Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಪುನೀತ್ ನೆನಪಿಗೆ ರಕ್ತದಾನ!

ತೀರ್ಥಹಳ್ಳಿಯಲ್ಲಿ ಪುನೀತ್ ನೆನಪಿಗೆ ರಕ್ತದಾನ!
– ರಾಷ್ಟ್ರ ಮಟ್ಟಕ್ಕೆ ತೆರಳಿದ ಕ್ರೀಡಾಪಟುಗಳಿಗೆ ಸನ್ಮಾನ
– ಪುನೀತ್ ಬ್ರಿಗೇಡ್, ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ವಿಶ್ವ ಮಾನವ ಕನ್ನಡ ವೇದಿಕೆ, ರೋಟರಿ ಬ್ಲಡ್ ಬ್ಯಾಂಕ್ ಸಹಯೋಗ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಪುನೀತ್ ರಾಜಕುಮಾರ್ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ತೀರ್ಥಹಳ್ಳಿಯ ಪುನೀತ್ ಬ್ರಿಗೇಡ್, ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ಪುನೀತ್ ಬ್ರಿಗೇಡ್, ವಿಶ್ವ ಮಾನವ ಕನ್ನಡ ವೇದಿಕೆ ಕುಪ್ಪಳಿ ಕಲ್ಲುಕೊಡಿಗೆ ವತಿಯಿಂದ ರಕ್ತದಾನ, ರಾಷ್ಟ್ರ ಮಟ್ಟದ ಕ್ರೀಡೆಯನ್ನು ಪ್ರತಿನಿಧಿಸುತ್ತಿರುವ ರಜತ ಡಿ ( ಯೋಗಾಸನ), ಆಧ್ಯಾ ಎ. ಎಚ್, ತೇಜಸ್ ಶೆಣೈ, ಶಿಕ್ಷಕ ಮಧುರಾಜ್, ರೋಟರಿ ಬ್ಲಡ್ ಬ್ಯಾಂಕ್ ಪ್ರಮುಖರಾದ ಅರುಣ್, ಎಚ್ ಡಿ ಎಫ್ ಸಿ ಬ್ಯಾಂಕ್ ಪರವಾಗಿ ರಶ್ಮಿ, ವಿನುತಾ ಅವರನ್ನು ಗೌರವಿಸಲಾಯಿತು.
ಪುನೀತ್ ಸ್ಮರಣಾರ್ಥವಾಗಿ ಬೆಳಿಗ್ಗೆಯಿಂದ ಸಂಜೆವರೆಗೆ ರೋಟರಿ ಬ್ಲಡ್ ಬ್ಯಾಂಕ್ ತೀರ್ಥಹಳ್ಳಿಯಲ್ಲಿ ರಕ್ತದಾನ ಮಾಡಿ, ಪುನೀತ್ ಅವರಿಗೆ ಪುಷ್ಪ ನಮನ ಅರ್ಪಿಸಲಾಯಿತು. ರಕ್ತದಾನವನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಗಣೇಶ್ ಭಟ್ ಉದ್ಘಾಟನೆ ಮಾಡಿದರು.

ಸನ್ಮಾನ ಕಾರ್ಯಕ್ರಮ ಮತ್ತು ರಕ್ತದಾನಿಗಳಿಗೆ ಅಭಿನಂದನಾ ಪತ್ರವನ್ನು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷರಾದ ರೆಹಮತ್ ಉಲ್ಲಾ ಆಸಾದಿ,ಸದಸ್ಯರಾದ ಸುಶೀಲಾ ಶೆಟ್ಟಿ, ಈಡಿಗ ಸಮಾಜದ ಪ್ರಮುಖ ಮುಖಂಡರಾದ ಲಯನ್ ಪಾಂಡುರಂಗಪ್ಪ, ಸೂರ್ಯನಾರಾಯಣ ಚಿಡುವ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತಾಲೂಕು ಅಧ್ಯಕ್ಷ ವಿಶಾಲ್ ಕುಮಾರ್, ಪುನೀತ್ ಬ್ರಿಗೇಡ್, ವಿಶ್ವ ಮಾನವ ವೇದಿಕೆ ಪ್ರಮುಖರಾದ ಸುಧಾಕರ್ ಕುಪ್ಪಳಿ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೊದಲ ಶಿವು, ಶಾಲಿನಿ, ರೋಟರಿ ಮಾಜಿ ಅಧ್ಯಕ್ಷರಾದ ನಾಗರಾಜ್, ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಮುಖ್ಯಸ್ಥರಾದ ರಾಘವೇಂದ್ರ, ನಾಗೇಶ್ ಉಂಬಲೇಬೈಲು, ದಿನೇಶ್ ಯಡೂರ್, ಗಿರೀಶ್, ಶ್ರೀಕಾಂತ್,ಜಾನಪದ ಪರಿಷತ್ ಅಧ್ಯಕ್ಷರಾದ ಶಿರುಪತಿ ಮಂಜುನಾಥ್, ಪುನೀತ್ ಬ್ರಿಗೇಡ್, ವಿಶ್ವ ಮಾನವ ಕನ್ನಡ ವೇದಿಕೆ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು. ಅನೇಕರು ಸ್ವ ಪ್ರೇರಣೆಯಿಂದ ರಕ್ತದಾನ ಮಾಡಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.