Categories
ತೀರ್ಥಹಳ್ಳಿ

ದನ ಕಳ್ಳತನ: ಪೊಲೀಸ್ ಇಲಾಖೆ ತನಿಖೆ ಜೋರು!

ದನ ಕಳ್ಳತನ: ಪೊಲೀಸ್ ಇಲಾಖೆ ತನಿಖೆ ಜೋರು!
– ತೀರ್ಥಹಳ್ಳಿ ಪಟ್ಟಣದ ಎರಡು ಕಡೆ ಶೋಧ
– ಅನೇಕರಿಗೆ ವಾರ್ನಿಂಗ್: ತಾಲೂಕಿನ ಎಲ್ಲೆಡೆ ಅಲರ್ಟ್

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ಇತ್ತೀಚಿಗೆ ನಡೆದ ದನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತೀರ್ಥಹಳ್ಳಿ ಪೊಲೀಸರು ಖಡಕ್ ಕ್ರಮಕ್ಕೆ ಮುಂದಾಗಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಇಂದಿರಾ ನಗರ, ಯಡೆಹಳ್ಳಿ ಕೆರೆಯ ಎರಡು ಮನೆಗಳ ಮೇಲೆ ನ್ಯಾಯಾಲಯದ ಆದೇಶ ಪಡೆದು ಡಿವೈಎಸ್ಪಿ ಗಜಾನನ ವಾಮನ ಸುತಾರ, ಇನ್ಸ್ಪೆಕ್ಟರ್ ಶಿವನಗೌಡ ಅವರ ನೇತೃತ್ವದಲ್ಲಿ ತೀರ್ಥಹಳ್ಳಿ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಅನೇಕರನ್ನು ಕರೆಸಿ ವಿಚಾರಣೆ ಕೂಡ ನಡೆಸಿದ್ದಾರೆ. ಅಲ್ಲದೆ ಮೂರು ಠಾಣಾ ವ್ಯಾಪ್ತಿಯಲ್ಲಿ ಈ ಬಗ್ಗೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.