯಚಾಮರಾಜೇಂದ್ರ ತಾಲ್ಲೂಕು ಆಸ್ಪತ್ರೆ, ತೀರ್ಥಹಳ್ಳಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ, ತೀರ್ಥಹಳ್ಳಿ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ತೀರ್ಥಹಳ್ಳಿ(SNGV), ಜೆ.ಸಿ.ಐ ತೀರ್ಥಹಳ್ಳಿ, ರೋಟರಿ ಕ್ಲಬ್‌, ತೀರ್ಥಹಳ್ಳಿ, ತಾಲ್ಲೂಕು ಕಾರ್ಯನಿರತ ಪರ್ತಕರ್ತ ಸಂಘ, ರೋಟರಿ IMA, ರಕ್ತನಿಧಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನ ಮತ್ತು ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ.
ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ದಿನಾಂಕ 14-06-2025 ರಂದು ಬೆಳಿಗ್ಗೆಯಿಂದ ರಕ್ತದಾನ ಶಿಬಿರ ನೆರವೇರಲಿದೆ. ರಕ್ತದಾನ ಮಾಡುವುದರಿಂದ ಆರೋಗ್ಯ ಕೂಡ ತುಂಬಾ ಸಮೃದ್ಧಿಯಾಗಿರುತ್ತದೆ. ಆದ್ದರಿಂದ ನೀವು ಕೂಡ ರಕ್ತದಾನವನ್ನ ಮಾಡಿ.
ರಕ್ತ ನೀಡಿ, ಭರವಸೆ ನೀಡಿ, ಜೊತೆಯಾಗಿ ನಾವು ಜೀವ ಉಳಿಸೋಣ ಎಂಬ ಕರೆಯನ್ನು ಮಾಡಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.