Categories
ತೀರ್ಥಹಳ್ಳಿ

ಈಡಿಗರ ಅಭಿವೃದ್ಧಿಗೆ ಜೈ ಎಂದ ನಾಯಕರು!

ಈಡಿಗರ ಅಭಿವೃದ್ಧಿಗೆ ಜೈ ಎಂದ ನಾಯಕರು!
– ತೀರ್ಥಹಳ್ಳಿ ಈಡಿಗರ ಸಂಘದ ವಿದ್ಯಾರ್ಥಿ ನಿಲಯದ ಕಟ್ಟಡ ಉದ್ಘಾಟನೆ
– ಬಂಗಾರಪ್ಪ, ಪುನೀತ್ ಪುತ್ಥಳಿ ಅನಾವರಣ: ರೇಣುಕಾನಂದ ಶ್ರೀ ಆಶೀರ್ವಚನ
– ಕಾಗೋಡು, ಸಚಿವ ಮಧು ಬಂಗಾರಪ್ಪ, ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಬೇಳೂರು, ಆರ್. ಎಂ, ರಾಮಪ್ಪ ಸೇರಿ ಅನೇಕರು ಹಾಜರ್

NAMMUR EXPRESS NEWS
ತೀರ್ಥಹಳ್ಳಿ: ಈಡಿಗರ ಸಂಘದ ವಿದ್ಯಾರ್ಥಿ ನಿಲಯದ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಇಡೀ ಈಡಿಗ ಸಮುದಾಯದ ಹಿರಿಮೆಗೆ ಕಾರಣವಾಯಿತು. ತೀರ್ಥಹಳ್ಳಿ ಕೋಳಿಕಾಲು ಗುಡ್ಡದ ಈಡಿಗರ ಭವನದಲ್ಲಿ ನೂತನ ಹಾಸ್ಟೆಲ್, ಕಚೇರಿ, ಮಳಿಗೆ ಎಸ್ ಬಂಗಾರಪ್ಪ ಮತ್ತು ಪುನೀತ್ ರಾಜ್ ಕುಮಾರ್ ಪುತ್ಥಳಿ ಅನಾವರಣ ಮಾಡಲಾಯಿತು. ಸಮಾಜದ ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪ, ರೇಣುಕಾನಂದ ಶ್ರೀ, ಸಚಿವ ಮಧು ಬಂಗಾರಪ್ಪ, ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಬೇಳೂರು, ಆರ್. ಎಂ, ರಾಮಪ್ಪ, ಮಟ್ಟಿನಮನೆ ರಾಮಚಂದ್ರ, ನಿವೃತ್ತ ಪೊಲೀಸ್ ಅಧಿಕ್ಷಕರಾದ ಎಂ.ಜಿ ಸುಬ್ರಮಣ್ಯ, ಗೀತಾ ರಮೇಶ್ ಸೇರಿ ಅನೇಕರು ಹಾಜರ್ ಇದ್ದರು.

ಎಲ್ಲಾ ಗಣ್ಯರು ಸಂಘದ ಕೆಲಸವನ್ನು ಮೆಚ್ಚಿ ತಾವೂ ಕೂಡ ಸಹಾಯವನ್ನು ಮಾಡುವುದಾಗಿ ತಿಳಿಸಿದರು. ಈಡಿಗ ಸಮುದಾಯದ ಪ್ರಮುಖರು, ಎಲ್ಲಾ ಸಮುದಾಯದ ಸುಮಾರು 1000ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.