Categories
ಮಲ್ನಾಡ್

ಮಲೆನಾಡ ಸಮಸ್ಯೆ ಪರಿಹರಿಸಲು ಜನಪರ ಒಕ್ಕೂಟ ಪ್ರಾರಂಭ!

ಮಲೆನಾಡ ಸಮಸ್ಯೆ ಪರಿಹರಿಸಲು ಜನಪರ ಒಕ್ಕೂಟ ಪ್ರಾರಂಭ!
– ಇನ್ನಾದರೂ ಸಮಸ್ಯೆಗೆ ಪರಿಹಾರ ಸಿಗುತ್ತಾ?

NAMMUR EXPRESS
ತೀರ್ಥಹಳ್ಳಿ : ಮಲೆನಾಡಿನಲ್ಲಿ ಹಲವಾರು ಸಮಸ್ಯೆಗಳು ಇದ್ದು ಅವೆಲ್ಲವನ್ನೂ ಪರಿಹರಿಸುವ ಸಲುವಾಗಿ ಮಲೆನಾಡ ಕರಾವಳಿ ಜನಪರ ಒಕ್ಕೂಟ ಎಂಬ ಸಮಿತಿಯೊಂದಿಗೆ ಅಕ್ಟೋಬರ್ 31 ರಂದು ಬೆಂಗಳೂರಿನ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಹೋರಾಟದ ವಿಚಾರವಾಗಿ ಸಭೆ ಇಟ್ಟುಕೊಂಡಿದ್ದೇವೆ ಎಂದು ಸುಧೀರ್ ಕುಮಾರ್ ಮುರಳ್ಳಿ ಹೇಳಿದರು.
ಭಾನುವಾರ ಪಟ್ಟಣದ ಮಯೂರ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ಮಲೆನಾಡಿನ ತೀರ್ಥಹಳ್ಳಿ, ಹೊಸನಗರ, ಕೊಪ್ಪ ಶೃಂಗೇರಿ ಸೇರಿ ಹಲವು ತಾಲೂಕುಗಳ ಸಮಸ್ಯೆಗಳು ಏಕರೂಪದಲ್ಲಿವೆ. ಭೂ ಮಂಜೂರಾತಿ ಗ್ರಾಮಪಂಚಾಯಿತಿಯ ನಿವೇಶನ ರಹಿತ ಸಮಸ್ಯೆ, ಆಟೋ ಚಾಲಕರ ಸಮಸ್ಯೆ, ಯುವಕರ ನಿರುದ್ಯೋಗ ಸಮಸ್ಯೆ, ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಾಗಿ ಹಾಕ್ಕೋತ್ತಾಯ ಹೀಗೆ ಹಲವಾರು ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಮಲೆನಾಡು ಹಾಗೂ ಕರಾವಳಿಯ ಹಲವು ಸಂಘಟನೆಗಳು ಒಗ್ಗೂಡಿ ಸಮಾಲೋಚನೆ ಸಭೆ ನೆಡೆಸಲಿದ್ದೇವೆ ಎಂದರು.

ಮಲೆನಾಡ ಭಾಗದಲ್ಲಿ ಕೃಷಿಯೇ ಜೀವಾಳ, ಇಲ್ಲಿನ ಯಾವುದೇ ಕೃಷಿಯಾದರೂ ಏಕರೂಪದಲ್ಲಿ ಇದೆ. ಹಾಗೆಯೇ ಈ ಭಾಗದ ಜನಪ್ರತಿನಿಧಿಗಳು ಕೂಡ ಏಕರೂಪದಲ್ಲಿ ಒಗ್ಗಟ್ಟಾಗಬೇಕು. ಇಲ್ಲಿ ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಿದ್ದರೂ ಉದ್ಯೋಗ ಸಮಸ್ಯೆ ಬಗೆ ಹರಿದಿಲ್ಲ. ಇನ್ನು ಇಲ್ಲಿನ ಹಲವು ಭಾಗಗಳಿಗೆ ಸೀಮಿತ ರೈಲ್ವೆ ಮಾಡುವ ಅವಶ್ಯಕತೆ ಇದೆ. ಹಾಗೂ ಈ ಭಾಗದ ಪ್ರವಾಸೋದ್ಯಮಕ್ಕೆಹೆಚ್ಚಿನ ಆದ್ಯತೆ ನೀಡಿದರೆ ಅದರಿಂದ ಎಷ್ಟೋ ಯುವಕರಿಗೆ ಉದ್ಯೋಗ ನಿರ್ಮಾಣ ಆಗಲಿದೆ ಎಂದರು.

ಕರಾವಳಿಯಲ್ಲಿ ಪಕ್ಷತೀತವಾಗಿ ಪ್ರತಿಯೊಬ್ಬರೂ ಒಗ್ಗೂಡಿ ಸಮಸ್ಯೆ ಪರಿಹಾರಕ್ಕೆ ಕೈ ಜೋಡಿಸುತ್ತಾರೆ.ಹಾಗೆಯೇ ಮಲೆನಾಡಿಗೂ ಜಾಗತಿಕ ಮನ್ನಣೆ ಪಡೆಯುವ ಕಾರಣಕ್ಕೆ ಮಲೆನಾಡಿನ ಸಮಸ್ಯೆ ಇಲ್ಲಿಗೆ ಸೀಮಿತವಾಗದೆ ಇರುವ ಕಾರಣಕ್ಕೆ
ರಾಜಧಾನಿಯಲ್ಲಿ ವಿಷಯ ಪ್ರಜ್ವಲಿಸಬೇಕೆಂದು ಈ ರೀತಿ ಒಕ್ಕೂಟ ಆರಂಭಿಸಿದ್ದೇವೆ. ಇಲ್ಲಿಯೂ ಸಹ ಪಕ್ಷತೀತವಾಗಿ ಹೋರಾಟ ನೆಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಹೊಸಕೊಪ್ಪ ಅನಿಲ್, ಕೊರೋಡಿ ಕೃಷ್ಣಪ್ಪ, ವಾಸುಕಿ, ನವೀನ್ ಕರವಾನೆ, ನೆಂಪೆ ದೇವರಾಜ್, ಹೊದಲ ಶಿವು, ಅಮರನಾಥ್ ಶೆಟ್ಟಿ, ಪೂರ್ಣೇಶ್ ಕೆಳಕೆರೆ ಸೇರಿ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.