Categories
ತೀರ್ಥಹಳ್ಳಿ

ತುಂಗಾ ನದಿಯಲ್ಲಿ ಶವ ಪತ್ತೆ!

ತುಂಗಾ ನದಿಯಲ್ಲಿ ಶವ ಪತ್ತೆ!
– ಕೊಲೆಯೋ..? ಆತ್ಮಹತ್ಯೆಯೋ..?..ಆಕಸ್ಮಿಕವೋ..?
– ಹೆದ್ದೂರು ದೋಣಿ ಕಂಡಿ ಬಳಿ ಘಟನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಹೆದ್ದೂರು ದೋಣಿ ಕಂಡಿ ಬಳಿ ಭಾನುವಾರ ಅಪರಿಚಿತನ ಶವ ಪತ್ತೆಯಾಗಿದೆ. ಹೆದ್ದೂರು ದೋಣಿ ಕಂಡಿ ಬಳಿ ನೀರಿನಲ್ಲಿ ಶವ ತೇಲುತ್ತಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಮತ್ತು ಮಾಳೂರು ಪೊಲೀಸರು ಶವ ಎತ್ತಿದ್ದಾರೆ. ಇದು ಅನಾಮಿಕ ಶವ ಎಂದು ತಿಳಿದು ಬಂದಿದೆ.

ತೀರ್ಥಹಳ್ಳಿ ಆಸ್ಪತ್ರೆಯ ಶವಾಗಾರಕ್ಕೆ ಶವ ತೆಗೆದುಕೊಂಡು ಹೋಗಲಾಗಿದೆ. ಕೊಲೆಯೋ. ಆತ್ಮಹತ್ಯೆಯೋ..? ಆಕಸ್ಮಿಕವೋ..? ಎಂಬುದು ತಿಳಿದು ಬರಬೇಕಿದೆ. ಕಳೆದ 3-4 ದಿನದಿಂದ ಮಳೆ ಹೆಚ್ಚಾಗಿದ್ದರಿಂದ ನದಿಗೆ ಆಕಸ್ಮಿಕವಾಗಿ ಯಾರೋ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.